Asianet Suvarna News Asianet Suvarna News

ಶನಿವಾರದ ಪಂದ್ಯದಲ್ಲಿ ಗೇಮ್ ಚೇಂಜರ್ಸ್ ಯಾರು..?

ಪಂಜಾಬ್ ಇನ್ನೇನು ಪಂದ್ಯವನ್ನು ಅನಾಯಾಸವಾಗಿ ಗೆದ್ದೇ ಬಿಟ್ಟಿತು ಎನ್ನುವಾಗಲೇ ಕೊನೆಯ ಕ್ಷಣದಲ್ಲಿ ಆದ ನಾಟಕೀಯ ಬದಲಾವಣೆಗಳು ಪಂದ್ಯದ ದಿಕ್ಕನ್ನೇ ಬದಲಿಸಿದರೆ, ಸಿಎಸ್‌ಕೆ ವಿರುದ್ಧ ನಾಯಕನ ಆಟವಾಡಿದ ಕೊಹ್ಲಿ ಆರ್‌ಸಿಬಿ ಪಾಳಯ ಗೆಲುವಿನ ಕೇಕೆ ಹಾಕುವಂತೆ ಮಾಡಿದರು.

Oct 11, 2020, 2:11 PM IST

ಬೆಂಗಳೂರು(ಅ.11): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮತ್ತೆರೆಡು ರೋಚಕ ಪಂದ್ಯಗಳಿಗೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾದರು. ಅದರಲ್ಲೂ ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಕೋಲ್ಕತ ನೈಟ್‌ ರೈಡರ್ಸ್ ನಡುವಿನ ಪಂದ್ಯ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದರೆ, ಸಿಎಸ್‌ಕೆ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ ವಿರಾಟ್ ಪಡೆ ಗೆಲುವಿನ ಕೇಕೆ ಹಾಕಿದೆ.

ಪಂಜಾಬ್ ಇನ್ನೇನು ಪಂದ್ಯವನ್ನು ಅನಾಯಾಸವಾಗಿ ಗೆದ್ದೇ ಬಿಟ್ಟಿತು ಎನ್ನುವಾಗಲೇ ಕೊನೆಯ ಕ್ಷಣದಲ್ಲಿ ಆದ ನಾಟಕೀಯ ಬದಲಾವಣೆಗಳು ಪಂದ್ಯದ ದಿಕ್ಕನ್ನೇ ಬದಲಿಸಿದರೆ, ಸಿಎಸ್‌ಕೆ ವಿರುದ್ಧ ನಾಯಕನ ಆಟವಾಡಿದ ಕೊಹ್ಲಿ ಆರ್‌ಸಿಬಿ ಪಾಳಯ ಗೆಲುವಿನ ಕೇಕೆ ಹಾಕುವಂತೆ ಮಾಡಿದರು.

ಹಾಲಿ ಚಾಂಪಿಯನ್ ಮುಂಬೈಗಿಂದು ಬಲಿಷ್ಠ ಡೆಲ್ಲಿ ಚಾಲೆಂಜ್..!

ಶನಿವಾರ(ಅ.10) ನಡೆದ ಎರಡು ಪಂದ್ಯಗಳು ಹೇಗಿದ್ದವು. ಎರಡು ಪಂದ್ಯಗಳ ಗೇಮ್‌ ಚೇಂಜರ್‌ಗಳು ಯಾರು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.