Asianet Suvarna News Asianet Suvarna News

ಲಾಡ್ ಕ್ಯಾಂಟೀನ್: ಹಸಿವು ಮುಕ್ತ ರಾಜ್ಯ ಮಾಡಲು ಪಣ ತೊಟ್ಟ ಸಂತೋಷ್ ಲಾಡ್

Oct 21, 2021, 7:46 PM IST

ಬಳ್ಳಾರಿ, (ಅ.21): ಹಸಿವು‌ ಮುಕ್ತ ರಾಜ್ಯ ಮಾಡೋ ಸಿದ್ದರಾಮಯ್ಯ ಕನಸಿಗೆ ಮಾಜಿ ಸಚಿವ ಸಂತೋಷ ಲಾಡ್ ನೀರೆರೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಯಾಕಂದ್ರೆ, ಬಳ್ಳಾರಿಯಲ್ಲಿ ಮೂರು, ಸಂಡೂರು, ಕೂಡ್ಲಿಗಿ, ಹರಪನಹಳ್ಳಿ, ಕಲಘಟಗಿ ಆಳ್ನಾವರ ಸೇರಿದಂತೆ ಒಟ್ಟು ಹತ್ತು ಕಡೆ ಕ್ಯಾಂಟಿನ್ ನಿರ್ಮಾಣ ಮಾಡೋ ಮೂಲಕ ಜನರ ಹಸಿವನ್ನು ನೀಗುವ ಕೆಲಸವನ್ನು ಮಾಡ್ತಿದ್ದಾರೆ.  ಕಳೆದ ನಾಲ್ಕು ತಿಂಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನರು ಈ ಕ್ಯಾಂಟಿನ್ ನಲ್ಲಿ ಮಧ್ಯಾಹ್ನದ ಊಟ ಮಾಡಿ ಹರಿಸಿದ್ದಾರೆ. 

ಇನ್ನೂ  ಬಳ್ಳಾರಿಯ ಎಪಿಎಂಸಿ ವೃತ್ತದಲ್ಲಿ ಹತ್ತನೇ ಕ್ಯಾಂಟಿನ್ ಉದ್ಘಾಟನೆ ಮಾಡಿದ ಸಂತೋಷ ಲಾಡ್, ಕ್ಯಾಂಟಿನ್ ನಿರ್ಮಾಣದ ಹಿಂದೆ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.