Asianet Suvarna News Asianet Suvarna News

Theft in Tumakuru: ಚಳಿ ಇದೆ ಅಂತ ಬೆಚ್ಚಗೆ ಮಲಗಿದರೆ ಹುಷಾರ್..! ಚಿನ್ನ ದೋಚಲು ಬರುತ್ತಿದ್ದಾರೆ ಚಳಿಗಾಲದ ಕಳ್ಳರು..!

ಒಂದೇ ಏರಿಯಾದಲ್ಲಿ 2 ಬಾರಿ ಕಳ್ಳತನ ಮಾಡಲು ಬಂದಿದ್ರು..!
2ನೇ ಬಾರಿಗೆ ಅವರು ಸ್ಥಳೀಯರಿಂದಲೇ ತಗ್ಲಾಕಿಕೊಂಡರು..! 
ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಚಿನ್ನ ಮಂಗಮಾಯ..!

ಅದೊಂದು ಖತರ್ನಾಕ್ ಗ್ಯಾಂಗ್. ದೂರದ ಉತ್ತರ ಪ್ರದೇಶವೇ ಅವರ ಮೂಲ. ಆದ್ರೆ ಚಳಿಗಾಲ ಬಂದ್ರೆ ಮುಗೀತು ಬಸ್ ಹತ್ತಿಕೊಂಡು ಕರ್ನಾಟಕಕ್ಕೆ(Karnataka) ಎಂಟ್ರಿ ಕೊಟ್ಟುಬಿಡ್ತಾರೆ. ಇನ್ನೂ ಇಲ್ಲಿಗೆ ಬರುವ ಅವರಿಗೆ ಚಿನ್ನದ ಅಂಗಡಿಗಳೇ(Gold shops) ಟಾರ್ಗೆಟ್. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅಂಗಡಿಯಲ್ಲಿದ್ದ ಆಭರಣಗಳು ಮಂಗಮಾಯ. ಆದ್ರೆ ಹೀಗೆ ವರ್ಷಗಳ ಕಾಲ ಕರ್ನಾಟಕದ ಜ್ಯುವೆಲರಿ ಅಂಗಡಿಗಳನ್ನ ದೋಚುತ್ತಿದ್ದ ಕಿಲಾಡಿ ಗ್ಯಾಂಗ್ ಇವತ್ತು ಪೊಲೀಸರಿಗೆ(Police) ಸಿಕ್ಕಿಬಿದ್ದಿದೆ. ಇವರನ್ನ ವಿಚಾರಣೆ ನಡೆಸಿದಾಗಲೇ ನೋಡಿ ಈ ಗ್ಯಾಂಗ್ನ ಡೆಡ್ಲಿ ಆಪರೇಷನ್ಗಳು ಹೊರಬಿದ್ದಿದ್ದು. 4 ದಿನಗಳ ಅಂತರದಲ್ಲಿ ಎರಡು ಅಂಗಡಿಗಳನ್ನ ಒಂದೇ ಏರಿಯಾದಲ್ಲಿ ಕಳ್ಳತನ ಮಾಡೋದಕ್ಕೆ ಬಂದಿದ್ರು ಅಂದ್ರೆ ಅವರು ಎಂಥಹ ಖತರ್ನಾಕ್ ಅಂತ ನೀವೇ ಯೋಚನೆ ಮಾಡಿ. ಆದ್ರೆ ಎರಡನೇ ಬಾರಿಗೆ ಕಳ್ಳರನ್ನ(Theives) ಹಿಡಿಯುವಲ್ಲಿ ಸ್ಥಳೀಯರು ಯಶಶ್ವಿಯಾಗ್ತಾರೆ. ಯಾವಾಗ ಪೊಲೀಸರು ಈ ಕಿರಾತಕರನ್ನ ಬೆಂಡ್ ಎತ್ತೋದಕ್ಕೆ ಶುರು ಮಾಡಿದ್ರೋ ಈ ಗ್ಯಾಂಗ್ನ ಕರಾಳ ಇತಿಹಾಸ ಹೊರಬಂದಿತ್ತು. ಅವರೆಲ್ಲಾ ಉತ್ತರ ಪ್ರದೇಶದ ಕಕ್ರಾಲ್‌ ಗ್ರಾಮದವರು.. ಇಡೀ ಗ್ರಾಮ ನಂಬಿಕೊಂಡಿರೋದು ವ್ಯವಸಾಯ. ಆದ್ರೆ ಚಳಿಗಾಲ ಬರ್ತಿದಂತೆ ಇವರೆಲ್ಲಾ ಗ್ಯಾಂಗ್ಗಳನ್ನ ಕಟ್ಟಿಕೊಂಡು ಸೀದಾ ಕರ್ನಾಟಕಕ್ಕೆ ಎಂಟ್ರಿಕೊಡ್ತಾರೆ. ಕರ್ನಾಟಕದ ಮೂಲೆಮೂಲೆಗೂ ಹೋಗಿ ಚಿನ್ನದ ಅಂಗಡಿಗಳನ್ನ ಟಾರ್ಗೆಟ್ ಮಾಡ್ತಾರೆ. ನಂತರ ಎರಡು ದಿನ ವಾಚ್ ಮಾಡಿ ಅಖಾಡಕ್ಕಿಳಿದೇ ಬಿಡ್ತಾರೆ. ಸಿಕ್ಕಿದನ್ನೆಲ್ಲಾ ದೋಚಿ ಮತ್ತೆ ವಾಪಸ್ ತಮ್ಮ ಊರನ್ನ ಸೇರಿಕೊಂಡುಬಿಡ್ತಾರೆ. ಆದ್ರೆ ಈ ಬಾರಿಯ ಚಳಿಗಾಲ ಅವರಿಗೆ ಕೈಕೊಟ್ಟಿತ್ತು. ತುಮಕೂರಿನ ಚಿನ್ನದ ಅಂಗಡಿ ವ್ಯಾಪಾರಿ ತನ್ನ ಲಾಕರ್ಗೆ ಸೆನ್ಸಾರ್ ಅಳವಡಿಸಿದ್ದು ಈ ಗ್ಯಾಂಗ್ ರೆಡ್ ಹ್ಯಾಂಡಾಗಿ ಸಿಕ್ಕಿಬೀಳುವಂತೆ ಮಾಡಿದೆ.

ಇದನ್ನೂ ವೀಕ್ಷಿಸಿ:  Wife Murder By Husband: ತುಂಡುಡುಗೆ ಧರಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಗಂಡ: ಪ್ರೀತಿಸಿ ಕೈ ಹಿಡಿದವಳ ಕತ್ತು ಸೀಳಿದ ಪತಿರಾಯ !

Video Top Stories