ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ 25ನೇ ವಾರ್ಷಿಕೋತ್ಸವ: ಬ್ರಹ್ಮೋತ್ಸವದ ಅಂಗವಾಗಿ ಕುಂಭಮೇಳ

ಸಾಂಸ್ಕೃತಿಕ ನಗರಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ  ದತ್ತ ವೆಂಕಟೇಶ್ವರ ಕ್ಷೇತ್ರದ ‌25ನೇ ವಾರ್ಷಿಕೋತ್ಸವ ಅದ್ದೂರಿಯಾಗಿ ನೆರವೇರಿತು. 25ನೇ ವರ್ಷದ ವಾರ್ಷಿಕೋತ್ಸವದ ಜೊತೆಗೆ ಬ್ರಹ್ಮೋತ್ಸವದ ಕುಂಭಾಭಿಷೇಕ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.

Share this Video
  • FB
  • Linkdin
  • Whatsapp

ಗಣಪತಿ ಸಚ್ಚಿದಾನಂದ ಆಶ್ರಮದ(Ganapati Sachichidananda Ashram) ದತ್ತ ವೆಂಕಟೇಶ್ವರ ದೇವಾಲಯದ(Datta Venkateswara Kshetra) 25ನೇ ಬ್ರಹ್ಮೋತ್ಸವದ(Brahmotsava) ಅಂಗವಾಗಿ ಕುಂಭಮೇಳ ಜರುಗಿತು. ಕುಂಭಮೇಳದಲ್ಲಿ ಪಾಲ್ಗೊಂಡ ಗಣಪತಿ ಸಚ್ಚಿದಾನಂದ ಶ್ರೀಗಳು ನೆರದಿದ್ದ ಭಕ್ತರಿಗೆ ಆಶಿರ್ವಚನ ದಯಪಾಲಿಸಿದರು. ಕಷ್ಟಗಳು‌ ದೂರವಾಗಿ ಮಳೆ, ಬೆಳೆಯಾಗಿ ದೇಶ ಸುಭಿಕ್ಷವಾಗಲಿ. ಕ್ರೋಧ, ಮತ್ಸರ, ಕಷ್ಟ ಕೋಟಲೆಗಳು‌ ದೂರವಾಗಿ ಕಾಲ ಕಾಲಕ್ಕೆ ಮಳೆ, ಬೆಳೆಯಾಗಿ ದೇಶ ಸುಭಿಕ್ಷವಾಗಲಿ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪ್ರಾರ್ಥಿಸಿದರು. ಇದಕ್ಕೂ ಮೊದಲು ವಜ್ರೋತ್ಸವ ಯಾಗ ಮಂಟಪದಲ್ಲಿ ಪ್ರಧಾನ‌ ಯಾಗವನ್ನು‌ ನೆರವೇರಿಸಲಾಯಿತು. ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮತ್ತು ಶ್ರೀ ದತ್ತ ವಿಜಯಾನಂದ ತೀರ್ಥ‌ ಸ್ವಾಮೀಜಿಯವರು ಹೋಮಕಾರ್ಯದಲ್ಲಿ ಪಾಲ್ಗೊಂಡು‌ ಪೂರ್ಣಾಹುತಿ ಸಮರ್ಪಿಸಿದರು. ನಂತರ ಆಗಮ‌ ಪಂಡಿತರ ಸಮ್ಮುಖದಲ್ಲಿ ವಿವಿಧ ನದಿಗಳಿಂದ‌ ತರಲಾಗಿದ್ದ ಶುದ್ಧ ಜಲದಿಂದ ದೇವಾಲಯಗಳ ಶಿಖರಗಳಿಗೆ ಮಹಾ ಕುಂಭಾಭಿಷೇಕ ನೆರವೇರಿಸಲಾಯಿತು. ದೇವತಾ ಮೂರ್ತಿಗಳಿಗೆ ಬ್ರಹ್ಮಕಲಶ ಅಭಿಷೇಕ ಮಾಡಲಾಯ್ತು.

ಇದನ್ನೂ ವೀಕ್ಷಿಸಿ: ಮತ್ತೆ ತಾಯಿಯಾದ್ರಾ ನಟಿ ಆಲಿಯಾ ಭಟ್‌ ? ಆ ವಿಡಿಯೋದ ಅಸಲಿಯತ್ತೇನು ?

Related Video