Python Climbs Tree: ಹೆಬ್ಬಾವುಗಳು ಅಡಿಕೆ ಮರ ಏರುವ ಸ್ಟೈಲ್‌ ನೋಡಿದ್ದೀರಾ? ಇಲ್ಲಿದೆ ವಿಡಿಯೋ!

*ಹೆಬ್ಬಾವು ಅಡಿಕೆ ಮರ ಏರುತ್ತಿರುವ ದೃಶ್ಯ ವೈರಲ್‌
*ವೀಡಿಯೋ ಹಂಚಿಕೊಂಡ ಅರಣ್ಯ ಸೇವಾ ಅಧಿಕಾರಿ 
*ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರತಿಕ್ರಿಯೆ

Share this Video
  • FB
  • Linkdin
  • Whatsapp

ವನ್ಯಜೀವಿಗಳಿಗೆ (Wild Animal) ಸಂಬಂಧಿಸಿದ ವೀಡಿಯೊಗಳು ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಅಗುತ್ತವೆ. ಈ ವೀಡಿಯೊಗಳಲ್ಲಿ ಕೆಲವು ತುಂಬಾ ಅಪಾಯಕಾರಿ ಮತ್ತು ಕೆಲವು ತುಂಬಾ ಮುದ್ದಾಗಿರುತ್ತವೆ. ಹಾವು, ಹೆಬ್ಬಾವುಗಳಿಗೆ ಸಂಬಂಧಿಸಿದ ವಿಡಿಯೋಗಳೂ ಹೆಚ್ಚು ಗಮನ ಸೆಳೆಯುತ್ತವೆ. ಹೆಚ್ಚಿನ ಜನರು ಹಾವುಗಳೆಂದರೆ ತುಂಬಾ ಭಯಪಡುತ್ತಾರೆ, ಆದರೆ ಕೆಲವರು ಹಾವುಗಳಿಗೆ ಹೆದರುವುದಿಲ್ಲ. ಹೆಬ್ಬಾವು ಅಪಾಯಕಾರಿ ರೀತಿಯಲ್ಲಿ ಅಡಿಕೆ ಮರವನ್ನು (Python Climbs Tree) ಏರುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

Add Asianetnews Kannada as a Preferred SourcegooglePreferred

ಇದನ್ನೂ ಓದಿ: Viral News: ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡು ಸರಸವಾಡಿದ ಭೂಪ!

ಹೆಬ್ಬಾವಿನ ಈ ವೀಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ (Susanta Nanda) ಅವರು ತಮ್ಮ ಅಧಿಕೃತ ಟ್ವಿಟರ್ (Twitter) ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಹೆಬ್ಬಾವು ಮರವೊಂದಕ್ಕೆ ಸುತ್ತಿಕೊಂಡಿದ್ದು, ಮರದ ಮೇಲ್ಭಾಗದಲ್ಲಿ ಅತ್ಯಂತ ವೇಗವಾಗಿ ಏರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋದಲ್ಲಿ ಹೆಬ್ಬಾವು ಸುಮಾರು 10 ಅಡಿ ಇರಬಹುದೆಂದು ಅಂದಾಜಿಸಬಹುದು. ಈ ವಿಡಿಯೋ ವೈರಲ್‌ ಆದ ಬಳಿಕ ಜನರಿಂದ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Related Video