ಬಾತ್‌ರೂಮ್‌ನಿಂದ ಬುಸ್ ಎಂದ 14 ಅಡಿಯ ಕಾಳಿಂಗ ಸರ್ಪ
ಬಾತ್‌ರೂಮ್‌ನಿಂದ ಬುಸ್ ಬುಸ್ ಕಾಳಿಂಗ ನುಗ್ಗಿ ಬಂದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಸುಮಾರು 14 ಅಡಿ ಉದ್ದದ ಕಾಳಿಂಗವನ್ನು ನೋಡಿದರೆ ಮೈ ಜುಮ್ ಎನ್ನುತ್ತೆ. ಕರಿ ಕಪ್ಪು ಬಣ್ಣದಲ್ಲಿ ಕಾಣೋ ಕಾಳಿಂಗ ಸರ್ಪ ಬಾತ್‌ರೂಂನಿಂದ ಹೊರ ಬಂದ ರೀತಿ ನೋಡಿದರೆ ಯಾರೇ ಆದರೂ ಬೆಚ್ಚಿ ಬೀಳುತ್ತಾರೆ.
ಮಂಗಳೂರು(ಆ.28): ಬಾತ್‌ರೂಮ್‌ನಿಂದ ಬುಸ್ ಬುಸ್ ಕಾಳಿಂಗ ನುಗ್ಗಿ ಬಂದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಸುಮಾರು 14 ಅಡಿ ಉದ್ದದ ಕಾಳಿಂಗವನ್ನು ನೋಡಿದರೆ ಮೈ ಜುಮ್ ಎನ್ನುತ್ತೆ. ಕರಿ ಕಪ್ಪು ಬಣ್ಣದಲ್ಲಿ ಕಾಣೋ ಕಾಳಿಂಗ ಸರ್ಪ ಬಾತ್‌ರೂಂನಿಂದ ಹೊರ ಬಂದ ರೀತಿ ನೋಡಿದರೆ ಯಾರೇ ಆದರೂ ಬೆಚ್ಚಿ ಬೀಳುತ್ತಾರೆ.
ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು?
ಹಾವು ಹಿಡಿಯೋಕೆ ಬಂದ ವ್ಯಕ್ತಿಯೇ ಸೆಕುಂಡುಗಳ ಗ್ಯಾಪ್‌ನಲ್ಲಿ ಪಾರಾಗಿದ್ದಾರೆ. ಬಾತ್‌ರೂಂ ಒಳಗೆ ಬೃಹತ್ ಕಾಳಿಂಗ ಸರ್ಪ ಅಡಗಿಕೊಂಡಿತ್ತು. ಸರ್ರನೆ ಹೊರಗೆ ಬಂದ ಸರ್ಪ ದಾಳಿಗೆ ಮುಂದಾಗಿತ್ತು. ಹಾವು ಹಿಡಿಯೋ ಮಧ್ಯೆ ತಟ್ಟನೆ ಹಿಂದೆ ಸರಿದು ತಪ್ಪಿಸಿಕೊಂಡಿದ್ದಾರೆ ವ್ಯಕ್ತಿ.