
ಕಾಮಪಾಠ ಮಾಡಲು ಬಂದ ಉಪನ್ಯಾಸಕನಿಗೆ ಬಿತ್ತು ಧರ್ಮದೇಟು..!
ಕಾಮ ಪಾಠ ಮಾಡಲು ಮುಂದಾದ ಉಪನ್ಯಾಸಕನಿಗೆ ಯುವಕರು ಧರ್ಮದೇಟು ನೀಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿಯ ಖಾಸಗಿ ವಿವಿಯಲ್ಲಿ ಘಟನೆ ನಡೆದಿದೆ. ವಿವಿಯ ಎಲೆಕ್ಟ್ರಿಕಲ್ ವಿಭಾಗದ ಉಪನ್ಯಾಸಕ ಚೆನ್ನು ಬಿರಾಜಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಉಪನ್ಯಾಸಕ.
ಕಲಬುರಗಿ(ನ.07): ಕಾಮ ಪಾಠ ಮಾಡಲು ಮುಂದಾದ ಉಪನ್ಯಾಸಕನಿಗೆ ಯುವಕರು ಧರ್ಮದೇಟು ನೀಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿಯ ಖಾಸಗಿ ವಿವಿಯಲ್ಲಿ ಘಟನೆ ನಡೆದಿದೆ. ವಿವಿಯ ಎಲೆಕ್ಟ್ರಿಕಲ್ ವಿಭಾಗದ ಉಪನ್ಯಾಸಕ ಚೆನ್ನು ಬಿರಾಜಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಉಪನ್ಯಾಸಕ. ಉಪನ್ಯಾಸಕ ಕಿರುಕುಳ ನೀಡುವ ಮಾಹಿತಿ ತಿಳಿದು ವಿದ್ಯಾರ್ಥಿನಿ ಪರವಾಗಿ ಕೆಲ ಯುವಕರು ಕಾಲೇಜಿಘೇ ಆಗಮಿಸಿ ಉಪನ್ಯಾಸಕನಿಗೆ ಧರ್ಮದೇಟು ನೀಡಿದ್ದಾರೆ.
Add Asianetnews Kannada as a Preferred Source

ಅಂಜನಾ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದ ಮಾಜಿ ಸಚಿವ
ನಂತರ ಉಪನ್ಯಾಸಕನನ್ನು ತರಗತಿ ಕೊಣೆಗೆ ತಂದು ವಿದ್ಯಾರ್ಥಿನಿಗಳ ಮುಂದೆ ಕ್ಷಮೆಯಾಚನೆ ಮಾಡುವಂತೆ ಹೇಳಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ವಿವಿ ಆಡಳಿತ ಕಾಮುಕ ಉಪನ್ಯಾಸಕ ಚೆನ್ನು ಅವರಿಗೆ ಗೇಟ್ ಪಾಸ್ ಕೊಟ್ಟಿದೆ. ಆದರೆ ಯಾವ ವಿದ್ಯಾರ್ಥಿನಿಗೆ ಉಪನ್ಯಾಸಕನಿಂದ ಕಿರುಕುಳ ಎಂಬುದು ತಿಳಿದುಬಂದಿಲ್ಲ. ಉಪನ್ಯಾಸಕನಿಗೇ ಧರ್ಮದೇಟು ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.