ರಾಜತಾಂತ್ರಿಕ ಮುನಿಸು..ಟ್ರುಡೋ ಸಾಮ್ರಾಜ್ಯಕ್ಕೆ ನಷ್ಟ: 6 ವರ್ಷಗಳಲ್ಲಿ 9 ಸುತ್ತಿನ ಮಾತುಕತೆ ವಿಫಲ..!

2021ರಲ್ಲಿ ಉಭಯ ದೇಶಗಳ ಮಧ್ಯೆ 7 ಶತಕೋಟಿ ವಹಿವಾಟು 
ಕೆನಡಾ ಕೃಷಿಕ್ಷೇತ್ರಗಳಲ್ಲಿ ಪಂಜಾಬಿಗಳ ಪ್ರಬಲ್ಯ ಹೆಚ್ಚು
ಕೃಷಿ, ತೋಟಗಾರಿಕೆ ಬೆಳೆ ಕೆನಡಾದಿಂದ ಭಾರತಕ್ಕೆ ರಫ್ತು

First Published Sep 24, 2023, 8:56 AM IST | Last Updated Sep 24, 2023, 8:56 AM IST

ಕೆನಡಾ ಪ್ರಧಾನಿ ಅಧಿಕಾರಕ್ಕೆ ಬಂದಿದ್ದೇ ಈ ಖಲಿಸ್ತಾನಿಗಳಿಂದ. ಕೆನಡಾದಲ್ಲಿ ಖಲಿಸ್ತಾನಿಗಳು(Khalistan) ಒಬ್ಬ ಪ್ರಧಾನಿಯನ್ನೇ ಅಲುಗಾಡಿಸುವ ಶಕ್ತಿ ಬಂದಿದೆ. ಕೆನಡಾದಲ್ಲಿ ಖಲಿಸ್ತಾನಿಗಳು ಬಲಿಷ್ಟವಾಗಿ ಬೆಳೆದಿದ್ದಾರೆ. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬಂತೆ ಕೆನಡಾಗೆ(Canada ) ಅಲ್ಲಿರೋ ಖಲಿಸ್ತಾನಿಗಳಿಗೆ ಪಕ್ಕದ ಪಾಕಿಸ್ತಾನ್ ಸಪೋರ್ಟ್ ಮಾಡ್ತಿದೆಯಂತೆ. ಕೆನಡಾ ವಿರುದ್ಧ ಭಾರತ(India) ಹಗೆ ಸಾಧಿಸುತ್ತಿದ್ರೆ. ಇತ್ತ ಪಾಕಿಸ್ತಾನ ಡೈರೆಕ್ಟಾಗೇ ಕೆನಡಾಗೆ ಸಪೋರ್ಟ್ ಮಾಡ್ತಿದೆ. ಹಾಗಾದ್ರೆ ಈ ಎರಡು ದೇಶಗಳ ವಿರುದ್ಧ ಭಾರತ ಯುದ್ಧ ಸಾರಿದ್ರೆ, ಅದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ ? ಭಾರತದ ವಿರೊಧ ಕಟ್ಟಿಕೊಳ್ಳುತ್ತಾ ಹೋದರೆ ಖಲಿಸ್ತಾನಿಗಳ ಬೆಂಬಲ ಪಡೆದ ಕೆನಡಾ ಖಾಲಿಸ್ತಾನ ಆಗುವ ದಿನಗಳು ದೂರವಿಲ್ಲ. ಜೊತೆಗೆ ಜಾಗತಕ ಮಟ್ಟದಲ್ಲಿ ಮುಖಭಂಗ ಅನುಭವಿಸುವುದೂ ಪಕ್ಕಾ. 

ಇದನ್ನೂ ವೀಕ್ಷಿಸಿ:  ಎನ್.ಡಿ.ಎ. ಮೈತ್ರಿಕೂಟ ಸೇರಿದ ಜೆಡಿಎಸ್.. ರಾಜ್ಯದಲ್ಲಿ ಹೊಸ ಆಟ ಶುರು..!