Yogi Adityanath: ಎಲ್ಲೆಲ್ಲಿ ಶುರುವಾಗಲಿದೆ ಕಾನೂನು ಕುರುಕ್ಷೇತ್ರ..? ವಿಳಾಸವಿಲ್ಲದ ಯೋಗಿಯ ಪತ್ರ ತಲುಪಿದ್ದೆಲ್ಲಿಗೆ..?

ರಾಷ್ಟ್ರದಲ್ಲಿ ಸಂಚಲನ ಮೂಡಿಸಿದ ಯೋಗಿ ಮಾತು..!
ಹಿಂದೂ ಶ್ರದ್ಧಾ ಕೇಂದ್ರಗಳನ್ನ ಮರಳಿಸುವಂತೆ ಮನವಿ..!
ಅಯೋಧ್ಯಾ ಬಳಿಕ ಮಥುರಾ ಪ್ರಸ್ತಾಪಿಸಿದ ಯುಪಿ ಸಿಎಂ..!

First Published Feb 12, 2024, 5:58 PM IST | Last Updated Feb 12, 2024, 5:58 PM IST

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್(Yogi Adityanath) ಅವರು ಅಧಿವೇಶನದಲ್ಲಿ(Session) ಹೇಳಿದ ಅದೊಂದು ಮಾತು ಭಾರಿ ಸಂಚಲನ ಸೃಷ್ಟಿಸಿದೆ. ಹಿಂದೂಗಳ ಆಧ್ಮಾತ್ಮಿಕ ಕೇಂದ್ರಗಳಾದ ಅಯೋಧ್ಯಾ(Ayodhya) ಕಾನೂನು ಹೋರಾಟದ ಮೂಲಕ ಮರಳಿ ಸಿಕ್ಕಿದೆ. ಇನ್ನು ಜ್ಞಾನವಾಪಿ ಮಂದಿರದ ಪೂಜೆಗೆ ಅವಕಾಶವನ್ನೂ ಕೋರ್ಟ್ ನೀಡಿದೆ. ಈ ಸಮಯದಲ್ಲಿ ಯೋಗಿ ಆದಿತ್ಯನಾಥ್ ಮುಸ್ಲಿಂ ಧರ್ಮಪ್ರಮುಖರಿಗೆ ಒಂದು ಸಂಧಾನ ಸೂತ್ರವನ್ನ ಸೂಚಿಸಿದ್ದಾರೆ. ಅದೇ ಮಹಾಭಾರತದ ಕಥೆ ಮೂಲಕ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಉತ್ತರ ಪ್ರದೇಶದ ಅಧಿವೇಶನದಲ್ಲಿ ಆಡಿದ ಮಾತೊಂದು ರಾಷ್ಟ್ರದ ಮೂಲೆ ಮೂಲೆಯಲ್ಲಿ ಸಂಚಲನ ಸೃಷ್ಟಿಸಿದೆ. ಹಿಂದೂಗಳ ಧಾರ್ಮಿಕ ಕೇಂದ್ರಗಳನ್ನ ಮರಳಿ ನೀಡಿ ಅನ್ನೋ ಮಾತನ್ನ ಯೋಗಿ ಸೂಚ್ಯವಾಗಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್ "ದೊಡ್ಡಣ್ಣ"ನ ವರಸೆ.. ಸಿಡಿದೆದ್ದ ಮಿತ್ರರು.. ಮೈತ್ರಿಯಿಂದ ದೂರ..!

Video Top Stories