Asianet Suvarna News Asianet Suvarna News

CSK ಸೋಲಿನ ಬಳಿಕ ಟ್ರೋಲ್ ವಾರ್ ಬಲು ಜೋರು..! ಚೆನ್ನೈ ಫ್ಯಾನ್ಸ್ ಗಪ್‌ ಚುಪ್‌

ಮಳೆ ನಿಂತರೂ ಮಳೆ ಹನಿ ತಕ್ಷಣ ನಿಲ್ಲಲ್ಲ ಎನ್ನುವಂತೆ, ಆರ್‌ಸಿಬಿ-ಸಿಎಸ್‌ಕೆ ಪಂದ್ಯ ಮುಗಿದರೂ, ಆ ಪಂದ್ಯದ ಕ್ರೇಜ್ ಇನ್ನೂ ನಿಂತಿಲ್ಲ. ಆರ್‌ಸಿಬಿ-ಸಿಎಸ್‌ಕೆ ಮ್ಯಾಚ್ ಒಂದು ಥರ ಕರ್ನಾಟಕ-ತಮಿಳುನಾಡಿನ ಹೋರಾಟ ಎನ್ನುವಂತೆ ಬಿಂಬಿಸಲ್ಪಡುತ್ತಿದೆ.

ಬೆಂಗಳೂರು(ಅ.12): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶನಿವಾರ(ಅ.10)ದಂದು ಸಾಂಪ್ರಾದಾಯಿಕ ಎದುರಾಳಿಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ವಿರಾಟ್ ಪಡೆ ಅನಾಯಾಸವಾಗಿ ಗೆದ್ದುಕೊಂಡಿದೆ.

ಮಳೆ ನಿಂತರೂ ಮಳೆ ಹನಿ ತಕ್ಷಣ ನಿಲ್ಲಲ್ಲ ಎನ್ನುವಂತೆ, ಆರ್‌ಸಿಬಿ-ಸಿಎಸ್‌ಕೆ ಪಂದ್ಯ ಮುಗಿದರೂ, ಆ ಪಂದ್ಯದ ಕ್ರೇಜ್ ಇನ್ನೂ ನಿಂತಿಲ್ಲ. ಆರ್‌ಸಿಬಿ-ಸಿಎಸ್‌ಕೆ ಮ್ಯಾಚ್ ಒಂದು ಥರ ಕರ್ನಾಟಕ-ತಮಿಳುನಾಡಿನ ಹೋರಾಟ ಎನ್ನುವಂತೆ ಬಿಂಬಿಸಲ್ಪಡುತ್ತಿದೆ.

ಶನಿವಾರದ ಪಂದ್ಯದಲ್ಲಿ ಗೇಮ್ ಚೇಂಜರ್ಸ್ ಯಾರು..?

ಈ ಪಂದ್ಯ ಆರಂಭಕ್ಕೂ ಮುನ್ನ ಸಿಕ್ಕಾಪಟ್ಟೆ ಎರಡು ತಂಡದ ಅಭಿಮಾನಿಗಳು ಎದುರಾಳಿ ತಂಡವನ್ನು ಟ್ರೋಲ್ ಮಾಡಿದ್ದರು, ಪಂದ್ಯ ಆರ್‌ಸಿಬಿ ಗೆಲ್ಲುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳು ವಾಟ್ಸಪ್‌ನಲ್ಲಿ ಸ್ಟೇಟಸ್ ಅಪ್‌ಲೋಡ್ ಮಾಡಿ ಸಿಎಸ್‌ಕೆ ಅಭಿಮಾನಿಗಳು ತೆಪ್ಪಗೆ ಕೂರುವಂತೆ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories