Asianet Suvarna News Asianet Suvarna News

ನೂರಾರು ಜನರ ಜೀವ ತೆಗೆದ ಭಯಾನಕ ಅಪಘಾತ: ರಕ್ತದ ಮಡುವಿನಲ್ಲಿ ಶುರುವಾಗಿದೆ ರಾಜಕೀಯ

ರೈಲು ಅಪಘಾತದಲ್ಲಿ ಸಾವಿರಾರು ಜನರ ರಕ್ತದ ಕೋಡಿ
ರೈಲ್ವೇ ದುರಂತಕ್ಕೆ ಪ್ರಧಾನಿ ಮೋದಿ ವಿರುದ್ಧ ಟೀಕೆ
ರೈಲ್ವೇ ಸಚಿವ ಅಶ್ವಿನ್‌ ವೈಷ್ಣವ್‌ ರಾಜೀನಾಮೆಗೆ ಒತ್ತಡ

ಶುಕ್ರವಾರ ರಾತ್ರಿ, ಒಡಿಶಾದ ಬಾಲಸೋರ್‌ನಲ್ಲಿ ಈ ಅತಿ ಭಯಾನಕ ಅಪಘಾತ ಸಂಭವಿಸಿತ್ತು. ಕೋರಮಂಡಲ್‌ ಎಕ್ಸ್‌ಪ್ರೆಸ್‌, ಹಾಗೂ ಬೆಂಗಳೂರು–ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಮತ್ತು ಒಂದು ಗೂಡ್ಸ್ ಟ್ರೈನ್ ಮಧ್ಯೆ ಈ ಅಪಘಾತ ಸಂಭವಿಸಿದೆ. ಬಹನಾಗಾ ಬಜಾರ್‌ ರೈಲ್ವೇ ಸ್ಟೇಷನ್ ಹತ್ರ, ಶುಕ್ರವಾರ ರಾತ್ರಿ 7.20ರ ಸುಮಾರಿಗೆ ಅನಾಹುತ ಸಂಭವಿಸಿದೆ. ಈ ಭೀಕರ ಅನಾಹುತಕ್ಕೆ ರೈಲು ಹಳಿಗಳಲ್ಲಿರೋ ದೋಷವೇ ಕಾರಣ ಇರ್ಬೋದು ಅಂತ ಪ್ರಾಥಮಿಕ ಶಂಕೆ ಮೂಡಿತ್ತು. ಮೊದಲಿಗೆ, 130ಕಿಲೋಮೀಟರ್ ಸ್ಪೀಡಿನಲ್ಲಿ ನುಗ್ಗಿಬಂದಿದ್ದ ಕೋರಮಂಡಲ್‌ ಎಕ್ಸ್‌ ಪ್ರೆಸ್‌ ರೈಲು ಹಳಿ ತಪ್ಪಿದೆ. ಅದರ ಪರಿಣಾಮವಾಗಿ, ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದೆ. ಮೊದಲೇ ಆಕ್ಸಿಡೆಂಟಾಗಿ, ಹಳಿತಪ್ಪಿದ್ದ ಬೋಗಿಗಳಿಗೆ ಯಶವಂತಪುರ್-ಹೌರಾ ಸೂಪರ್‌ ಫಾಸ್ಟ್‌ ರೈಲು ಡಿಕ್ಕಿ ಹೊಡೆದಿದೆ. ಯಾವಾಗ ಈ ಮೂರೂ ರೈಲುಗಳು ಒಂದಕ್ಕೊಂದು ಆಕ್ಸಿಡೆಂಟ್ ಆಯ್ತೋ, ನಿದ್ದೆಯಲ್ಲಿದ್ದ ನೂರಾರು ಪ್ರಯಾಣಿಕರು ಕೊನೆಯುಸಿರೆಳೆದಿದ್ರು. 

ಇದನ್ನೂ ವೀಕ್ಷಿಸಿ: Odisha Train Accident: ಇಂಟರ್‌ ಲಾಕಿಂಗ್‌ ಸಿಸ್ಟಮ್‌ ಲೋಪದಿಂದಲೇ ನಡೆಯಿತಾ ರೈಲು ದುರಂತ ..?