Asianet Suvarna News Asianet Suvarna News

ಕ್ರೌರ್ಯದ ಪರಮಾವಧಿಯನ್ನ ಕಂಡಿರಾ..?: ಅತ್ಯಾಚಾರ..ಹತ್ಯೆ..ಕಿರುಕುಳಕ್ಕೆ ಕೊನೆ ಯಾವಾಗ..?

ರಕ್ತದ ಮಡುವಿನಲ್ಲಿ ಕರುಳು ಹಿಂಡುವ ಕಥೆಗಳು
ಮಾಜಿ ಯೋಧನ ಎದುರೇ ಪತ್ನಿಯ ಅತ್ಯಾಚಾರ
ವೃದ್ಧೆಯ ಸಜೀವ ದಹನ ಮಾಡಿದ ದುರುಳರು

ಮಣಿಪುರದಲ್ಲಿ ದಿನೇ ದಿನೇ ದೌರ್ಜನ್ಯಗಳ ಸುದ್ದಿ ಸದ್ದು ಮಾಡುತ್ತಿದೆ. ಇಡೀ ರಾಜ್ಯವೇ ಹೊತ್ತಿ ಉರಿತಾ ಇದೆ. ದ್ವೇಷದ ಬೆಂಕಿ ಮನುಕುಲವೇ ನಾಚುವಂತೆ ಮಾಡ್ತಿದೆ. ಕ್ರೌರ್ಯದ ಉತ್ತುಂಗ ಪುಟ್ಟ ರಾಜ್ಯದಲ್ಲಿ ಕಾಣಿಸ್ತಾ ಇದೆ. ಅದರ ಬೆನ್ನಲ್ಲೇ ಕರುಳು ಹಿಂಡುವ ಕಥೆಗಳು ಕಾಣ ಸಿಕ್ತಿವೆ. ಮಣಿಪುರ ಅಕ್ಷರಷಃ ಕ್ರೌರ್ಯದ ಜ್ವಾಲೆಗೆ ಸಿಕ್ಕಿ ಬೆಂದು ಹೋಗ್ತಾ ಇದೆ. ಮನುಷ್ಯತ್ವ ಹಾಗೂ ಮಣಿಪುರ(Manipura) ಒಂದೇ ಅಕ್ಷರದಿಂದ ಶುರುವಾದ್ರೂ ಕೂಡ ಅವರೆಡಕ್ಕೂ ಸಂಬಂಧವೇ ಇಲ್ಲ ಅನ್ನೋ ಥರದಲ್ಲಿ ಇರೋದು ವಿಧಿಯ ವಿಪರ್ಯಾಸ. ಒಂದೇ ಒಂದು ಘಟನೆಯಿಂದ ಮಣಿಪುರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಬಿಡ್ತು. ಅತ್ಯಂತ ಹೀನ ಹಾಗೂ ಪೈಶಾಚಿಕ ಕೃತ್ಯದಿಂದ ನಾಗರಿಕ ಸಮಾಜ ತಲೆ ತಗ್ಗಿಸೋ ಥರ ಆಗಿ ಬಿಡ್ತು. ಬುಡಕಟ್ಟು ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನ(Women) ವಿವಸ್ತ್ರಗೊಳಿಸಿ ಅತ್ಯಾಚಾರವೆಸಗಿದ(Rape) ಕೃತ್ಯದಿಂದ ಇಡೀ ಭಾರತ ತಲ್ಲಣವಾಗಿತ್ತು. ಎಷ್ಟರ ಮಟ್ಟಿಗೆ ಅಂದ್ರೆ ಪ್ರಧಾನಿ ನರೇಂದ್ರ(PM Modi) ಮೋದಿಯವರಯ ಕೂಡ ಇದೊಂದು ಕೃತ್ಯವನ್ನ ಗಂಭೀರವಾಗಿ ತಗೊಂಡು ತನಿಖೆಗೆ ಆಗ್ರಹಿಸಿದ್ರು.

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್‌ನಲ್ಲಿ ಮೂಲ VS ವಲಸಿಗ ಫೈಟ್‌: ಹರಿಪ್ರಸಾದ್‌ ಮಾತಿಗೆ ಮೂಲ ಕಾಂಗ್ರೆಸ್ಸಿಗರ ಬೆಂಬಲ..!

Video Top Stories