ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಲ್ಲಿ ನೇತ್ರೋನ್ಮಿಲನ ಸೂಕ್ಷ್ಮ ಸಂಗತಿ: ರಾಮಲಲ್ಲಾ ಕಣ್ಣು ಬಿಡುವುದು ಯಾವಾಗ..?
ಭಾರತದ ಅದ್ದೂರಿ ಹಬ್ಬಕ್ಕೆ ಕೇವಲ ಎರಡು ದಿನಗಳು ಬಾಕಿ
ಒಂದು ಕಣ್ಣು ನೋವು,ಒಂಟಿಗಣ್ಣಿನಲ್ಲಿ ಮೂರ್ತಿ ಕೆತ್ತಿದ ಅರುಣ್
ರಾಮಲಲ್ಲಾ ಮೂರ್ತಿ ಕುರಿತು ಅರುಣ್ ಕುಟುಂಬದ ಮಾತು
ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾಣ ಮೂರ್ತಿ(Ram Lalla Murti) ಈಗಾಗ್ಲೇ ಗರ್ಭ ಗುಡಿ ಪ್ರವೇಶ ಮಾಡಿದೆ. ಇನ್ನೆರೆಡು ದಿನಗಳಲ್ಲಿ, ಅಂದರೆ ಬರಲಿರುವ ಸೋಮವಾರ ದೇಶವೇ ಕಾದಿರುವ ಕ್ಷಣ ಬರಲಿದೆ. ಆ ದಿನ ಭಾರತದ ಅದ್ದೂರಿ ಹಬ್ಬ ಶುರುವಾಗಲಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ(Prana Pratisthapan) ನಡೆಯಲಿದೆ. ಇದಕ್ಕಾಗಿ ಅಯೋಧ್ಯೆ(Ayodhya) ಈಗಾಗ್ಲೇ ಶೃಂಗಾರಗೊಂಡು ಸಿದ್ಧವಾಗಿ ನಿಂತಿದೆ. ಮೊನ್ನೆ ದಿನ ರಾಮಲಲ್ಲಾನ ಮೂರ್ತಿ ಪುರ ಪ್ರವೇಶವನ್ನು ಮಾಡಿತ್ತು. ರಾಮಲಲ್ಲಾ ಪುರ ಪುರಪ್ರವೇಶದ ಸುದ್ದಿ ತಿಳಿದು ಇಡೀ ದೇಶವೇ ಸಂತಸದಲ್ಲಿ ಮುಳಗಿತ್ತು. ರಾಮಲಲ್ಲಾ ಪುರ ಪ್ರವೇಶದ ನಂತರ ಪ್ರಾಣ ಪ್ರತಿಷ್ಠಾಪನೆಗೆ ಕಾತುರ ಮತ್ತಷ್ಟು ಹೆಚ್ಚಾಗಿತ್ತು. ಮೊನ್ನೆ ಪುರ ಪ್ರವೇಶ ಮಾಡಿದ್ದ ರಾಮಲಲ್ಲಾ ನಿನ್ನೆ ದೇವಸ್ಥಾನ ಗರ್ಭಗುಡಿ ಪ್ರವೇಶ ಮಾಡಿದ್ದಾನೆ. ಗರ್ಭಗುಡಿ ಪ್ರವೇಶ ಮಾಡಿದ ರಾಮಲಲ್ಲಾ ಸದ್ಯಕ್ಕೆ ಮೂಲಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡಿದ್ದಾನೆ.
ಇದನ್ನೂ ವೀಕ್ಷಿಸಿ: ಚಿಕ್ಕಬಳ್ಳಾಪುರದಲ್ಲಿದೆ ಶ್ರೀರಾಮನ ಹೆಜ್ಜೆ ಗುರುತುಗಳು..! ರಾಮಲಿಂಗೇಶ್ವರ ಬೆಟ್ಟದಲ್ಲಿ ನೆಲೆಸಿದ್ರಂತೆ ರಾಮಸೀತೆ..!