
ಪೆಟ್ರೋಲ್ ಬಂಕ್ ಮಹಿಳಾ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಲೇಡಿ: ಇಬ್ಬರ ಜಗಳ ಬಿಡಿಸುವಲ್ಲಿ ಜನ ಸುಸ್ತೋಸುಸ್ತು..
ಬೀದಿ ನಾಯಿಗಳ ದಾಳಿ, ಜೈಲು, ಬ್ಯಾಂಕ್, ಪೆಟ್ರೋಲ್ ಬಂಕ್ ಗಳಲ್ಲಿ ನಡೆದ ಘಟನೆಗಳು, ಅಪಘಾತಗಳು ಹಾಗೂ ಕಾಡಾನೆಗಳ ಹಾವಳಿಗಳ ಸರಣಿ ವೈರಲ್ ವಿಡಿಯೋಗಳು ಇಲ್ಲಿವೆ
ಉತ್ತರ ಪ್ರದೇಶದ ಗೋರಖ್‌ಪುರದ ಪೆಟ್ರೋಲ್ ಬಂಕ್ನಲ್ಲಿ ಮಹಿಳಾ ಸಿಬ್ಬಂದಿಗೆ ಮಹಿಳೆಯೊಬ್ಬಳು ಹಿಗ್ಗಾಮುಗ್ಗಾ ಥಳಿಸಿದ್ದು, ಇವರಿಬ್ಬರ ಜಗಳ ಬಿಡಿಸುವಷ್ಟರಲ್ಲಿ ಪೊಲೀಸರು ಸುಸ್ತಾಗಿದ್ದಾರೆ. ಮನೆ ಆವರಣದಲ್ಲೇ ಆಟ ಆಡ್ತಿದ್ದ ಬಾಲಕಿ ಮೇಲೆ ನಾಯಿಗಳ ಗುಂಪು ದಾಳಿ ಮಾಡಿದ್ದು, ಬಾಲಕಿ ಕಿರುಚಾಟ ಕೇಳಿ ಓಡಿ ಬಂದ ಜನರಿಂದಾಗಿ ಬಾಲಕಿ ಬದುಕುಳಿದಿದ್ದಾಳೆ. ಜೈಲಿನಲ್ಲಿ ಪೊಲೀಸ್ ಅಧಿಕಾರಿ ಮೇಲೆ ಕಳ್ಳ ದಾಳಿ ಮಾಡಿದ್ದಾನೆ. ಸುತ್ತಿಗೆಯಿಂದ ಖಾಕಿ ತಲೆಗೆ ಹೊಡೆದು ಭೀಕರ ಹಲ್ಲೆಮಾಡಿದ ಕಳ್ಳರಿಬ್ಬರು ಜೈಲಿನಿಂದ ಎಸ್ಕೇಪ್ ಆಗಿದ್ದಾರೆ. ಇವೆಲ್ಲಾ ಘಟನೆಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವುಗಳ ಡಿಟೇಲ್ ವೀಡಿಯೋ ಇಲ್ಲಿದೆ ನೋಡಿ