Covid19: ಧಾರವಾಡ SDM ಕಾಲೇಜಲ್ಲಿ ಕೊರೋನಾ ಸ್ಫೋಟ: ಮತ್ತೆ 116 ವಿದ್ಯಾರ್ಥಿಗಳಿಗೆ ಪಾಸಿಟಿವ್‌

*  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಕಾಣಿಸಿಕೊಂಡ ಸೋಂಕು
*  ಆಸ್ಪತ್ರೆಯಲ್ಲಿ 3000 ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್‌ ಟೆಸ್ಟ್‌ 
*  ಮತ್ತೆ ಕೊರೋನಾ ಅಲೆ ಶುರುವಾಯ್ತಾ?
 

Share this Video
  • FB
  • Linkdin
  • Whatsapp

ಧಾರವಾಡ(ನ.26): ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಘಟನೆ ನಗರದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ಮತ್ತೆ 116 ವಿದ್ಯಾರ್ಥಿಗಳಿಗೆ ಕೋವಿಡ್‌ ಪಾಸಿಟಿವ್‌ ಆಗಿದೆ. ಈ ಮೂಲಕ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಒಟ್ಟು 182 ವಿದ್ಯಾರ್ಥಿಗಳಿಗೆ ಕೊರೋನಾ ಅಟ್ಯಾಕ್‌ ಆಗಿದೆ. ಈ ಮೂಲಕ ಕಾಲೇಜು ಸಿಬ್ಬಂದಿಯನ್ನ ಬೆಚ್ಚಿಬೀಳಿಸಿದೆ ವೈರಸ್‌. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

COVID 19 cases explode : ಬೋರ್ಡಿಂಗ್ ಶಾಲೆಯಲ್ಲಿ 33 ವಿದ್ಯಾರ್ಥಿಗಳಿಗೆ ಸೋಂಕು

ಆಸ್ಪತ್ರೆಯಲ್ಲಿ 3000 ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್‌ ಟೆಸ್ಟ್‌ ಮಾಡಲಾಗಿದೆ. ಇವರೆಲ್ಲರೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಮತ್ತೆ ಕೊರೋನಾ ಅಲೆ ಶುರುವಾಯ್ತಾ ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ಡೆಲ್ಟಾಗಿಂತಲೂ ಡೇಂಜರ್‌ ವೈರಸ್‌ ತಳಿ ಪತ್ತೆಯಾಗಿದೆ. ಹೋಯ್ತು ಅಂತಿದ್ದಂಗೆ ಮತ್ತೆ ಕೊರೋನಾ ಬಂದಿದೆ. ಜನರು ಹಳೆ ಜೀವನಕ್ಕೆ ವಾಪಸ್ಸಾಗುತ್ತಿದ್ದಂತೆ ಹೊಸ ತಳಿ ವೈರಸ್‌ ಅಬ್ಬರ ಶುರುವಾಗಿದೆ. 

Related Video