Asianet Suvarna News Asianet Suvarna News

ರೈತ ಹೋರಾಟಕ್ಕೆ ತಾತ್ಕಾಲಿಕ ಗೆಲುವು, ಕೃಷಿ ಕಾಯ್ದೆಗೆ ಬ್ರೇಕ್!

ಕೃಷಿ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ದೆಹಲಿ ಹೊರ ವಲಯದಲ್ಲಿ ಪಂಜಾಬ್ ಹಾಗೂ ಹರ್ಯಾಣ ರೈತರು ನಡೆಸುತ್ತಿದ್ದ ಪ್ರತಿಭಟನೆ ಸುಪಗ್ರಿಂ ಮೆಟ್ಟಿಲೇರಿತ್ತು. ಎರಡೂ ಕಡೆಯ ವಾದ ಪ್ರತಿವಾದ ಕೇಳಿಸಿಕೊಂಡ ಸರ್ವೋಚ್ಛ ನ್ಯಾಯಾಲಯ ಸದ್ಯ ಈ ವಿವಾದಾತ್ಮಕ ಕಾಯ್ದೆಗಳಿಗೆ ಬ್ರೇಕ್ ಹಾಕಿದೆ.

Jan 12, 2021, 3:59 PM IST

ನವದೆಹಲಿ(ಜ.12):ಕೃಷಿ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ದೆಹಲಿ ಹೊರ ವಲಯದಲ್ಲಿ ಪಂಜಾಬ್ ಹಾಗೂ ಹರ್ಯಾಣ ರೈತರು ನಡೆಸುತ್ತಿದ್ದ ಪ್ರತಿಭಟನೆ ಸುಪಗ್ರಿಂ ಮೆಟ್ಟಿಲೇರಿತ್ತು. ಎರಡೂ ಕಡೆಯ ವಾದ ಪ್ರತಿವಾದ ಕೇಳಿಸಿಕೊಂಡ ಸರ್ವೋಚ್ಛ ನ್ಯಾಯಾಲಯ ಸದ್ಯ ಈ ವಿವಾದಾತ್ಮಕ ಕಾಯ್ದೆಗಳಿಗೆ ಬ್ರೇಕ್ ಹಾಕಿದೆ.

ಇಷ್ಟೇ ಅಲ್ಲದೇ ವಿಚಾರ ವಿಮರ್ಶೆ ನಡೆಸಿ ವರದಿ ನೀಡಲು ನಾಲ್ಕು ಮಂದಿ ತಜ್ಞರ ಸಮಿತಿಯನ್ನೂ ರಚಿಸಲಾಗಿದೆ. ಇವರು ನೀಡಿದ ವರದಿ ಬಳಿಕವಷ್ಟೇ ಮುಂದಿನ ತೀರ್ಪು ನೀಡಲಿದೆ ಸುಪ್ರೀಂ.