ಅಂಬಾನಿ ಮದುವೆಯನ್ನು ವಿರೋಧಿಸಿದ್ದೇಕೆ ರಾಹುಲ್ ? ಸೋನಿಯಾ, ರಾಹುಲ್ ಮದುವೆಗೆ ಹೋಗದಿರಲು ಕಾರಣವೇನು ?

ಕಾಂಗ್ರೆಸ್ ಪಕ್ಷದ ಪ್ರಮುಖ ಲೀಡರ್ಗಳು ಮದುವೆಯಲ್ಲಿ ಭಾಗಿ
ಡಿಕೆ ಶಿವಕುಮಾರ್ ಕುಟುಂಬ ಸಮೇತ ಮದುವೆಯಲ್ಲಿ ಭಾಗಿ
ಮಿತ್ರರು ಹಾಜರಾದರೂ ಮದುವೆಗೆ ಬಾರದ ರಾಹುಲ್ ಗಾಂಧಿ 

First Published Jul 16, 2024, 5:32 PM IST | Last Updated Jul 16, 2024, 5:33 PM IST

ಅನಂತ್ ಅಂಬಾನಿ ಮದುವೆ ದೇಶದ ಅತೀ ದೊಡ್ಡ ಮದುವೆ. ಈ ಮದುವೆಗೆ (Marriage) ಜಗತ್ತಿನ ಖ್ಯಾತರು ಮತ್ತು ದೇಶದ ಪ್ರಮುಖರು ಭಾಗಿಯಾಗಿದ್ದಾರೆ. ಆದ್ರೆ ಆಹ್ವಾನಿಸಿದರೂ ಸೋನಿಯಾ ಗಾಂಧಿ (Sonia Gandhi) ಮತ್ತು ರಾಹುಲ್ ಗಾಂಧಿ (Rahul Gandhi) ಮದುವೆ ಹಾಜರಾಗಿಲ್ಲ. ಆದ್ರೆ ರಾಹುಲ್ ಮಿತ್ರರೆಲ್ಲ ಅಂಬಾನಿ ಮದುವೆಯಲ್ಲಿ ಭಾಗಿಯಾಗಿದ್ದಾರೆ. ದೇಶದ ಅತ್ಯಂತ ಅದ್ದೂರಿ ಮತ್ತು ದುಬಾರಿ ಮದುವೆ ನಡೆಯಿತು. ಮುಖೇಶ್ ಅಂಬಾನಿ (Mukesh Ambani) ಕುಟುಂಬದ ಕುಡಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಮದುವೆಗೆ ಜಗತ್ತಿನಾದ್ಯಂತ ಗಣ್ಯರು ಹಾಝರಾಗಿದ್ದರು. ದೇಶದಲ್ಲಿನ ಪ್ರತಿ ರಂಗದ ಗಣ್ಯರು ಈ ಮದುವೆಯಲ್ಲಿದ್ದರು. ಹಾಗೆನೇ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು, ದೇಶದ ರಾಜಕೀಯ ಪ್ರಮುಖ ನಾಯಕರು ಈ ಮದುವೆಗೆ ಹಾಜರಾಗಿದ್ದರು. ಅನಂತ್ ಅಂಬಾನಿ ಮದುವೆಗೆ ಎಲ್ಲ ರಾಜಕೀಯ ಪಕ್ಷದ ಮುಖಂಡರು ಹಾಜರಾಗಿದ್ದರು. ಆದ್ರೆ ಸೋನಿಯಾ ಮತ್ತು ರಾಹುಲ್ ಗಾಂಧಿ ಅಂಬಾನಿ ಮದುವೆಗೆ ಹಾಜರಾಗಿರಲಿಲ್ಲ. ರಾಹುಲ್ ಕುಟುಂಬ ಮದುವೆಗೆ ಹಾಜರಾಗದೇ ಇರೋದಕ್ಕೆ ಮದುವೆಯಲ್ಲೂ ರಾಜಕೀಯಾನಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್(Congress) ಪಕ್ಷದ ಲೀಡರ್ ರಾಹುಲ್ ಗಾಂಧಿಗೆ ಅಂಬಾನಿಯನ್ನು ಕಂಡ್ರೆ ಆಗಿ ಬರೋದಿಲ್ಲ. ಕೇವಲ ಅಂಬಾಣಿ ಮಾತ್ರವಲ್ಲ, ಅದಾನಿಯನ್ನು ಕಂಡ್ರೂ ರಾಹುಲ್ಗೆ ಆಗಿ ಬರೋದಿಲ್ಲ. ಸಮಯ ಸಿಕ್ಕಾಗಲೆಲ್ಲ ರಾಹುಲ್ ಅಂಬಾನಿ ಮತ್ತು ಅದಾನಿಯನ್ನು ಬೈಕೊಳ್ತಾನೇ ಇರ್ತಾರೆ. ಅದಾನಿ ಅಂಬಾನಿಯನ್ನು ಅಷ್ಟು ಎತ್ತರಕ್ಕೆ ಬೆಳೆಸಿದ್ದೇ ಮೋದಿ, ಮೋದಿ (Narendra Modi) ತಮ್ಮ ಸರ್ಕಾರದಿಂದ ಆ ಇಬ್ಬರಿಗೂ ದುಡ್ಡು ಕೊಡುತ್ತಾರೆ, ದೇಶದ ಬಡವರ ದುಡ್ಡನ್ನು ಕಿತ್ತು ಆ ಇಬ್ಬರಿಗೂ ಕೊಡುತ್ತಾರೆ, ಮೋದಿ ಬೆಳೆಯಲು ಆ ಇಬ್ಬರಿಗೆ ಮಾತ್ರ ಅವಕಾಶ ಕೊಡುತ್ತಾರೆ. ಹೀಗಾಗಿ ಹೋದಲ್ಲಿ ಬಂದಲ್ಲೆಲ್ಲ ರಾಹುಲ್ ಗಾಂಧಿ ಅದಾನಿ ಮತ್ತು ಅಂಬಾನಿ ಬಗ್ಗೆ ಮಾತ್ನಾಡುತ್ತಲೇ ಇರುತ್ತಾರೆ.

ಇದನ್ನೂ ವೀಕ್ಷಿಸಿ:  Donald Trump: ಟ್ರಂಪ್ ಕೊಲೆಗೆ ಸಂಚು ರೂಪಿಸಿದ್ದು ಯಾರು..? ಬೆಚ್ಚಿಬೀಳಿಸುವಂತಿದೆ ಹಂತಕನ ಹಿಸ್ಟರಿ!

Video Top Stories