Asianet Suvarna News Asianet Suvarna News

107 ವರ್ಷದ ಪಪ್ಪಮ್ಮಾಳ್‌ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಪ್ರಧಾನಿ ಮೋದಿ!

ಪ್ರಧಾನಿ ನರೇಂದ್ರ ಮೋದಿ ಶನಿವಾರ ನವದೆಹಲಿಯಲ್ಲಿ ಜಾಗತಿಕ ಶ್ರೀಅನ್ನ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಮಾವೇಶ ಮುಗಿದ ಬಳಿಕ 107 ವರ್ಷದ ಪದ್ಮಶ್ರೀ ಪುರಸ್ಕೃತೆ ಪಪ್ಪಮ್ಮಾಳ್‌ ಅವರಿಂದ ಸನ್ಮಾನ ಸ್ವೀಕರಿಸಿದರು.
 

ನವದೆಹಲಿ (ಮಾ.18): ಜಾಗತಿಕ ಶ್ರೀಅನ್ನ ಸಮಾವೇಶದಲ್ಲಿ 107 ವರ್ಷದ ಸಾವಯವ ಕೃಷಿಕರಾಗಿರುವ ಪಪ್ಪಮ್ಮಾಳ್ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಿ ಆಶೀರ್ವಾದ ಪಡೆದರು. ಗ್ಲೋಬಲ್‌ ಮಿಲ್ಲೆಟ್ಸ್‌ ಕಾನ್ಫರೆನ್ಸ್‌ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ, ಭಾಷಣ ಮುಕ್ತಾಯವಾದ ಬಳಿಕ 107 ವರ್ಷದ ಪದ್ಮಶ್ರೀ ಪುರಸ್ಕೃತೆ ಹಾಗೂ ಸಾವಯವ ಕೃಷಿಕ ಪಪ್ಪಮ್ಮಾಳ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಈ ವೇಳೆ ಪಪ್ಪಮ್ಮಾಳ್‌ ಪ್ರಧಾನಿ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು. ಅದನ್ನು ಪ್ರೀತಿಯಿಂದಲೇ ಸ್ವೀಕಾರ ಮಾಡಿದ ಪ್ರಧಾನಿ ಮೋದಿ, ಅವರಿದ್ದ ಸ್ಥಳದಲ್ಲಿಯೇ ಕಾಲಿಗೆ ಎರಗಿ ಆಶೀರ್ವಾದ ಪಡೆದುಕೊಂಡರು.

ಮೋದಿ ಸರಳತೆಗೆ ಜನರು ಫಿದಾ: VHP ಮುಖಂಡನ ಕಾಲಿಗೆ ನಮಸ್ಕರಿಸಿದ ಪ್ರಧಾನಿ

ಒಂದು ಹಂತದಲ್ಲಿ ಏನು ಮಾಡಬೇಕು ಅನ್ನೋದೇ ಗೊತ್ತಾಗದಂತೆ ನಿಂತ ಪಪ್ಪಮ್ಮಾಳ್‌ ಬಳಿಕ, ಮೋದಿ ಅವರ ಹೆಗಲು ಹಿಡಿದು ಆಶೀರ್ವಾದ ಮಾಡಿದರು. ಬಳಿಕ ಮೋದಿ ಕೂಡ ಕೆಲ ಹೊತ್ತು ಅವರೊಂದಿಗೆ ಮಾತನಾಡಿ ಅಲ್ಲಿಂದ ನಿರ್ಗಮಿಸಿದರು. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಪ್ರಧಾನಿ ಮೋದಿ ಪ್ರತಿ ತಾಯಿಯಲ್ಲೂ ತನ್ನ ತಾಯಿಯನ್ನು ಕಾಣುತ್ತಿದ್ದಾರೆ ಅನ್ನೋದು ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಕೆಲವರು ಕಾಮೆಂಟ್‌ ಬರೆದಿದ್ದಾರೆ.

Video Top Stories