84 ಸೆಕೆಂಡ್‌ಗಳ ವಿಶೇಷ ಮುಹೂರ್ತದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ..! 84 ಸೆಕೆಂಡ್‌ಗಳ ಶುಭ ಮುಹೂರ್ತದ ವಿಶೇಷತೆ ಏನ್ ಗೊತ್ತಾ..?

ಪ್ರಾಣ ಪ್ರತಿಷ್ಠಾಪನೆಯ ಆತಿಥ್ಯ ವಹಿಸಲಿದ್ದಾರೆ ಪ್ರಧಾನಿ ಮೋದಿ..!
ಭವ್ಯ ಮಂದಿರದಲ್ಲಿ ವಿರಾಜಮಾನನಾಗಲಿದ್ದಾನೆ ಶ್ರೀರಾಮಚಂದ್ರ..!
ಜನವರಿ 22ಕ್ಕೆ ದೇಶಾದ್ಯಂತ ರಾಮಜ್ಯೋತಿ ಬೆಳಗಲು ಮೋದಿ ಕರೆ..!

First Published Dec 31, 2023, 2:46 PM IST | Last Updated Dec 31, 2023, 2:46 PM IST

500 ವರ್ಷಗಳ ಕನಸು.. ಕೋಟಿ ಕೋಟಿ ರಾಮಭಕ್ತರ ತಪಸ್ಸು.. ಶತಮಾನಗಳ ಕಾಯುವಿಕೆ ಅಂತ್ಯಗೊಳ್ಳುವ ದಿನ ಹತ್ತಿರ ಬರ್ತಾ ಇದೆ. ಜನವರಿ 22ಕ್ಕೆ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ(Ayodhya) ರಾಮಮಂದಿರ(Ram Mandir) ಲೋಕಾರ್ಪಣೆ. ಭವ್ಯ ದಿವ್ಯ ನವ್ಯ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ ಬಾಲ ರಾಮನ ವಿಗ್ರಹ. ರಾಮ ಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಫಿಕ್ಸ್ ಆಗಿದೆ 84 ಸೆಕೆಂಡ್'ಗಳ ವಿಶೇಷ ಮುಹೂರ್ತ. ಶ್ರೀರಾಮ ಆದರ್ಶದ ಸಂಕೇತ, ಶ್ರೀರಾಮ ಸಮಾನತೆಯ ಸಂಕೇತ, ಶ್ರೀರಾಮ ಪರಂಪರೆಯ ಸಂಕೇತ, ಶ್ರೀರಾಮ ಸರ್ವ ಶ್ರೇಷ್ಠತೆಯ ಸಂಕೇತ. ಮರ್ಯಾದಾ ಪುರುಷೋತ್ತಮ, ರಘುಕುಲ ತಿಲಕ, ಸೂರ್ಯವಂಶದ ಸೂರ್ಯ ಶ್ರೀರಾಮಚಂದ್ರ ಅಯೋಧ್ಯೆಯಲ್ಲಿ ಪುನರ್'ಪ್ರತಿಷ್ಠೆಯಾಗೋ ಕಾಲ ಹತ್ತಿರ ಬರ್ತಾ ಇದೆ. ಕೋಟ್ಯಂತರ ಭಾರತೀಯರ ಶತ ಶತಮಾನಗಳ ಕನಸು ಸಾಕಾರಗೊಳ್ಳಲು ಕ್ಷಣಗಣನೆ ಶುರುವಾಗಿದೆ. ಜನವರಿ 22, 2024.ಆ ದಿನ ಯಾವಾಗ ಬರುತ್ತೋ, ಯಾವಾಗ ಆ ಶುಭಮುಹೂರ್ತ ಸಂಭವಿಸುತ್ತೋ, ಯಾವಾಗ ಆ ಭವ್ಯ ದರ್ಶನ ನಮ್ಮದಾಗುತ್ತೋ ಅಂತ ಕೋಟಿಗಟ್ಟಲೆ ಹಿಂದೂಗಳು ಕಾಯ್ತಾ ಇದಾರೆ. ಯಾಕಂದ್ರೆ, ಆ ಶುಭದಿನವೇ, ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ.ಜನವರಿ 22ಕ್ಕೆ ಸಾಕಾರಗೊಳ್ಳಲಿರೋದು ಸುದೀರ್ಘ 500 ವರ್ಷಗಳ ಕನಸು. ಅವತ್ತು ಶ್ರೀರಾಮಚಂದ್ರನ ಮೂರ್ತಿ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರೋ ದಿನ. ಆ ದಿನವನ್ನು ದೇಶಾದ್ಯಂತ ದೀಪಾವಳಿಯಂತೆ ಆಚರಿಸ್ಬೇಕು ಅಂತ ಪ್ರಧಾನಿ ನರೇಂದ್ರ ಮೋದಿ(Narendra Modi) ಕರೆ ಕೊಟ್ಟಿದ್ದಾರೆ. ಅಯೋಧ್ಯೆಯಲ್ಲಿ ಶನಿವಾರ ವಾಲ್ಮೀಕಿ ಮಹರ್ಷಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮೋದಿ, ಜನವರಿ 22ರಂದು ಮನೆ ಮನೆಯಲ್ಲೂ ರಾಮಜ್ಯೋತಿ ಬೆಳಗುವಂತೆ ಮನವಿ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  Theft in Tumakuru: ಚಳಿ ಇದೆ ಅಂತ ಬೆಚ್ಚಗೆ ಮಲಗಿದರೆ ಹುಷಾರ್..! ಚಿನ್ನ ದೋಚಲು ಬರುತ್ತಿದ್ದಾರೆ ಚಳಿಗಾಲದ ಕಳ್ಳರು..!