ಸಾರ್ವಜನಿಕರ ಆಸ್ತಿ ಯಾರ ಸ್ವತ್ತು?: ಇಡೀ ರಸ್ತೆಯನ್ನೇ ಕಬಳಿಸಿದ ಖಾಸಗಿ ನರ್ಸಿಂಗ್ ಹೋಂ?

ಬೆಂಗಳೂರಿನ ಹೃದಯ ಭಾಗದಲ್ಲಿ ಸಾರ್ವಜನಿಕ ರಸ್ತೆ ಕಬಳಿಕೆ ಮಾಡಲಾಗಿದ್ದು, ಸಾರ್ವಜನಿಕರು ಬಳಸುವ ರಸ್ತೆ ನರ್ಸಿಂಗ್‌ ಹೋಂ ಆಗಿ ಬಳಕೆ ಆಗಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರಿನ ಅಕ್ಕಿಪೇಟೆಯ ಪ್ರಮುಖ ರಸ್ತೆಯ 16-60 ಫೀಟ್‌ ಜಾಗದ ರಸ್ತೆಯನ್ನು ಕಬಳಿಕೆ ಮಾಡಿಕೊಳ್ಳಲಾಗಿದೆ. ಒಂದಿಡಿ ಜಾಗವಲ್ಲ ರಸ್ತೆಗೆ ರಸ್ತೆಯನ್ನೇ ನುಂಗಿದೆ ನರ್ಸಿಂಗ್‌ ಹೋಂ. ಸಾರ್ವಜನಿಕ ರಸ್ತೆ ದುರ್ಬಳಕೆಯಾದ್ರೂ, ಹೇಳೋರಿಲ್ಲ ಕೇಳೋರಿಲ್ಲ. ಕಳೆದ ಒಂದು ದಶಕದಿಂದ ಖಾಸಗಿ ಆಸ್ಪತ್ರೆ ರಾಜಾರೋಷವಾಗಿ ರಸ್ತೆಯನ್ನು ಬಳಕೆ ಮಾಡುತ್ತಿದೆ. ಶ್ರೀನಿವಾಸ ನರ್ಸಿಂಗ್‌ ಹೋಂನಿಂದ ರಸ್ತೆ ದುರ್ಬಳಕೆಯಾಗಿದ್ದು, ಸಾರ್ವಜನಿಕರ ರಸ್ತೆ ಎಂದು ಆಸ್ಪತ್ರೆ ವೈದ್ಯ ಡಾ. ಸಂತೋಷ್‌ ಒಪ್ಪಿದ್ದಾರೆ. ರಸ್ತೆಯ ಎರಡು ಬದಿಯಲ್ಲಿ ನರ್ಸಿಂಗ್‌ ಹೋಂ ಇದೆ. ಇದರ ವಿರುದ್ಧ ಸ್ಥಳೀಯರು ದೂರು ಸಲ್ಲಿಸಿದ್ದು, ಸ್ಥಳೀಯರ ಆರೋಪಕ್ಕೆ ನರ್ಸಿಂಗ್‌ ಹೋಂ ಮಾಲೀಕರು ಪ್ರತಿಕ್ರಿಯೆ ನೀಡಿದ್ದಾರೆ.

Related Video