ದಾವಣಗೆರೆಯಲ್ಲಿ COVID19 ಸ್ಫೋಟ: ಸೋಂಕಿತರ ಸಂಪರ್ಕವಿಲ್ಲದೆ 21 ಜನರಿಗೆ ಕೊರೋನಾ
ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಕೊರೋನಾ ಸ್ಫೋಟಗೊಳ್ಳುತ್ತಿದೆ. ಆಘಾತಕಾರಿ ವಿಚಾರವೆಂದರೆ ಸೋಂಕಿತರ ಸಂಪರ್ಕವಿಲ್ಲದೆ 21 ಕೊರೋನಾ ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ಇದು ಆತಂಕ ಹೆಚ್ಚಿಸಿದೆ.
ದಾವಣಗೆರೆ(ಮೇ 26): ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಕೊರೋನಾ ಸ್ಫೋಟಗೊಳ್ಳುತ್ತಿದೆ.
ದಾವಣಗೆರೆ ನಗರದಲ್ಲಿ ಒಟ್ಟು 125 ಪಾಸಿಟಿವ್ ಕೇಸ್ ಕಂಡು ಬಂದಿದೆ. ಆಘಾತಕಾರಿ ವಿಚಾರವೆಂದರೆ ಸೋಂಕಿತರ ಸಂಪರ್ಕವಿಲ್ಲದೆ 21 ಕೊರೋನಾ ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ಇದು ಆತಂಕ ಹೆಚ್ಚಿಸಿದೆ.
ಸುವರ್ಣ ಸ್ಪೆಷಲ್: ಚೀನಾದಲ್ಲಿ ಮಹಾದಂಗೆ..!
ದಾವಣಗೆರೆಯಲ್ಲಿ ಕಂಟೈನ್‌ಮೆಂಟ್ ಝೋನ್ ಸಂಖ್ಯೆ 14ಕ್ಕೆ ಏರಿದೆ. ದಾವಣಗೆರೆ ನಗರದಲ್ಲೇ 13 ಕಂಟೈನ್‌ಮೆಂಟ್ ಝೋನ್‌ಗಳಿವೆ. 50 ಜನರು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂಬುದು ಸಮಾಧಾನ ತಂದಿದೆ. ಆದರೆ 21 ಜನರು ರೋಗಿಯ ಸಂಪರ್ಕವಿಲ್ಲದೆ ಸೋಂಕಿತರಾಗಿರುವುದು ಆತಂಕ ಸೃಷ್ಟಿ ಮಾಡಿದೆ.