ಹಿಮಾಲಯ ಪ್ರವಾಸದ ನಂತರ ಅಯೋಧ್ಯೆಯಲ್ಲಿ ಸೂಪರ್‌ ಸ್ಟಾರ್‌ ಪ್ರತ್ಯಕ್ಷ !

ಯೋಗಿ ಆದಿತ್ಯನಾಥ್  ಕಾಲಿಗೆ ರಜನಿಕಾಂತ್‌ ಬಿದ್ದಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 
 

Share this Video
  • FB
  • Linkdin
  • Whatsapp

ಜೈಲರ್ ಚಿತ್ರದ ಯಶಸ್ಸಿನಲ್ಲಿರುವ ಸೂಪರ್ ಸ್ಟಾರ್ ರಜನಿಕಾಂತ್ ದಿಢೀರ್ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್( Yogi Adityanath) ಭೇಟಿಯಾಗಿದ್ದಾರೆ. ಖುದ್ದು ಸಿಎಂ ಯೋಗಿ ತಮ್ಮ ನಿವಾಸದಿಂದ ಹೊರಬಂದು ರಜನಿಕಾಂತ್‌ಗೆ(Rajinikanth) ಅವರ ಸ್ವಾಗತ ಕೋರಿದ್ದಾರೆ. ಈ ವೇಳೆ ಯೋಗಿ ಆದಿತ್ಯನಾಥ್ ಪಾದ ಮುಟ್ಟಿ ರಜನಿಕಾಂತ್‌ ನಮಸ್ಕರಿಸಿದ್ದಾರೆ. ರಜನಿ, ಯೋಗಿ ಆದಿತ್ಯನಾಥ್ ಅವರ ಕಾಲಿಗೆ ಬಿದ್ದಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಜನರು ವಿಧ ವಿಧವಾಗಿ ಕಮೆಂಟ್‌ ಮಾಡುತ್ತಿದ್ದಾರೆ. ಅಲ್ಲದೇ ಸಿಎಂ ಯೋಗಿ ಆದಿತ್ಯನಾಥ್ ಜೊತೆ ಪಿವಿಆರ್ ನಲ್ಲಿ ರಜನಿಕಾಂತ್ ಜೈಲರ್‌ ಸಿನಿಮಾ (Jailer cinema) ಸಹ ನೋಡಿದ್ದಾರೆ. ನೆಲ್ಸನ್ ದಿಲೀಪ್ ನಿರ್ದೇಶನದ 'ರಜನಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. 500 ಕೋಟಿ ರೂಪಾಯಿಗಳನ್ನು ಬಾಚಿರುವ 'ಜೈಲರ್' ಸಿನಿಮಾಕ್ಕೆ ಅನಿರುದ್ಧ ರವಿಚಂದ್ರನ್ ಅವರು ಸಂಗೀತ ಸಂಯೋಜನೆ ಮಾಡಿದ್ದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ರಾಮನಗರದಲ್ಲಿ ಹಿಡಿತ ಕಳೆದುಕೊಳ್ತಾ ಜೆಡಿಎಸ್..? ದಳಪತಿಗಳ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟ ಕಾಂಗ್ರೆಸ್..!

Related Video