Asianet Suvarna News Asianet Suvarna News

ಸಿಎಂ ಸ್ಥಾನಕ್ಕೆ ಬಂಡಾಯವೇಳ್ತಾರಾ ವಸುಂಧರಾ ರಾಜೆ? ಏಳು ಆಕಾಂಕ್ಷಿಗಳು..ಯಾರಿಗೆ ಸಿಗಲಿದೆ ಗದ್ದುಗೆ?

ಉತ್ತರ ಪ್ರದೇಶದಂತೆ ಸ್ವಾಮೀಜಿಗೆ ಒಲಿಯುತ್ತಾ ಹುದ್ದೆ?
ಉತ್ತರ ಪ್ರದೇಶ ರಾಜ್ಯಕ್ಕೆ ಸಿಎಂ ಯೋಗಿ ಆದಿತ್ಯನಾಥ್!
ರಾಜಸ್ಥಾನದಲ್ಲಿ ಬಾಬಾ ಬಾಲಕನಾಥ್ ಆಗ್ತಾರಾ ಸಿಎಂ?

ದೆಹಲಿಯಲ್ಲಿ ನಾಳೆ ಸಂಜೆ ಹೈವೋಲ್ಟೆಜ್ ಸಿಎಂ ಆಯ್ಕೆ ಸಭೆ ನಡೆಯಲಿದೆ. ಜೈಪುರದ ನಿವಾಸದಲ್ಲಿ ಮಾಜಿ ಸಿಎಂ ವಸುಂಧರಾ(Vasundhara Raje) ಸಭೆ ಕರೆದಿದ್ದು, ಇದರಲ್ಲಿ 20 ಶಾಸಕರು(MLAS) ಭಾಗಿಯಾಗಲಿದ್ದಾರೆ. ಸಿಎಂ ಸ್ಥಾನಕ್ಕೆ ವಸುಂಧರಾ ರಾಜೆ ಬಂಡಾಯವೇಳ್ತಾರೆ ಎಂದು ಸಹ ಹೇಳಲಾಗ್ತಿದೆ. ರಾಜಸ್ಥಾನ ಕೋಟೆ ಗೆದ್ದ ಬಿಜೆಪಿಗೆ(BJp)ಇದೀಗ ಸಿಎಂ ಆಯ್ಕೆ ಟೆನ್ಷನ್ ಆಗಿದೆ. ಏಳು ಆಕಾಂಕ್ಷಿಗಳು ಇದ್ದು, ಯಾರಿಗೆ ಸಿಗಲಿದೆ ಸಿಎಂ ಗದ್ದುಗೆ ಎಂಬುದು ಕುತೂಹಲಕಾರಿಯಾಗಿದೆ. ಅಚ್ಚರಿ ಅಭ್ಯರ್ಥಿಗೆ ಸಿಎಂ ಪಟ್ಟ ಕಟ್ಟುತ್ತಾ ಹೈಕಮಾಂಡ್ ಎಂಬ ಪ್ರಶ್ನೆ ಸಹ ಎಲ್ಲಾರಲ್ಲೂ ಕಾಡತೊಡಗಿದೆ. ಉತ್ತರ ಪ್ರದೇಶದಂತೆ ಸ್ವಾಮೀಜಿಗೆ ಒಲಿಯುತ್ತಾ ಹುದ್ದೆ? ರಾಜಸ್ಥಾನದಲ್ಲಿ ಬಾಬಾ ಬಾಲಕನಾಥ್ ಆಗ್ತಾರಾ ಸಿಎಂ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. 

ಇದನ್ನೂ ವೀಕ್ಷಿಸಿ:  ರೂಬಿಕ್ಸ್ ಕ್ಯೂಬ್‌ನಲ್ಲಿ ವಿದ್ಯಾರ್ಥಿಗಳ ಗಿನ್ನಿಸ್ ರೆಕಾರ್ಡ್ : ಬ್ರಿಟನ್, ಕಜಕಿಸ್ತಾನ ದಾಖಲೆ ಮುರಿದ ಉಡುಪಿ ವಿದ್ಯಾರ್ಥಿಗಳು