ಬೇಸರಗೊಂಡ ಭಕ್ತರಿಂದ ಬಬ್ಬುಸ್ವಾಮಿಯಲ್ಲಿ ಪ್ರಾರ್ಥನೆ: 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವದ ಅಭಯ!

ಉಡುಪಿಯ ಚಿಟ್ಪಾಡಿಯ ಬಬ್ಬು ಸ್ವಾಮಿ ಸನ್ನಿಧಾನ
24 ಗಂಟೆಯೊಳಗೆ ಕಳ್ಳನನ್ನು ಹುಡುಕಿಕೊಟ್ಟ ದೈವ
ಜು.4 ರ ನಡುರಾತ್ರಿ ಕಾಣಿಕೆ ಡಬ್ಬಿ ಒಡೆದು ಕಳ್ಳತನ 

Share this Video
  • FB
  • Linkdin
  • Whatsapp

ಉಡುಪಿಯಲ್ಲಿ (Udupi) ಮತ್ತೊಂದು ದೈವ (Daiva)ಪವಾಡ ನಡೆದಿದೆ. ಅದು ಬಬ್ಬುಸ್ವಾಮಿ (Babbuswami) ಎಂಬ ದೈವ. ಬಬ್ಬುಸ್ವಾಮಿ ದೈವ ಸನ್ನಿಧಿಯಲ್ಲಿ ಕಾಣಿಕೆ ಹುಂಡಿ (Temple hundi) ಕಳ್ಳತನವಾಗುತ್ತೆ. ಹುಂಡಿ ಕಳ್ಳತನವಾದ 24 ಗಂಟೆಯಲ್ಲಿ ಬಬ್ಬುಸ್ವಾಮಿ ದೈವ ಕೊಟ್ಟ ನುಡಿಯಂತೆ ಕಳ್ಳನ್ನು(Theft)ಪತ್ತೆ ಮಾಡಲಾಗುತ್ತೆ. ಉಡುಪಿಯಲ್ಲಿರುವ ಬಬ್ಬುಸ್ವಾಮಿ ದೈವ ಸನ್ನಿಧಿ.ಈ ಸನ್ನಿಧಿಯಲ್ಲಿ ಎಡರು ವರ್ಷಗಳಲ್ಲಿ ಎರಡು ಅಚ್ಚರಿಗಳು ನಡೆದಿವೆ. ಇದೇ ಸನ್ನಿಧಿಯಲ್ಲಿ 2022ರ ಡಿಸೆಂಬರ್‌ನಲ್ಲಿ ಒಂದು ಅಚ್ಚರಿ ನಡೆದಿತ್ತು. ಆ ದಿನ ಬಬ್ಬುಸ್ವಾಮಿ ಭಕ್ತರು ದೈವ ಪವಾಡವನ್ನು ಕಣ್ಣಾರೆ ಕಂಡಿದ್ದರು. ಆ ದೈವ ಪವಾಡ ಕಂಡು ಭಕ್ತರು ಹರ್ಷಗೊಂಡಿದ್ದರು. ಆ ಪವಾಡ ನಡೆದು ಎರಡು ವರ್ಷಗಳಲ್ಲಿ ಈಗ ಅದೇ ಸನ್ನಿಧಾನದಲ್ಲಿ ಮತ್ತೊಂದು ದೈವ ಪವಾಡ ನಡೆದಿದೆ. ಮೊನ್ನೆ ನಡೆದ ಈ ಪವಾಡವನ್ನೂ ಕಂಡು ಭಕ್ತರು ಹರ್ಷಗೊಂಡಿದ್ದಾರೆ. ಉಡುಪಿಯ ಚಿಟ್ಪಾಡಿ ಕಸ್ತೂರಿ ಬಾ ನಗರದಲ್ಲಿರುವ ಬಬ್ಬುಸ್ವಾಮಿ ಸನ್ನಿಧಾನವಿದು. ಈ ದೈವ ಸನ್ನಿಧಿಯಲ್ಲಿ ಮೊನ್ನೆ ರಾತ್ರಿ ನಡೆಯಬಾರದ ಘಟನೆಯೊಂದು ನಡೆದಿತ್ತು. ಮೊನ್ನೆ ನಾಲ್ಕನೇ ತಾರೀಕಿನ ಮಧ್ಯೆರಾತ್ರಿ ಕಳ್ಳನೊಬ್ಬ ಇಲ್ಲಿನ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿದ್ದ. ಈ ಬಬ್ಬುಸ್ವಾಮಿ ದೈವ ತುಂಬಾ ಪ್ರಭಾವಶಾಲಿ ದೈವ. ನಾವು ಆಗಲೇ ಹೇಳಿದ ಹಾಗೆ ಈ ಹಿಂದೆನೂ ಅನೇಕ ಪವಾಡಗಳು ಈ ಸನ್ನಿಧಿಯಲ್ಲಿ ನಡೆದಿವೆ. 

ಇದನ್ನೂ ವೀಕ್ಷಿಸಿ: 46 ವರ್ಷಗಳ ರತ್ನ ಭಂಡಾರದ ಬೀಗದ ಕೈ ರಹಸ್ಯ ಏನು ? ಕೀ ನಾಪತ್ತೆಗೂ ತಮಿಳುನಾಡಿಗೂ ಲಿಂಕ್ ಮಾಡಿದ್ದೇಕೆ ಪಿಎಂ ?

Related Video