Asianet Suvarna News Asianet Suvarna News

15 ನೂತನ ಪುಸ್ತಕಗಳ ಲೋಕಾರ್ಪಣೆ: ಖ್ಯಾತ ಬರಹಗಾರ ಜೋಗಿಯಿಂದ ಪುಸ್ತಕ ರಿಲೀಸ್‌

ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದಲ್ಲಿ ಅಚ್ಚಾಗಿರುವ 15 ಪುಸ್ತಕಗಳನ್ನು ನಾಡಿನ ಖ್ಯಾತ ಬರಹಗಾರ ಜೋಗಿ ಬಿಡುಗಡೆಗೊಳಿಸಿದರು. 
 

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ, ಪುಸ್ತಕಗಳ(Books) ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದಲ್ಲಿ(Creative Pushtaka Mane Prakashan) ಅಚ್ಚಾಗಿರುವ 15 ಪುಸ್ತಕಗಳನ್ನು ನಾಡಿನ ಖ್ಯಾತ ಬರಹಗಾರ ಜೋಗಿ (Famous writer Jogi) ಬಿಡುಗಡೆಗೊಳಿಸಿದರು. ಕ್ರಿಯೇಟಿವ್ ‘ಪುಸ್ತಕ ಮನೆ ಪುಟಗಳೊಂದಿಗೆ ಪಯಣ’ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ಜೋಗಿ ಅವರು, ಸಾಹಿತ್ಯದ ಬಗ್ಗೆ ಅಭಿಮಾನ ಪ್ರಕಟಿಸುವ ಈ ಸಂಸ್ಥೆಯಲ್ಲಿ ಓದುವುದು ವಿದ್ಯಾರ್ಥಿಗಳಿಗೆ ಹೆಮ್ಮೆಯ ವಿಚಾರ ಎಂದು ಶ್ಲಾಘಿಸಿದರು. ಸ್ವತಃ ಲೇಖಕರಾಗಿರುವ ಕಾಲೇಜಿನ ಪ್ರಾಂಶುಪಾಲ ಅಶ್ವಥ್.ಎಸ್.ಎಲ್ ಅವರು ಮಾತನಾಡಿ, ನಮ್ಮ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ಜ್ಞಾನ ಹೆಚ್ಚಿಸುವ ಪುಸ್ತಕಗಳು ಲಭ್ಯವಾಗಬೇಕು ಎಂಬ ಕಾರಣಕ್ಕೆ ಕ್ರಿಯೇಟಿವ್ ಪುಸ್ತಕ ಮನೆ ಮಾಡಿದ್ದೇವೆ. ರಾಜ್ಯದ ಯಾವುದೇ ಮೂಲೆಯಲ್ಲಿ ಬಿಡುಗಡೆಯಾಗುವ ಪುಸ್ತಕಗಳು, ಸುಲಭವಾಗಿ ನಮ್ಮವರಿಗೆ ತಲುಪಬೇಕು ಎಂಬುದು ನಮ್ಮ ಆಶಯ. ಮೊಬೈಲ್ ಬಿಡಿ ಪುಸ್ತಕ ಹಿಡಿ ಯೋಜನೆ ಮುಖಾಂತರ ಗ್ರಾಮೀಣ ವಿದ್ಯಾರ್ಥಿಗಳಿಗೆ 3,000ಕ್ಕೂ ಅಧಿಕ ಪುಸ್ತಕಗಳನ್ನು  ಹಂಚಿದ್ದೇವೆ ಎಂದರು.

ಇದನ್ನೂ ವೀಕ್ಷಿಸಿ:  ಕೊರಗಜ್ಜನ ದರ್ಶನ ಪಡೆದ ಸಿಂಪಲ್ ಸ್ಟಾರ್..! ರಿಚರ್ಡ್ ಆ್ಯಂಟನಿ ಸಿನಿಮಾದಲ್ಲಿ ಬ್ಯುಸಿ ಇರೋ ರಕ್ಷಿತ್!

Video Top Stories