ಆಂಧ್ರದಲ್ಲಿ ಲಡ್ಡು ಲಡಾಯಿ ಕಿಚ್ಚು, ತಿರುಪತಿ ಲಾಡುವಿನಲ್ಲಿ ದನದ ಕೊಬ್ಬು?


ಜಗನ್‌ ಮೋಹನ್‌ ರೆಡ್ಡಿ  ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಸಿದ್ದರು ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ದೇಶಾದ್ಯಂತ ರಾಜಕೀಯ ಕಿಚ್ಚೆಬ್ಬಿಸಿದೆ. ಆಣೆ ಪ್ರಮಾಣಕ್ಕೂ ಸಿದ್ಧ ಎಂದು YSR​ ಕಾಂಗ್ರೆಸ್​ ಸವಾಲು ಹಾಕಿದೆ.
 

First Published Sep 19, 2024, 11:28 PM IST | Last Updated Sep 19, 2024, 11:27 PM IST

ಬೆಂಗಳೂರು (ಸೆ.19): ಆಂಧ್ರದಲ್ಲಿ  ‘ತಿರುಪತಿ ಲಡ್ಡು’ ಲಡಾಯಿ ಬಿರುಗಾಳಿ ಎಬ್ಬಿಸಿದೆ. ‘ತಿರುಪತಿಯ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಕೆ' ಮಾಡಿದ್ದಾರೆ ಎಂದು ಸಿಎಂ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದಾರೆ.

ಜಗನ್ ಸರ್ಕಾರದ ವಿರುದ್ಧ CM ನಾಯ್ಡು ಗಂಭೀರ ಆರೋಪದ ಬೆನ್ನಲ್ಲಿಯೇ, ಇಡೀ ರಾಷ್ಟ್ರದಲ್ಲಿ ಈ ವಿಚಾರ ಸಂಚಲನ ಮೂಡಿಸಿದೆ. ಕರ್ನಾಟಕದ ಕೆಎಂಎಫ್‌ ಬದಲು ತಮಿಳುನಾಡಿನ ಕಂಪನಿಗೆ ಟಿಟಿಡಿಗೆ ತುಪ್ಪ ಪೂರೈಸುವ ಟೆಂಡರ್‌ ನೀಡಲಾಗಿತ್ತು. ಈ ಕಂಪನಿಯ ತುಪ್ಪದಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಹಾಗೂ ಹಂದಿಯ ಕೊಬ್ಬಿನ ಅಂಶಗಳು ಪತ್ತೆಯಾಗಿವೆ.

ಇದನ್ನೂ ಓದಿ: ತಿರುಪತಿ ಲಾಡು ತಯಾರಿಸಲು ದನದ ಕೊಬ್ಬು, ಮೀನೆಣ್ಣೆ ಬಳಕೆ, ಟೆಸ್ಟ್‌ ರಿಪೋರ್ಟ್‌ನಿಂದ ದೃಢ

ಈ ನಡುವೆ CM ನಾಯ್ಡು ಆರೋಪವನ್ನು ವೈಎಸ್​ಆರ್ ಕಾಂಗ್ರೆಸ್ ಅಲ್ಲಗಳೆದಿದೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ರಾ ವೈಎಸ್​ಆರ್ ಜಗನ್? ಜಗನ್ ಆಡಳಿತದಲ್ಲಿ ನಂದಿನಿ ತುಪ್ಪ ಖರೀದಿ ನಿಲ್ಲಿಸಿದ್ದೇಕೆ..?  ಎನ್ನುವ ಪ್ರಶ್ನೆಗಳು ಎದುರಾಗಿದೆ.

ಇದನ್ನೂ ಓದಿ: History Of Tirupati Laddu: 308 ವರ್ಷಗಳ ಇತಿಹಾಸದ ತಿರುಪತಿ ಲಡ್ಡುವಿಗೆ ಇದೆಂಥಾ ಅಪಚಾರ!