ಮುಗ್ಧರನ್ನ ಮುಟ್ಟಲ್ಲ..ದುಷ್ಟರನ್ನ ಬಿಡಲ್ಲ, ಗಲಭೆಕೋರರ ಮನೆಗೇ ನುಗ್ಗಿತು ಯೋಗಿ ಬುಲ್ಡೋಜರ್..!
ಅಭಿವೃದ್ಧಿ ವಿಚಾರಕ್ಕೆ ಗುಜರಾತ್ ಮಾಡೆಲ್ (Gujarat Model) ಅನ್ನೋ ಹಾಗೇ ಅಪರಾಧಿಗಳಿಗೆ ಕಠಿಣ ಶಿಕ್ಷೆ ಕೊಡುವ ವಿಚಾರಕ್ಕೆ ಇನ್ನು ಮುಂದೆ ಉತ್ತರಪ್ರದೇಶವನ್ನ, ಯೋಗಿ ಆಡಳಿತವನ್ನ ಮಾಡೆಲ್ ಅನ್ನಬಹುದು.. ಅಲ್ಲಿ ತಪ್ಪು ಮಾಡಿ ಬಚಾವ್ ಆಗೋದು ತುಂಬಾನೇ ಕಷ್ಟ ಅನ್ನೋ ಸನ್ನಿವೇಶವಿದೆ.
ಅಭಿವೃದ್ಧಿ ವಿಚಾರಕ್ಕೆ ಗುಜರಾತ್ ಮಾಡೆಲ್ (Gujarat Model) ಅನ್ನೋ ಹಾಗೇ ಅಪರಾಧಿಗಳಿಗೆ ಕಠಿಣ ಶಿಕ್ಷೆ ಕೊಡುವ ವಿಚಾರಕ್ಕೆ ಇನ್ನು ಮುಂದೆ ಉತ್ತರಪ್ರದೇಶವನ್ನ (Uttar Pradesh) ಯೋಗಿ ಆಡಳಿತವನ್ನ ಮಾಡೆಲ್ ಅನ್ನಬಹುದು.. ಅಲ್ಲಿ ತಪ್ಪು ಮಾಡಿ ಬಚಾವ್ ಆಗೋದು ತುಂಬಾನೇ ಕಷ್ಟ ಅನ್ನೋ ಸನ್ನಿವೇಶವಿದೆ. ಯಾರದ್ದೋ ಮಾತನ್ನ ಕೇಳಿಕೊಂಡು ದೊಂಬಿ ಗಲಾಟೆಯಲ್ಲಿ ಭಾಗವಹಿಸಿ ತಗಲಾಕಿಕೊಮಡರೆ ಮುಗೀತು, ಕಲ್ಲು ಎಸೆದವನ ಮನೆ ಬೀದಿಗೆ ಬಂತು ಅಂತಲೇ ಅರ್ಥ!
ಮುಕ್ತ ಸ್ವಾತಂತ್ರ ನೀಡಿದ್ದೇನೆ, ಕಲ್ಲು ತೂರಿದ ಒಬ್ಬರನ್ನೂ ಬಿಡಬೇಡಿ, ಉತ್ತರ ಪ್ರದೇಶದಲ್ಲಿ ಯೋಗಿಯ ಖಡಕ್ ಆದೇಶ!
ಪ್ರವಾದಿ ಮೊಹಮ್ಮದರಿಗೆ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ (Noopur sharma) ಮಾಡಿದ ಅವಹೇಳನ ಖಂಡಿಸಿ ಉತ್ತರ ಪ್ರದೇಶದಲ್ಲಿ ಹಿಂಸಾಚಾರ (Violence) ನಡೆಸಿದವರ ಆಸ್ತಿಪಾಸ್ತಿಗಳ ಮೇಲೆ ಸತತ 2ನೇ ದಿನವೂ ಬುಲ್ಡೋಜರ್‌ಗಳು ಗರ್ಜಿಸಿವೆ. ಪ್ರಯಾಗ್‌ರಾಜ್‌ನಲ್ಲಿ ಹಿಂಸೆಯ ‘ಮಾಸ್ಟರ್‌ಮೈಂಡ್’ ಎಂದು ಹೇಳಲಾದ ಜಾವೇದ್ ಅಹ್ಮದ್ ಅಲಿಯಾಸ್ ‘ಪಂಪ್’ ಎಂಬಾತನ ‘ಅಕ್ರಮ ಮನೆ’ಯನ್ನು ಜೆಸಿಬಿ ಬಳಸಿ ಧ್ವಂಸಗೊಳಿಸಲಾಗಿದೆ. ಈ ನಡುವೆ ಉತ್ತರಪ್ರದೇಶದ ವಿವಿಧ ಭಾಗಗಳಲ್ಲಿ ಶುಕ್ರವಾರ ಪ್ರವಾದಿ ಅವಹೇಳನ ವಿರೋಧಿಸಿ ಹಿಂಸಾಚಾರ ನಡೆಸಿದ 304 ಮಂದಿಯನ್ನು ಈವರೆಗೆ ಬಂಧಿಸಲಾಗಿದೆ. ಇವರಲ್ಲಿ ಪ್ರಯಾಗರಾಜ್‌ನ 91, ಸಹಾರನ್‌ಪುರದ 71, ಹಾಥ್ರಸ್‌ನ 51, ಅಂಬೇಡ್ಕರ್‌ನಗರ ಹಾಗೂ ಮೊರಾದಾಬಾದ್‌ನ ತಲಾ 34, ಫಿರೋಜಾಬಾದ್‌ನ 15, ಅಲಿಗಢದ 6 ಹಾಗೂ ಜಲೌನ್‌ನ ಇಬ್ಬರಿದ್ದಾರೆ.