Donald Trump: ಟ್ರಂಪ್ ಕೊಲೆಗೆ ಸಂಚು ರೂಪಿಸಿದ್ದು ಯಾರು..? ಬೆಚ್ಚಿಬೀಳಿಸುವಂತಿದೆ ಹಂತಕನ ಹಿಸ್ಟರಿ!

ಹಿರಿಯಣ್ಣನ ನೆಲದಲ್ಲಿ ಹತ್ಯಾ ಪ್ರಯತ್ನ..!
ಚುನಾವಣೆ ಹೊತ್ತಲ್ಲಿ ಟ್ರಂಪ್ ಮೇಲೆ ದಾಳಿ!
ನಿಜವಾಗುತ್ತಾ ಟ್ರಂಪ್ ಕೊಟ್ಟ ವಾರ್ನಿಂಗ್..?
 

Share this Video
  • FB
  • Linkdin
  • Whatsapp

ತನ್ನನ್ನ ತಾನು ದೊಡ್ಡ ದೇಶ ಅಂತ ಕರೆದುಕೊಳ್ಳೋ ಖಯಾಲಿ, ಅಮೆರಿಕಾಗೆ (America) ಅದ್ಯಾವಾಗಿಂದಲೋ ಅಂಟಿಕೊಂಡುಬಿಟ್ಟಿದೆ. ಆದ್ರೆ ಈಗ ಆ ದೇಶಕ್ಕೆ ಹಿಡಿದಿದ್ದ ಭ್ರಮೆ ದೂರ ಸರಿಯೋ ಟೈಮ್ ಬಂದಂತಾಗಿದೆ. ಮಾಜಿ ಅಧ್ಯಕ್ಷ, ಮುಂದಿನ ಅಧ್ಯಕ್ಷೀಯ ಚುನಾಚಣಾ(Election) ಅಭ್ಯರ್ಥಿ, ಡೊನಾಲ್ಡ್ ಟ್ರಂಪ್ (Donald Trump) ಮೇಲೆ ಹಾಡುಹಗಲೇ ದಾಳಿ ನಡೆದಿದೆ. ಜೀವ ತೆಗೆಯೋಕೆ ಗುಂಡು ಧಾವಿಸಿ ಬಂದಿದೆ. ಅದೃಷ್ಟವಶಾತ್ ಟ್ರಂಪ್ ಪಾರಾದ್ರು ಸರಿ. ಅಮೆರಿಕಾದಲ್ಲೀಗ ಬಿರುಗಾಳಿ, ಚುನಾವಣಾ ಬಿರುಗಾಳಿ ಅಧ್ಯಕ್ಷ ಗಾದಿಯಲ್ಲಿ ಕೂತು ಅಧಿಕಾರ ಮುಂದುವರೆಸೋ ಆಸೆಯಲ್ಲಿ ಜೋ ಬೈಡನ್(Joe Biden). ಬೈಡನ್ ಆಡಳಿತಕ್ಕೆ ಬ್ರೇಕ್ ಹಾಕಿ, ಮತ್ತೊಮ್ಮೆ ಅಧಿಕಾರ ಹಿಡಿಯೋ ಕನಸು ಕಾಣ್ತಾ ಇರೋ ಡೊನಾಲ್ಡ್ ಟ್ರಂಪ್. ಈ ಇಬ್ಬರ ನಡುವೆ ಅಕ್ಷರಶಃ ಘೋರಕದನವೇ ಶುರುವಾಗಿದೆ. ಆ ಕದನದ ನಡುವೆಯೇ, ಅತಿ ಭೀಕರ ಸುಂಟರಗಾಳಿ. ಸಾವಿನ ಸಂಚಿನ ಸುಂಟರಗಾಳಿ ಭುಗಿಲೆದ್ದಿದೆ. ಡೊನಾಲ್ಡ್ ಟ್ರಂಪ್.. ಅಮೆರಿಕಾದ ಅಧ್ಯಕ್ಷ ಹುದ್ದೆಯಲ್ಲಿದ್ದ ವೆರಿ ಬಿಗ್ ಬ್ಯುಸಿನೆಸ್ಮನ್. ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ರು. ನೆರೆದಿದ್ದ ನೂರಾರು ಜನರನ್ನುದ್ದೇಶಿಸಿ ಭಾಷಣ ಮಾಡ್ತಾ ಇದ್ರು. ಅವರ ಮೇಲೆ ಗುಂಡಿನ ದಾಳಿ ನಡೆದಿದೆ.

ಇದನ್ನೂ ವೀಕ್ಷಿಸಿ: ಅವಳದ್ದು ಕೊಲೆಯೋ ಆತ್ಮಹತ್ಯೆಯೋ..? ರೀಲ್ಸ್‌ನಲ್ಲಿ ಲವ್ ರಿಯಲ್‌ನಲ್ಲಿ ಮರ್ಡರ್..!

Related Video