ಚಿಕ್ಕಬಳ್ಳಾಪುರದಲ್ಲಿದೆ ಶ್ರೀರಾಮನ ಹೆಜ್ಜೆ ಗುರುತುಗಳು..! ರಾಮಲಿಂಗೇಶ್ವರ ಬೆಟ್ಟದಲ್ಲಿ ನೆಲೆಸಿದ್ರಂತೆ ರಾಮಸೀತೆ..!

ಅಯೋಧ್ಯೆಯ ಶ್ರೀರಾಮನಿಗೂ ಚಿಕ್ಕಬಳ್ಳಾಪುರಕ್ಕೂ ನಂಟಿದೆ. ಮಂಡಿಕಲ್ಲು ಗ್ರಾಮದ ರಾಮಬಾಣ ಬೆಟ್ಟದಲ್ಲಿ ಶ್ರೀರಾಮನ ಕುರುಹುಗಳಿವೆ. ಅಷ್ಟೇ ಅಲ್ಲದೇ ರಾಮನಗರದ ರಾಮದೇವರ ಬೆಟ್ಟದಲ್ಲಿ ಶ್ರೀರಾಮ ಸೀತಾ ಮಾತೆಗಾಗಿ ಕೊಳ ನಿರ್ಮಿಸಿದ್ರಂತೆ. ಹಾಗಾದ್ರೆ ಚಿಕ್ಕಬಳ್ಳಾಪುರ ಹಾಗೂ ರಾಮನಗರದಲ್ಲಿ ಶ್ರೀರಾಮನ ಪಯಣ ಹೇಗಿತ್ತು ಗೊತ್ತಾ ?
 

Share this Video
  • FB
  • Linkdin
  • Whatsapp

ದೇಶದಾದ್ಯಂತ ಈಗ ಎಲ್ಲೆಡೆ ಶ್ರೀರಾಮಾನ ಜಪ ನಡೆಯುತ್ತಿದೆ. ಇನ್ನೂ ನಮ್ಮ ರಾಜ್ಯದಲ್ಲೂ ಶ್ರೀರಾಮನ(Shri Ram) ಹೆಜ್ಜೆ ಗುರುತುಗಳು ಇವೆ ಎಂಬ ಪ್ರತೀತಿ ಇದೆ. ಚಿಕ್ಕಬಳ್ಳಾಪುರ(Chikkaballapur) ತಾಲೂಕಿನ ಮಂಡಿಕಲ್ಲು ಗ್ರಾಮದ ರಾಮಬಾಣ ಬೆಟ್ಟದಲ್ಲಿ ಕೂಡ ಶ್ರೀರಾಮನ ನೆನಪುಗಳಿವೆ. ಶ್ರೀರಾಮ ಹಾಗೂ ಸೀತೆ ವನವಾಸ ಹೋದಂತಹ ವೇಳೆ ಸೀತೆಯ ತೊಡೆಯ ಮೇಲೆ ಶ್ರೀರಾಮ ಮಲಗಿರುತ್ತಾನೆ. ಆಗ ಬಂದ ಕಾಕಾಸುರ ಸೀತೆಯ ತೊಡೆಗೆ ಕುಕ್ಕುತ್ತಾನೆ. ಈ ವೇಳೆ ರಕ್ತ ಸೋರುತ್ತದೆ. ಆಗ ಶ್ರೀರಾಮನ ನಿದ್ರೆಗೆ ಭಂಗ ಬರಬಾರದೆಂಬ ಕಾರಣಕ್ಕೆ ಸೀತೆ ನೋವನ್ನು ಸಹಿಸಿಕೊಂಡು ಇರ್ತಾಳೆ. ಆದ್ರೆ ರಕ್ತ ರಾಮನ ಕಿವಿಗೆ ತಾಕಿದಾಗ ಎಚ್ಚೆತ್ತ ರಾಮ ಏನೆಂದು ನೋಡಿದಾಗ ಕಾಕಾಸುರ ಕುಟುಕಿದ್ದಾನೆಂದು ತಿಳಿದು ಕಾಕಾಸುರನ ಮೇಲೆ ಬಾಣ ಬಿಡುತ್ತಾನೆ. ಕಾಕಾಸುರ ಬಂದು ಕ್ಷೆಮೆ ಕೋರಿದಾಗ ಸುಮ್ಮನಾದ ರಾಮ ಬಾಣವನ್ನು ಎರಡು ತುಂಡು ಮಾಡಿ ಬಿಸಾಡುತ್ತಾನೆ.

ಅದ್ರಲ್ಲಿ ಒಂದು ಬಾಣ ಮಂಡಿಕಲ್ಲು ಗ್ರಾಮದ ಬೆಟ್ಟದ ಮೇಲೆ ಬೀಳುತ್ತದೆ. ಮತ್ತೊಂದು ತುಂಡು ಮಹರಾಷ್ಟ್ರದ ನಾಸಿಕ್ ನಲ್ಲಿ ಬಿದ್ದಿದೆ ಎಂಬ ಪ್ರತೀತಿ ಇದೆ.ಈಗಲು ಈ ಬಾಣವನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ ಗ್ರಾಮಸ್ಥರು.ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ನಲ್ಲರಾಳಹಲ್ಳಿ ಗ್ರಾಮದ ರಾಮಲಿಂಗೇಶ್ವರ ಬೆಟ್ಟದಲ್ಲಿ(Ramalingeswara Betta) ಕೂಡ ಶ್ರೀರಾಮನ ನೆನಪಪುಗಳಿವೆ. ರಾಮನ ಹೆಸರಿನ ಜಿಲ್ಲೆಯಾದ ರಾಮನಗರದ(Ramanagara) ರಾಮದೇವರ ಬೆಟ್ಟದಲ್ಲಿ ಪ್ರಭು ಶ್ರೀರಾಮಚಂದ್ರ ವನವಾಸವಾದ ಸಂದರ್ಭದಲ್ಲಿ ತಂಗಿದ್ದ ಎಂಬ ಪುರಾಣದ ಕಥೆ ಇದೆ. ಇನ್ನು ರಾಮನಗರಕ್ಕೆ ರಾಮನಗರ ಎಂಬ ಹೆಸರು ಬರಲು ಈ ಬೆಟ್ಟವೇ ಕಾರಣ ಎಂದು ಹೇಳಲಾಗುತ್ತಿದೆ. ಪುರಾಣದಲ್ಲಿ ರಾಮನಗರಕ್ಕೆ ಶಿವರಾಮಗಿರಿ ಎಂಬ ಹೆಸರಿತ್ತು. ರಾಮದೇವರ ಬೆಟ್ಟದಲ್ಲಿ ಶ್ರೀರಾಮ ವನವಾಸದ ಕಾಲದಲ್ಲಿ ವಿಶ್ರಾಂತಿಗೆಂದು ಇಲ್ಲಿಗೆ ಬಂದು ನೆಲೆಸಿದ್ದರು ಎಂದು ಪುರಾಣಗಳಲ್ಲಿ ಹೇಳಲಾಗ್ತಿದೆ.

ಇದನ್ನೂ ವೀಕ್ಷಿಸಿ: Today Horoscope: ಸಂಕಷ್ಟಗಳ ವಿಮೋಚನೆಗೆ ಇಂದು ಶನಿ ದೇವರಿಗೆ ಕಬ್ಬಿಣ ದಾನ ಮಾಡಿ..

Related Video