ಗುಜರಾತ್ ಮೊದಲ ಹಂತದ ಚುನಾವಣೆ ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ನಡೆದಿದೆ. ಆದರೆ ಕೆಲ ಭಾಗದಲ್ಲಿ ಹಿಂಸಾಚಾರ ವರದಿಯಾಗಿದೆ. ಈ ಪೈಕಿ ಬಿಜೆಪಿ ನಾಯಕನ ಮೇಲೆ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ತಲೆಗೆ ಗಾಯಗೊಂಡ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
ಅಹಮ್ಮದಾಬಾದ್(ಡಿ.01): ಗುಜರಾತ್ ಮೊದಲ ಹಂತದ ಚುನಾವಣೆಯಲ್ಲಿ 89 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ ನಡುವೆ ಬಿರುಸಿನ ಸ್ಪರ್ಧೆ ಎರ್ಪಟ್ಟಿದೆ. ಹೀಗಾಗಿ ಈ ಬಾರಿಯ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಇಂದು ನಡೆಯುತ್ತಿರುವ ಮೊದಲ ಹಂತದ ಚುನಾವಣೆ ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ನಡೆಯುತ್ತಿದೆ. ಆದರೆ ವಂಸ್ದ್ ಕ್ಷೇತ್ರದಲ್ಲಿ ಹಿಂಸಾಚರ ನಡೆದಿದೆ. ವಂಸ್ದ್ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ನಾಯಕ ಪಿಯೂಷ್ ಪಟೇಲ್ ಮೇಲೆ ಅಪರಿಚಿತರು ದಾಳಿ ನಡೆಸಿದ್ದಾರೆ. ರಸ್ತೆ ತಡೆದು ಕಲ್ಲಿನಿಂದ ಪಟೆಲ್ ಮೇಲೆ ದಾಳಿ ಮಾಡಿದ್ದಾರೆ. ಇದರಿಂದ ಪಿಯೂಷ್ ಪಟೇಲ್ ತಲೆಗೆ ಗಾಯವಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೀಗಾಗಿ ಅಪಾಯದಿಂದ ಪಾರಾಗಿದ್ದಾರೆ.
ಮೊದಲ ಹಂತದ ಮತದಾನ ಆರಂಭಕ್ಕೂ ಮುನ್ನ ಈ ಘಟನೆ ವರದಿಯಾಗಿದೆ. ವಂಸ್ದ್ ಕ್ಷೇತ್ರಕ್ಕೆ ತನ್ನ ಬೆಂಬಲಿಗರೊಂದಿಗೆ ತೆರಳಿದ ನಾಯಕ ಪಿಯೂಷ್ ಪಟೇಲ್ ಮೇಲೆ ತನ್ನದೇ ಕ್ಷೇತ್ರದಲ್ಲಿ ಅಪರಿಚಿತರು ದಾಳಿ ನಡೆಸಿದ್ದಾರೆ. ಮುಂಜಾನೆ ಪ್ರತಾಪ್‌ನಗರದಿಂದ ವಂದೆರವೆಲಾ ಗ್ರಾಮಕ್ಕೆ ಬೆಂಬಲಿಗರ ಜೊತೆ ಪಿಯೂಷ್ ಪಟೇಲ್ ತೆರಳಿದ್ದಾರೆ.
Mallikarjun Kharge: ಪ್ರಧಾನಿಗಳೇ, ನಿಮ್ಮ ಚಹಾವನ್ನು ಕನಿಷ್ಠ ಕುಡಿತಾರೆ, ನಾವು ಮಾಡಿರೋ ಚಹಾವನ್ನು ಮುಟ್ಟೋದೇ ಇಲ್ಲ!
ಕಾರಿನ ಮೂಲಕ ತೆರಳಿತ್ತಿದ್ದ ವೇಳೆ ರಸ್ತೆ ತಡೆದ ಅಪರಿಚಿತರು ಏಕಾಏಕಿ ಕಾರಿನ ಮೇಲೆ ಕಲ್ಲಿನಿಂದ ದಾಳಿ ಎಸೆದಿದ್ದಾರೆ. ಈ ದಾಳಿಯಲ್ಲಿ ಪಿಯೂಷ್ ಪಟೇಲ್ ತಲೆ ಹಾಗೂ ಭುಜಕ್ಕೆ ಕಲ್ಲು ತಾಗಿ ಗಾಯವಾಗಿದೆ. ಕಾರಿನ ಗಾಜುಗಳು ಪುಡಿ ಪುಡಿಯಾಗಿದೆ. ಬೆಂಬಿಲಿಗರು ಹರಸಾಹಸದಿಂದ ತಕ್ಷಣೇ ಕಾರನ್ನು ರಿವರ್ಸ್ ಪಡೆದು ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ತೆರಳಿ ದಾಖಲಿಸಿದ್ದಾರೆ.
ಮತದಾನ ಆರಂಭಕ್ಕೂ ಮೊದಲೇ ವಂಸ್ದ್ ಕ್ಷೇತ್ರದಿಂದ ಸ್ಪರ್ಧಿಸಿದ ಪಿಯೂಷ್ ಪಟೇಲ್ ಆಸ್ಪತ್ಪೆ ದಾಖಲಾಗಿದ್ದರು. ಇಂದು ನಡೆಯುತ್ತಿರುವ ಮೊದಲ ಹಂತದ ಮತದಾನದಲ್ಲಿ ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಸೇರಿ 39 ರಾಜಕೀಯ ಪಕ್ಷಗಳು ಸ್ಪರ್ಧೆ ಮಾಡಿದೆ. ಒಟ್ಟು 788 ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಅನುಮಾನ, ಬಾಟ್ಲಾ ಉಗ್ರರ ಪರ ಕಣ್ಣೀರು, ಮೋದಿ ಭಾಷಣಕ್ಕೆ ಕಾಂಗ್ರೆಸ್, ಆಪ್ ಕಂಗಾಲು!
ದಕ್ಷಿಣ ಗುಜರಾತ್, ಕಛ್-ಸೌರಾಷ್ಟ್ರ ಪ್ರದೇಶದಲ್ಲಿ ಬರುವ 19 ಜಿಲ್ಲೆಗಳ ವ್ಯಾಪ್ತಿಯಲ್ಲಿ ಗುರುವಾರ ಮತದಾನ ನಡೆಯುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ 89 ಕ್ಷೇತ್ರಗಳಲ್ಲಿ ಮತ್ತು ಆಪ್ 88 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಉಳಿದಂತೆ ಬಿಎಸ್‌ಪಿ 57, ಭಾರತೀಯ ಟ್ರೈಬಲ್ ಪಾರ್ಟಿ 14, ಸಮಾಜವಾದಿ ಪಕ್ಷ 12, ಎಡಪಕ್ಷಗಳು 6 ಸ್ಥಾನದಲ್ಲಿ ಸ್ಪರ್ಧಿಸಿವೆ. ಮೊದಲ ಹಂತದ ಚುನಾವಣೆಗೆ ಸ್ಪರ್ಧಿಸಿರುವ 788 ಜನರ ಪೈಕಿ 718 ಪುರುಷ ಮತ್ತು 50 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. 339 ಪಕ್ಷೇತರ ಅಭ್ಯರ್ಥಿಗಳಿದ್ದಾರೆ. 2.39 ಕೋಟಿ ಜನರು ಗುರುವಾರ ಮತದಾನ ಹಕ್ಕು ಚಲಾಯಿಸುವ ಅವಕಾಶ ಪಡೆದಿದ್ದಾರೆ.
ಡಿಸೆಂಬರ್ 5ಕ್ಕೆ ಎರಡನೇ ಹಾಗೂ ಅಂತಿಮ ಹಂತದ ಮತದಾನ ನಡೆಯಲಿದೆ. ಇನ್ನು ಡಿಸೆಂಬರ್ 8 ರಂದು ಫಲಿತಾಂಶ ಹೊರಬೀಳಲಿದೆ. 27 ವರ್ಷದಿಂದ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈ ಬಾರಿಯೂ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಇತ್ತ ಕಾಂಗ್ರೆಸ್ ಹಾಗೂ ಆಪ್ ಹೊಸ ಅಧ್ಯಾಯ ಬರೆಯಲು ಪ್ರಯತ್ನಿಸುತ್ತಿದೆ.
