ಕಾಂಗ್ರೆಸ್ ವಿರುದ್ಧ 'ಕೈ'ಪ್ರಚಾರ, ಎಲ್ಲಿ..? ಯಾಕೆ..? ಪಕ್ಷದ ಗದ್ದುಗೆ ಹಾದಿಗೆ ಎದುರಾಯ್ತಾ ಕಲ್ಲು ಮುಳ್ಳು..?

ಯುದ್ಧಾರಂಭಕ್ಕೂ ಮುನ್ನವೇ ದಕ್ಕಿತ್ತು ಕಮಲಕ್ಕೆ ಗೆಲುವು!
ಹಸ್ತಪಾಳಯದ ಅಂತರ್ಯುದ್ಧ ಪದ್ಮಪಡೆಗೆ ವಿಜಯ ಸೂತ್ರ!
ಈಗ ಹೇಗಿದೆ ಗೊತ್ತಾ ಲೋಕಸಂಗ್ರಾಮದ ಅಸಲಿ ಅಖಾಡ..?

First Published Apr 30, 2024, 4:58 PM IST | Last Updated Apr 30, 2024, 4:58 PM IST

ಸಂಗ್ರಾಮದ ಹೊತ್ತಲ್ಲಿ ಕಾಂಗ್ರೆಸ್(Congress) ಪಡೆಯಲ್ಲಿ ಒಳಪೆಟ್ಟಿನ ಜಗಳ ಆರಂಭವಾದ ಹಾಗೆ ಕಾಣ್ತಾ ಇದೆ. ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಕೈ ಬಿಟ್ಟು ಕಮಲ ಹಿಡಿತಿದ್ದಾರೆ ಅತಿರಥ, ಮಹಾರಥರು. ಕಾಂಗ್ರೆಸ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರೇ ಪ್ರಚಾರ  ಮಾಡ್ತಾ ಇದಾರೆ. ಪಕ್ಷವನ್ನ ಸೋಲಿಸೋಕೆ ರಾಯಭಾರ ನಡೆಸ್ತಾ ಇದಾರೆ. ಹಾಗಾಗಿನೇ ಕಾಂಗ್ರೆಸ್ ಗದ್ದುಗೆ ಹಾದಿಗೆ ಕಲ್ಲು ಮುಳ್ಳು ಎದುರಾದ ಹಾಗೆ ಕಾಣ್ತಾ ಇದೆ.  ಮೈತ್ರಿಯೇನೋ ಕಾಂಗ್ರೆಸ್ ಪಾಲಿಗೆ ವರವಾಗಿಯೇ ಉಳಿದಿದೆ. ಆದ್ರೆ ಪಕ್ಷದೊಳಗಿದ್ದವರೇ ಅಂತರ್ಯುದ್ಧವೊಂದಕ್ಕೆ ನಾಂದಿ ಹಾಡಿದ್ದಾರೆ. ಕಾಂಗ್ರೆಸ್‌ಗೆ  ಬಿಜೆಪಿಗಿಂತಾ(BJP) ಕಾಂಗ್ರೆಸ್ ಒಳಗಿರೋರೇ ವಿಲನ್‌ಳ ಹಾಗೆ ಕಾಣೋ ಪರಿಸ್ಥಿತಿ ಎದುರಾಗಿದೆ. ಅದಕ್ಕೆ ಕಾರಣವಾಗಿರೋ ಎರಡು ಕ್ಷೇತ್ರಗಳ ಕಥೆ. ಇಡೀ ದೇಶವೇ ಈಗ ಎಲೆಕ್ಷನ್(Election) ಮೂಡ್‌ನಲ್ಲಿದೆ. ತಮ್ಮ ನೆಚ್ಚಿನ ಸಂಸದರನ್ನ ಆಯ್ಕೆ ಮಾಡೋ ಹುಮ್ಮಸ್ಸಿನಲ್ಲಿದೆ. 543 ಕ್ಷೇತ್ರಗಳು ಮತ ಕುರುಕ್ಷೇತ್ರವಾಗಿ ಬದಲಾಗಿವೆ. ಆದ್ರೆ ಇಷ್ಟ್ರಲ್ಲಿ ಅದೊಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ರಣಭೀಕರ ಆಘಾತ ಎದುರಾಯ್ತು. ಯುದ್ಧ ಶುರುವಾಗೋಕೂ ಮುನ್ನವೇ, ಆ ಕ್ಷೇತ್ರ ಬಿಜೆಪಿ ಪಾಲಾಯ್ತು. ಅದು ಸೂರತ್(Surat) ಲೋಕಸಭಾ(Lok Sabha) ಕ್ಷೇತ್ರ.

ಇದನ್ನೂ ವೀಕ್ಷಿಸಿ:  Ajith- Vijay Dance: ತಮಿಳಿನ ಟಾಪ್ ನಟರಾದ ವಿಜಯ್, ಅಜಿತ್ ಡಾನ್ಸ್: ಬಿಗ್ ಸ್ಟಾರ್ಸ್ ಒಂದಾದ್ರ ? ಫ್ಯಾನ್ಸ್‌ ಫುಲ್‌ ಕನ್ಫ್ಯೂಸ್!