ಕಾಂಗ್ರೆಸ್ "ದೊಡ್ಡಣ್ಣ"ನ ವರಸೆ.. ಸಿಡಿದೆದ್ದ ಮಿತ್ರರು.. ಮೈತ್ರಿಯಿಂದ ದೂರ..!

ಮೋದಿ ವಿರುದ್ಧ ಸಮರ ಸಾರಿತ್ತು 27 ಸೈನ್ಯಗಳ ಮಹಾಸೇನೆ..!
ಪಂಜಾಬ್‌ನಲ್ಲಿ ಮೈತ್ರಿ ಪಂಚರ್.. ಆಪ್ ಏಕಾಂಗಿ ಸ್ಪರ್ಧೆ..!
ಬಂಗಾಳದಲ್ಲಿ I.N.D.I.A ಮಹಾಮೈತ್ರಿಗೆ ದೀದಿ ಚೆಕ್‌ಬಂದಿ..!

Share this Video
  • FB
  • Linkdin
  • Whatsapp

ನರೇಂದ್ರ ಮೋದಿ ಅನ್ನೋ ಮದ್ದಾನೆಯನ್ನು ತಡೆಯಲು ವಿರೋಧ ಪಕ್ಷಗಳೆಲ್ಲಾ ಸೇರಿ ಒಂದು ಒಕ್ಕೂಟ ರಚಿಸಿದ್ವು. ಅದ್ರ ಹೆಸ್ರು ಇಂಡಿಯಾ ಒಕ್ಕೂಟ(INDIA alliance). ದೇಶದ ಮೂಲೆ ಮೂಲೆಗಳಿಂದ 27 ಪಕ್ಷಗಳು ಒಂದಾಗಿ, ಮೋದಿ(Narendra Modi) ವಿರುದ್ಧ ನಿಂತಿದ್ದವು. ಇದೊಂಥರಾ 27 ಅಕ್ಷೋಹಿಣಿ ಸೈನ್ಯಗಳನ್ನೊಳಗೊಂಡ ಮಹಾಸೇನೆ. ಪ್ರಧಾನಿ ಮೋದಿಯವರು ಹ್ಯಾಟ್ರಿಕ್ ಪಟ್ಟಾಭಿಷೇಕಕ್ಕೆ ರೆಡಿಯಾಗ್ತಾ ಇದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರವನ್ನು(Ram Mandir) ಉದ್ಘಾಟಿಸಿ, ಹಿಂದೂ ಸಮುದಾಯದ 500 ವರ್ಷಗಳ ಕನಸನ್ನು ನನಸಾಗಿಸಿ, ರಾಮಭಕ್ತರ ತಪಸ್ಸನ್ನು ಈಡೇರಿಸಿ, ರಾಮಾಸ್ತ್ರ ಹಿಡಿದು ಮಹಾಭಾರತ ಯುದ್ಧಕ್ಕೆ ಸಜ್ಜಾಗಿ ನಿಂತಿದ್ದಾರೆ. ಆದ್ರೆ ಸಿಂಗಲ್ ಸಿಂಹವನ್ನು ಬೇಟೆಯಾಡಲು ನಿಂತಿದ್ದ 27 ಸೈನ್ಯಗಳ ಮಹಾಘಟಬಂಧನ್ ಮೈತ್ರಿಕೂಟ ಯುದ್ಧಕ್ಕೂ ಮೊದಲೇ ಛಿದ್ರ ಛಿದ್ರವಾಗಿ ಹೋಗಿದೆ. ದೇಶದ ನಾಲ್ಕು ದಿಕ್ಕುಗಳಲ್ಲೂ ಇಂಡಿಯಾ ಒಕ್ಕೂಟ ಪಲ್ಟಿ ಹೊಡೆದಿದೆ. ಮೊದಲು ಬಂಗಾಳದ ದೀದಿ, ನಂತ್ರ ಬಿಹಾರದ ನಿತೀಶ್ ಕುಮಾರ್, ಬಳಿಕ ಉತ್ತರ ಪ್ರದೇಶದ ಅಖಿಲೇಶ್ ಯಾದವ್.. ಈಗ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಇಂಡಿಯಾ ಮೈತ್ರಿಕೂಟಕ್ಕೆ ಶಾಕ್ ಕೊಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ: ನಾನು ನಿನ್ನ ಭಕ್ತ, ಈ ಕಲ್ಲಿನಲ್ಲಿ ದರ್ಶನ ನೀಡು ಎಂದು ಬೇಡಿಕೊಂಡಿದ್ದೆ: ಅರುಣ್‌ ಯೋಗಿರಾಜ್‌

Related Video