Murder: ಉಜ್ಬೇಕಿಸ್ತಾನ್ ಬೆಡಗಿ ಬೆಂಗಳೂರಲ್ಲಿ ಮರ್ಡರ್..! ಆ ರಾತ್ರಿ ಹೋಟೆಲ್ ರೂಮ್‌ನಲ್ಲಿ ನಡೆದಿದ್ದೇನು..?

ಅವಳನ್ನ ಕೊಂದು ಶೀದಾ ಕೇರಳಗೆ ಹೋದರು..!
ವಿದೇಶದಿಂದ ಬಂದ ಲೇಡಿಗೆ ಕಟ್ಟಿದ್ರು ಚಟ್ಟ..!
ಕೆಲಸಕ್ಕೆ ಸೇರಿ ಒಂದೇ ತಿಂಗಳಿಗೆ ಜೈಲು ಸೇರಿದ್ರು..!

Share this Video
  • FB
  • Linkdin
  • Whatsapp

ಅವಳು ದೂರದ ಉಜ್ಬೇಕಿಸ್ತಾನ್(Uzbekistan) ದೇಶದವಳು. 6 ತಿಂಗಳ ಹಿಂದಷ್ಟೇ ಭಾರತಕ್ಕೆ ಬ್ಯುಸಿನೆಸ್ ಕಾರಣಕ್ಕೆ ಬಂದಿದ್ಲು. ದೆಹಲಿ ಅಲ್ಲಿ ವಾಸವಾಗಿದ್ದ ಈಕೆ 4 ದಿನಗಳ ಹಿಂದಷ್ಟೇ ಬೆಂಗಳೂರಿಗೆ(Bengaluru) ಬಂದಿದ್ಲು. ಆದ್ರೆ ಆಕೆ ಬಂದಿದ್ದ ಹೋಟೆಲ್‌ನಲ್ಲೇ ಆವತ್ತು ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ದಳು. ಹೊಟೆಲ್ ಸಿಬ್ಬಂದಿ ರೂಮ್ ಒಳಗೆ ಎಂಟ್ರಿ ಕೊಟ್ಟಾಗ ಅವಳ ಡೆಡ್ ಬಾಡಿ ಪತ್ತೆಯಾಗಿತ್ತು.. ಇನ್ನೂ ತನಿಖೆ ನಡೆಸಿದ ಪೊಲೀಸರು ಘಟನೆ ನಡೆದು 24 ಗಂಟೆಗಳಲ್ಲೆ ಬಂಧಿಸಿದ್ದರು. ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆಗೆ ಇಳಿಯುತ್ತಾರೆ. ಎಲ್ಲಾ ಸಿಸಿ ಕ್ಯಾಮರಾ ದೃಶ್ಯಗಳನ್ನ ಪರಿಶೀಲಿಸುತ್ತಾರೆ. ಆದ್ರೆ ಯಾವುದೇ ಸಾಕ್ಷ್ಯ ಸಿಗೋದಿಲ್ಲ. ಹಾಗಾದ್ರೆ ಆ ವಿದೇಶಿ ಮಹಿಳೆಯನ್ನ ಯಾರು ಕೊಂದರು ಅಂತ ತಲೆಕೆಡಸಿಕೊಳ್ತಿರುವಾಗ್ಲೆ ಪೊಲೀಸರಿಗೆ(Police) ಒಂದು ಅನುಮಾನ ಮೂಡುತ್ತೆ. ಅದೇ ಅನುಮಾನ ಹಂತಕರನ್ನ 24 ಗಂಟೆಗಳಲ್ಲಿ ಬಂಧಿಸಲು ನೆರವಾಗುವಂತೆ ಮಾಡುತ್ತೆ. ಇತ್ತೀಚೆಗಷ್ಟೇ ಹೋಟೆಲ್‌ನಲ್ಲಿ(Hotel) ಕೆಲಸಕ್ಕೆ ಸೇರಿಕೊಂಡಿದ್ರು. ಆದ್ರೆ ಕೆಲಸ ಮಾಡೋದಕ್ಕಿಂತ ಹೆಚ್ಚಾಗಿ ಬರುವ ಗ್ರಾಹಕರ ಮೇಲೆನೇ ಕಣ್ಣಿಡ್ತಿದ್ರು. ಅವರು ಬಳಸೋ ಮೊಬೈಲ್ ,ಪರ್ಸ್ ಮೇಲೆಯೇ ಕಣ್ಣಿಡ್ತಿದ್ರು. ಆದ್ರೆ ಆವತ್ತು ನಲ್ಲಿ ರಿಪೇರಿ ಅಂತಾ ಆ ಕಿರಾತಕರು ಜರೀನಾ ಇದ್ದ ರೂಮ್ ಒಳಗೆ ಹೋದವರು ಮಾಡಬಾರದ್ದನ್ನ ಮಾಡಿ ಎಸ್ಕೇಪ್ ಆಗಿದ್ರು. ಆದರೆ ಬೆಂಗಳೂರಲ್ಲಿ ಕೊಲೆ ಮಾಡಿ ಕೇರಳದಲ್ಲಿ ತಲೆ ಮರೆಸಿಕೊಂಡಿದ್ದ ಖದೀಮರನ್ನ ಖಾಕಿ ಖೆಡ್ಡಗೆ ಕೆಡವಿಕೊಂಡಿತ್ತು.

ಇದನ್ನೂ ವೀಕ್ಷಿಸಿ: ಹೆಸರೇ ಕೇಳದ ಕಂಪನಿಗಳು..ಊಹೆಗೂ ಮೀರಿದ ರಹಸ್ಯಗಳು! ಯಾವ ಪಾರ್ಟಿಗೆ ಎಷ್ಟು ಕಾಣಿಕೆ.. ಅಷ್ಟು ಕೋಟಿ ಕೊಟ್ಟಿದ್ಯಾರು..?

Related Video