
ಮಿಸ್ ಆಗಿದ್ರೆ ಪೆಟ್ರೋಲ್ ಬಂಕ್ ಧಗಧಗ: ಅಡಿಗಳ ಅಂತರ ತಪ್ಪಿದ ಅಗ್ನಿ ದುರಂತ..!
ಪೆಟ್ರೋಲ್ ಬಂಕ್‌ಗೆ ನುಗ್ಗಿದ ಟ್ಯಾಂಕರ್‌ನಿಂದ ತಪ್ಪಿದ ಅಗ್ನಿ ದುರಂತ, ಗುತ್ತಿಗೆದಾರನ ಅಪಹರಣ, ಹಿಟ್ & ರನ್ ಮತ್ತು ದರೋಡೆಯಂತಹ ಆಘಾತಕಾರಿ ಘಟನೆಗಳ ಸಿಸಿಟಿವಿ ದೃಶ್ಯಗಳು ವೈರಲ್ ಆಗಿದ್ದು, ಆ ಸ್ಟೋರಿಗಳ ವಿವರ ಇಲ್ಲಿದೆ.
ಮಿಸ್ ಆಗಿದ್ರೆ ಪೆಟ್ರೋಲ್ ಬಂಕ್ ಢಮ್ ಆಗ್ಬಿಡ್ತಿತ್ತು, ಹೌದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಆಯಿಲ್ ಟ್ಯಾಂಕರೊಂದು ಬಂಕ್‌ಗೆ ನುಗ್ಗಿದ ಪರಿಣಾಮ ಪೆಟ್ರೋಲ್ ಬಂಕ್ ಜಖಂ ಆಗಿದೆ. ಕೇವಲ ಅಡಿಗಳ ಅಂತರದಲ್ಲಿ ಅನಾಹುತ ತಪ್ಪಿದೆ. ಘಟನೆಯಲ್ಲಿ ಬೈಕೊಂದು ಜಖಂ ಆಗಿದ್ದು, ಪೆಟ್ರೋಲ್ ಬಂಕ್ ಸಿಬ್ಬಂದಿ ಹಾಗೂ ವಾಹನ ಸವಾರರು ಅಲ್ಲಿಂದ ಭಯದಲ್ಲಿ ಜೀವ ಉಳಿಸಿಕೊಳ್ಳಲು ಓಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಪೆಟ್ರೋಲ್ ಬಂಕ್ ಸಮೀಪದ ಶೌಚಾಲಯಕ್ಕೆ ಆಯಿಲ್ ಟ್ಯಾಂಕರ್ ಡಿಕ್ಕಿ ಹೊಡೆಯುತ್ತಿದ್ದಂತೆ ಅಲ್ಲಿದ್ದ ಅಗ್ನಿಶಾಮಕ ಸಾಧನಗಳು ಒಪನ್ ಆಗಿ ಹೊಗೆ ಬಿಟ್ಟಿದ್ದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ಘಟನೆಯೂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹತ್ತು ಹಲವು ವೀಡಿಯೋಗಳು ಇಲ್ಲಿವೆ.