Asianet Suvarna News Asianet Suvarna News

'ಮಿಷನ್ ಸಮುದ್ರಯಾನ': ವಿಶ್ವದ ಬಲಿಷ್ಠ ರಾಷ್ಟ್ರಗಳ ಸಾಲಿಗೆ ಭಾರತ

'ಮಿಷನ್ ಸಮುದ್ರಯಾನ' ಯೋಜನೆಗಾಗಿ ನರೇಂದ್ರ ಮೋದಿ ಸರ್ಕಾರ, 1,500 ಕೋಟಿ ರೂಪಾಯಿ ಪ್ರಾಜೆಕ್ಟ್ ರೆಡಿ ಮಾಡಿದೆ. ಇದರ ಡಿಟೇಲ್ಸ್ ಇಲ್ಲಿದೆ.

ಸಮುದ್ರದ ಆಳಕ್ಕೆ ಹೋಗಿ ಅಧ್ಯಯನ ಮಾಡುವ ಟೆಕ್ನಾಲಾಜಿಯನ್ನು ಈಗಾಗಲೇ ವಿಶ್ವದ ಬಲಿಷ್ಠ ರಾಷ್ಟ್ರಗಳು ಮಾಡ್ತಿವೆ. ಆದ್ರೆ ಈಗ  ಭಾರತವೂ ಕೂಡ ಸಮುದ್ರಯಾನಕ್ಕೆ ಮುಂದಾಗಿದ್ದು, ಪ್ರತಿ ಭಾರತೀಯರೂ ಹೆಮ್ಮೆ ಪಡುವ ಸಂಗತಿಯಾಗಿದೆ. ಕಾರಣ ಪ್ರಪಂಚದಲ್ಲಿ ಅಮೆರಿಕ, ರಷ್ಯಾ, ಜಪಾನ್ ಮತ್ತು ಚೀನಾ ದೇಶಗಳು ಮಾತ್ರ ಸಮುದ್ರದಾಳಕ್ಕೆ ಹೋಗಿ ಅಗಾಧ ಅಧ್ಯಯನ ಮಾಡುವ ದೇಶಗಳು ಅಂತ ಅನಿಸಿಕೊಂಡಿವೆ. ಆದ್ರೆ ಈ ದೇಶಗಳ ಪಟ್ಟಿಯಲ್ಲಿ ಭಾರತವೂ ಕೂಡ ಸೇರಿಕೊಂಡಿದೆ. ಭಾರತದ ಸಮುದ್ರ ತೀರ 7000 ಕಿಮೀ ಹೊಂದಿದ್ದು, ಈ ಸಮುದ್ರ ಗಡಿಯಲ್ಲಿ 38 ಕೋಟಿ ಟನ್ ಖನಿಜ ಇದೆ ಅಂತ ವಿಜ್ಞಾನಿಗಳು ಹೇಳಿದ್ರು. ಮ್ಯಾಂಗನೀಸ್-9 ಕೋಟಿ ಟನ್, ತಾಮ್ರ- 42 ಲಕ್ಷ ಟನ್, ನಿಕ್ಕೆಲ್-47 ಲಕ್ಷ ಟನ್, ಕೊಬಾಲ್ಟ್-5.5 ಲಕ್ಷ ಟನ್ ಲಭ್ಯ ಇದೆ ಅಂತ ವಿಜ್ಞಾನಿಗಳು ಹೇಳಿದ್ರು. ಇದೆಲ್ಲಾ ಖನಿಜ ಭಾರತಕ್ಕೆ ಸಿಕ್ಕರೆ ಅಂದಾಜು 9 ಲಕ್ಷ ಕೋಟಿ ರೂಪಾಯಿ ಲಾಭವಾಗುತ್ತೆ ಅಂತ ಅಂದಾಜಿಸಲಾಗಿದೆ.

Video Top Stories