ಕಾಂಗ್ರೆಸ್ ಕುತಂತ್ರದ ಮಾತು ಹೇಳಿದ್ಯಾರು..? ಯಾಕೆ..? ಹೇಗೆ ನಡೆದಿದೆ I.N.D.I.A ಜೋಡೋ ಸರ್ಕಸ್?

ಲೋಕಸಮರದ ಹೊತ್ತಲ್ಲೇ ಮೈತ್ರಿಯಲ್ಲಿ ಅಂತರ್ಯುದ್ಧ!
ಶುರುವಿಗೂ ಮುನ್ನವೇ ಮುಗಿಯಿತಾ I.N.D.I.A ಕತೆ ?
ರಾಹುಲ್ ನ್ಯಾಯ್ ಯಾತ್ರೆ ವೇಳೆ ನೂರೆಂಟು ವಿಘ್ನಗಳು!

Share this Video
  • FB
  • Linkdin
  • Whatsapp

ಮಹಾಮೈತ್ರಿ ಒಕ್ಕೂಟದಿಂದ ಘಟಾನುಘಟಿಗಳೇ ಹೊರಗೆ ಬತ್ತಿದ್ದಾರೆ. ಇದನ್ನ ನೋಡ್ತಾ ಇದ್ರೆ, ಉಳಿಯುತ್ತಾ ಘಟಬಂಧನ ಅನ್ನೋ ಪ್ರಶ್ನೆ ಹುಟ್ಟುತ್ತೆ..? ಅದಕ್ಕಿಂತಾ ಮುಖ್ಯವಾಗಿ, ರಾಹುಲ್ ಗಾಂಧಿ(Rahul Gandhi) ಅವರು ಭಾರತ್ ಜೋಡೋ ನ್ಯಾಯ ಯಾತ್ರೆಗೂ ಮೊದಲು, I.N.D.I.A. ಜೋಡೋ ಯಾತ್ರೆ ಮಾಡ್ಬೇಕಾ ಅನ್ನೋ ಅನುಮಾನ ಮೂಡುತ್ತೆ. ಪ್ರಧಾನಿ ಮೋದಿಯ ಅಶ್ವಮೇಧ ಕಟ್ಟಿಹಾಕೋಕೆ ಹಸ್ತಪಾಳಯದ ಯುವರಾಜ ದೊಡ್ಡ ಸಾಹಸ ಮಾಡ್ತಾ ಇದಾರೆ. ಅದೇ, ಭಾರತ್ ಜೋಡೋ ನ್ಯಾಯ್ ಯಾತ್ರೆ. ರಾಜ್ಯದಿಂದ ರಾಜ್ಯಕ್ಕೆ ಸಾಗ್ತಾ, ಮೋದಿ (Narendra Modi)ಆಡಳಿತ ವಿರುದ್ಧ ಅಬ್ಬರಿಸ್ತಾ, ಭರ್ಜರಿ ಭಾಷಣದಿಂದ ಜನರನ್ನು ತನ್ನತ್ತ ಸೆಳೆಯೋ ಮಹಾಯತ್ನವೇ, ಈ ನ್ಯಾಯ್ ಯಾತ್ರೆ. ದ್ವೇಷದ ಮಾರ್ಕೆಟ್ನಲ್ಲಿ ಪ್ರೇಮದ ಅಂಗಡಿ ತೆಗೀತೀವಿ ಅನ್ನೋ ಮಾತೇ, ಈ ಬಾರಿ ರಾಹುಲ್ ಗಾಂಧಿ ಅವರ ಬಳಿ ಇರೋ ದೊಡ್ಡ ಆಯುಧ. ಕಳೆದ ಕೆಲವಾರು ತಿಂಗಳುಗಳಿಂದಲೂ ಕಾಂಗ್ರೆಸ್(Congress) ಇದೇ ಮಾತನ್ನೇ ಹೇಳ್ತಾ ಇದೆ. ಆದ್ರೆ, ಈಗ ಆ ಆಯುಧಕ್ಕೆ ಬಲ ಇರೋ ಹಾಗೆ ಕಾಣ್ತಾ ಇಲ್ಲ. ಯಾಕಂದ್ರೆ, ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಅಂತ ಯಾತ್ರೆ ಹೊರಟಿದ್ದಾರೆ. ಆದ್ರೆ ಅವರು ಮೈತ್ರಿ ಜೋಡೋ ಅನ್ನೋ ಹೊಸ ಯಾತ್ರೆ ಮಾಡ್ಲೇಬೇಕಾದ ಅನಿವಾರ್ಯತೆ ಹುಟ್ಟಿಕೊಂಡಿದೆ.

ಇದನ್ನೂ ವೀಕ್ಷಿಸಿ: Bhagwanth Khuba: ವಿಜಯೇಂದ್ರ ಕಾಲಿಗೆ ಬಿದ್ದ ಚವ್ಹಾಣ್: ಬೀದರ್‌ ಬಿಜೆಪಿಯಲ್ಲಿ ತೀವ್ರಗೊಂಡ ಆಂತರಿಕ ಕಚ್ಚಾಟ

Related Video