ರಾಮ ಮಂದಿರ ಉದ್ಘಾಟನೆ ಬಗ್ಗೆ ಬಾಬ್ರಿ ಅರ್ಜಿದಾರ ಇಕ್ಬಾಲ್ ಅನ್ಸಾರಿ ಹೇಳಿದ್ದೇನು ಗೊತ್ತಾ.?

ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಸಿದ್ಧವಾಗಿದೆ. ಇದೇ ವೇಳೆ ಬಾಬ್ರಿ ಮಸೀದಿ ಪರ ಅಂದು ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿ ಅವರು ಸುವರ್ಣನ್ಯೂಸ್ ಜೊತೆ ಮಾತನಾಡಿದ್ದು, ಅವರ ವಿಶೇಷ ಸಂದರ್ಶನ ಇಲ್ಲಿದೆ.

First Published Jan 18, 2024, 2:03 PM IST | Last Updated Jan 18, 2024, 2:03 PM IST

ರಾಮಮಂದಿರ ಲೋಕಾರ್ಪಣೆಗೆ ಸಿದ್ಧವಾಗಿದೆ. ಇದೇ ವೇಳೆ ಬಾಬ್ರಿ ಮಸೀದಿ ಪರ ಅಂದು ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿ ಅವರು ಸುವರ್ಣನ್ಯೂಸ್ ಜೊತೆ ಮಾತನಾಡಿದ್ದು, ಅವರ ವಿಶೇಷ ಸಂದರ್ಶನ ಇಲ್ಲಿದೆ. ಅಯೋಧ್ಯೆ ಧರ್ಮದ ನಗರಿ. ನಮ್ಮ ಕಾನೂನು ಹೋರಾಟ ಮುಗಿದಿದೆ. ತೀರ್ಪು ಬಂದು ನಾಲ್ಕು ವರ್ಷ ಆದ್ರೂ ಎಲ್ಲಿಯೂ ವಿರೋಧ ವ್ಯಕ್ತವಾಗಿಲ್ಲ, ಸುಪ್ರೀಂಕೋರ್ಟ್ ಎಲ್ಲರೂ ಒಪ್ಪುವಂತಹ ತೀರ್ಪು ಕೊಟ್ಟಿದೆ. ಹಳೇ ವಿಷಯವನ್ನ ಮರೆತು ಈಗ ಖುಷಿ ಪಡುವ ಸಮಯ, ದೇಶದ ಕೋಟ್ಯಾಂತರ ಜನ ಖುಷಿಯಲ್ಲಿದ್ದಾರೆ. ಪ್ರಧಾನಿ ನಮ್ಮ ಅಯೋಧ್ಯೆಗೆ ಬಂದ ದಿನ ನಾನೂ ಸ್ವಾಗತ ಕೋರಿದೆ. ಅಯೋಧ್ಯೆಯಲ್ಲಿ ಏರ್ಪೋರ್ಟ್, ರೈಲ್ವೇ ಸ್ಟೇಷನ್ ನಿರ್ಮಾಣವಾಗಿದೆ ಅಯೋಧ್ಯೆ ಅಭಿವೃದ್ಧಿ ಪಥದಲ್ಲಿದೆ ಇದು ಖುಷಿ ವಿಚಾರ. ಎಂದು ಸುವರ್ಣ ನ್ಯೂಸ್‌ನಲ್ಲಿ ಇಕ್ಬಾಲ್ ಅನ್ಸಾರಿ  ಮನಬಿಚ್ಚಿ ಮಾತನಾಡಿದ್ದಾರೆ.