Asianet Suvarna News Asianet Suvarna News

Odisha Train Accident: ಇಂಟರ್‌ ಲಾಕಿಂಗ್‌ ಸಿಸ್ಟಮ್‌ ಲೋಪದಿಂದಲೇ ನಡೆಯಿತಾ ರೈಲು ದುರಂತ ..?

ಒಡಿಶಾದಲ್ಲಿ ನಡೆದ ರೈಲುಗಳ ದುರಂತಕ್ಕೆ ಇಂಟರ್‌ ಲಾಕಿಂಗ್ ಸಿಸ್ಟಮ್‌ನಲ್ಲಿ ಬದಲಾವಣೆ ಮಾಡಿರುವುದು ಕಾರಣ ಎಂದು ಹೇಳಲಾಗುತ್ತಿದೆ. 

ಒಡಿಶಾದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ರೈಲು ದುರಂತದಲ್ಲಿ ಈವರೆಗೆ 270ಕ್ಕೂ ಮಂದಿ ಬಲಿಯಾಗಿದ್ದು, ಗಾಯಗೊಂಡವರ ಸಂಖ್ಯೆ 1000ಕ್ಕೆ ಏರಿದೆ. ಈ ನಡುವೆ ಭೀಕರ ರೈಲು ದುರಂತ  ಹೇಗಾಯ್ತು ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಎಕ್ಸ್‌ಪ್ರೆಸ್ ರೈಲುಗಳ ಭೀಕರ ಅಪಘಾತಕ್ಕೆ ಕಾರಣ ಏನು ಎಂಬುದನ್ನು ಪತ್ತೆಹಚ್ಚಿದ್ದೇವೆ ಎಂದು ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಹೇಳಿದ್ದಾರೆ. ಅಲ್ಲದೇ ಶೀಘ್ರದಲ್ಲೇ ತನಿಖಾ ವರದಿಯನ್ನು ಬಹಿರಂಗಪಡಿಸಲಾಗುವುದು ಎಂದಿದ್ದಾರೆ. ಇಂಟರ್‌ ಲಾಕಿಂಗ್‌ನಿಂದ ಈ ಘಟನೆ ನಡೆಯಿತಾ ಎಂಬ ಅನುಮಾನ ಈಗ ಮೂಡಿದೆ. ಅಲ್ಲದೇ ಕಾಣದ ಕೈಗಳಿರುವ ಬಗ್ಗೆ ಶಂಕೆ ಸಹವ್ಯಕ್ತವಾಗಿದೆ. ಈ ಘಟನೆಯ ಬಗ್ಗೆ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. 

ಇದನ್ನೂ ವೀಕ್ಷಿಸಿ: ಗರ್ಲ್ ಫ್ರೆಂಡ್ ಜೊತೆ ಮುಖ ಮುಚ್ಚಿಕೊಂಡ ನಟ: ಏರ್‌ಪೋರ್ಟ್‌ನಲ್ಲಿ ಅದಿತಿ, ಸಿದ್ಧಾರ್ಥ್ !