Asianet Suvarna News Asianet Suvarna News

ದೊಡ್ಡ ಸವಾಲು ನಿರ್ವಹಿಸಿದ ಕರ್ನಾಟಕ ಪೊಲೀಸ್‌ಗೆ ಅನಂತ ಧನ್ಯವಾದ

* ಅಗಲಿದ ಪುನೀತ್ ರಾಜ್ ಕುಮಾರ್ ಗೆ ಅಂತಿಮ ನಮನ
* ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಸಚಿವರ ಶ್ಲಾಘನೆ
* ದೊಡ್ಡ ಸವಾಲನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇವೆ
* ಮಾಧ್ಯಮಗಳಿಗೂ ನಮಸ್ಕಾರ ಹೇಳಿದ ಗೃಹ ಸಚಿವ

First Published Oct 31, 2021, 6:11 PM IST | Last Updated Oct 31, 2021, 6:11 PM IST

ಬೆಂಗಳೂರು(ಅ. 31)  ಸುಮಾರು 25  ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸವಾಲುಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ ಕರ್ನಾಟಕ ಪೊಲೀಸ್ (Karnataka Police) ಇಲಾಖೆಗೆ ಧನ್ಯವಾದ ಹೇಳಲೇಬೇಕು. ಸಿಎಂ ಬಸವರಾಜ ಬೊಮ್ಮಾಯಿ, (Basavaraj Bommai) ಗೃಹ ಸಚಿವ ಆರಗ ಜ್ಞಾನೇಂದ್ರ, (Araga Jnanendra) ಡಿಜಿ/ಐಜಿಪಿ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.

ಪುನೀತ್ ಗೆ ಕಿಚ್ಚನ ಭಾವುಕ ಪತ್ರ

ನಿರಂತರ 48 ಗಂಟೆ ಭದ್ರತೆ ನೀಡಿದ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ಯವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಿದ ಸಿಬ್ಬಂದಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಬೆಂಗಳೂರು ನಗರದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಕೆಎಸ್ಆರ್ ಪಿ(KSRP), ಸಿಎಆರ್ ಸಿಬ್ಬಂದಿಗೆ ಗೃಹ ಸಚಿವರು ನಮಸ್ಕಾರ ಹೇಳಿದ್ದಾರೆ.