ಕೃಷ್ಣ vs ರಾಮ ಭಕ್ತರ ನಡುವೆ ಸವಾಲು..! ‘ಓರ್ಚಾ’ದ ಶ್ರೀರಾಮನಿಗೆ ಪೊಲೀಸರಿಂದ ಗನ್ ಸೆಲ್ಯೂಟ್..!

ರಾಮನ ಆಗಮನಕ್ಕೆ ಕುಣಿದ ಅಯೋಧ್ಯಾ ನಗರಿ..!
ಬಾಲರಾಮನ ಹೆಸರಲ್ಲಿ ನಡೀತು ಮಹಾ ಉತ್ಸವ..!
ವಿಶ್ವವೇ ತಿರುಗಿ ನೋಡಿದ ಭವ್ಯ ರಾಮಮಂದಿರ..!

First Published Feb 5, 2024, 8:22 AM IST | Last Updated Feb 5, 2024, 8:22 AM IST

ರಾಮ ಲಲ್ಲಾ ಅಂತೂ ಇಂತೂ ಅಯೋಧ್ಯೆಯ ತನ್ನ ಮನೆಗೆ ಬಂದಾಗಿದೆ. ಅಲ್ಲಿ ಪ್ರಾಣ ಪ್ರತಿಷ್ಠೆ ಅದ್ಧೂರಿಯಾಗಿ ನಡೆದಿದೆ. ಇಡೀ ಭಾರತ ಆ ಸಂಭ್ರಮದಲ್ಲಿ ಭಾಗಿಯಾಗಿತ್ತು. ಅಯೋಧ್ಯಾ(Ayodhya) ಅಂದ ಕೂಡಲೇ ರಾಮನೇ ನೆನಪಿಗೆ ಬರ್ತಾನೆ. ಮುಂಬರುವ ದಿನಗಳಲ್ಲಿ ಭಾರತದ ಶ್ರೇಷ್ಟ ಧಾರ್ಮಿಕ ಪ್ರವಾಸಿತಾಣವಾಗೋದ್ರಲ್ಲಿ ಅನುಮಾನವಿಲ್ಲ. ಆದ್ರೆ ವೀಕ್ಷಕರೇ ಅನೇಕರಿಗೆ 2ನೇ ಅಯೋಧ್ಯೆ ಬಗ್ಗೆ ಗೊತ್ತಿರೋದಿಲ್ಲ. ಇದು ಮಧ್ಯ ಪ್ರದೇಶ(Madhya Pradesh) ನಿವಾರಿ ಜಿಲ್ಲೆಯಲ್ಲಿ ಇರೋ ಒಂದು ಚಿಕ್ಕ ಊರು. ಈ ಊರನ್ನು ಎರಡನೇ ಅಯೋಧ್ಯೆ ಅಂತಲೇ ಭಕ್ತರು ಕರೀತಾರೆ. ಈ ಓರ್ಚಾ ಪಟ್ಟಣ ಸೋಜಿಗಗಳ ಆಗರ ಅಂದ್ರೂ ತಪ್ಪಾಗೋದಿಲ್ಲ. ಭಗವಾನ್ ರಾಮನನ್ನು(Lord Rama) ಓರ್ಚಾದ ರಾಜ ಎಂದು ಪರಿಗಣಿಸಲಾಗುತ್ತದೆ. ಇಂದಿಗೂ ಕೂಡ ರಾಮ ಬೇರೆ ಅಲ್ಲ, ಓರ್ಚಾದ ರಾಜ ಬೇರೆ ಅಲ್ಲ. ಅಯೋಧ್ಯೆಯ ಹೊರತಾಗಿ ಭಾರತದ ಏಕೈಕ ರಾಮ ಆಳಿದ ಸ್ಥಳವೆಂದರೆ ಓರ್ಚಾ, ಅಲ್ಲಿ ಭಗವಾನ್ ರಾಮ ಪಟ್ಟಣದ ಏಕೈಕ ರಾಜನೂ ಆಗಿದ್ದಾನೆ. ಅದು 16 ನೇ ಶತಮಾನ. ಓರ್ಚಾದಲ್ಲಿ ಆದ ಆಡಳಿತ ಮಾಡ್ತಾ ಇದ್ದಿದ್ದು  ರಾಜ ಮಧುಕರ್ ಷಾ. ಆ ರಾಜ ಶ್ರೀಕೃಷ್ಣ ಪರಮಾತ್ಮನ ಅಪ್ರತಿಮ ಭಕ್ತನಾಗಿದ್ದ, ದಿನಾಲೂ ಕೃಷ್ಣಾರಾಧನೆ ಮಾಡದೇ ದಿನದ ಶುರುವೇ ಆಗ್ತಾ ಇರ್ಲಿಲ್ಲಾ. ಸರ್ವಂ ಕೃಷ್ಣ ಮಯಂ ಅಂತ, ಕೃಷ್ಣನ ಉಪಾಸನೆಯಿಂದಲೇ ರಾಜ್ಯಭಾರ ಶುರು ಮಾಡ್ತಾ ಇದ್ದ.

ಇದನ್ನೂ ವೀಕ್ಷಿಸಿ: Today Horoscope: ಧನಸ್ಸುವಿನಿಂದ ಮಕರ ರಾಶಿಗೆ ಕುಜನ ಪರಿವರ್ತನೆಯಾಗಲಿದ್ದು, ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ?

Video Top Stories