ಶಿವಮೊಗ್ಗದಲ್ಲಿ ನಾಯಿ ದಾಳಿಗೆ ನಾಲ್ಕು ವರ್ಷದ ಬಾಲಕ ಸಾವು
ಶಿವಮೊಗ್ಗದಲ್ಲಿ ನಾಯಿ ದಾಳಿಗೊಳಗಾಗಿದ್ದ 4 ವರ್ಷದ ಸೈಯದ್ ಮದನಿ ಎಂಬ ಬಾಲಕ ಸಾವನ್ನಪ್ಪಿದ್ದಾನೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ದೊಣಬಘಟ್ಟದಲ್ಲಿ ನಾಯಿ ದಾಳಿಗೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಸಾವನ್ನಪ್ಪಿದ್ದಾನೆ. ಬಾಲಕನ ಮೇಲೆ ಏಳೆಂಟು ಬೀದಿ ನಾಯಿಗಳು ದಾಳಿ ಮಾಡಿವೆ. ಬಾಲಕನ ತಂದೆ ಯಂತ್ರದಲ್ಲಿ ಭತ್ತ ಕಟಾವು ಮಾಡುತ್ತಿದ್ದ, ಯಂತ್ರದ ಶಬ್ದದಿಂದ ಬಾಲಕನ ಚೀರಾಟ ತಂದೆಗೆ ಕೇಳಿಸಿರಲಿಲ್ಲ. ಇನ್ನು ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೆ ಸೈಯದ್ ಮದನಿ ಮೃತ ಪಟ್ಟಿದ್ದಾನೆ.