ಎನ್.ಡಿ.ಎ. ಮೈತ್ರಿಕೂಟ ಸೇರಿದ ಜೆಡಿಎಸ್.. ರಾಜ್ಯದಲ್ಲಿ ಹೊಸ ಆಟ ಶುರು..!
ಲೋಕಯುದ್ಧಕ್ಕೆ ಮಹಾ ಮೈತ್ರಿ ಫಿಕ್ಸ್..ಹೊಸ ಆಟವೂ ಫಿಕ್ಸ್..!
ಕಮಲ ಮುಡಿದ ತೆನೆ ಹೊತ್ತ ಮಹಿಳೆ..!ಯಾರಿಗೆಷ್ಟು ಸೀಟು..?
40 ನಿಮಿಷಗಳ ಸೀಕ್ರೆಟ್ ಸಭೆಯಲ್ಲಿ ಚರ್ಚೆಯಾಗಿದ್ದೇನು..?
20ರ ಟಾರ್ಗೆಟ್ ಫಿಕ್ಸ್ ಮಾಡಿ ಮುನ್ನುಗ್ತಾ ಇರೋ ಕಾಂಗ್ರೆಸ್‌ನ(Congress) ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಲು ಫಿಕ್ಸ್ ಆಗಿದೆ ಬಿಜೆಪಿ-ಜೆಡಿಎಸ್ (JDS) ಮೈತ್ರಿ. ಇದು ಶತ್ರುವಿನ ಶತ್ರು ಮಿತ್ರ ಅನ್ನೋ ಸೂತ್ರದಡಿ ಹೆಣೆಯಲಾಗಿರೋ ರೋಚಕ ಮೈತ್ರಿ ರಣವ್ಯೂಹ. 2006ರ ನಂತರ ಮತ್ತೆ ಬಿಜೆಪಿ(BJP) ಜೊತೆ ದೋಸ್ತಿ ಮಾಡ್ಕೊಂಡಿರೋ ದಳಪತಿಗಳು ಲೋಕಸಭಾ ಚುನಾವಣೆಯನ್ನು(Lokdabha) ಮೈತ್ರಿಕೂಟದೊಂದಿಗೆ ಎದುರಿಸಲು ರೆಡಿಯಾಗಿದ್ದಾರೆ. ದೆಹಲಿಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾತುಕತೆ ನಡೆದಿದ್ದು, ದಳಪತಿಗಳು ಅಧಿಕೃತವಾಗಿ ಎನ್.ಡಿ.ಎ ಮೈತ್ರಿಕೂಟ ಸೇರಿದ್ದಾರೆ. ಲೋಕಸಭಾ ಚುನಾವಣೆಯನ್ನು ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಎದುರಿಸಲಿವೆ ಅನ್ನೋ ಸುದ್ದಿಯನ್ನು ಎಲ್ಲರಿಗಿಂತ ಮೊದ್ಲು ಬ್ರೇಕ್ ಮಾಡಿದ್ದು ರಾಜ್ಯದ ಪೊಲಿಟಿಕಲ್ ಹೆಡ್ ಕ್ವಾರ್ಟರ್ ಖ್ಯಾತಿಯ ನಿಮ್ಮ ನೆಚ್ಚಿನ ಏಷ್ಯಾನೆಟ್ ಸುವರ್ಣ ನ್ಯೂಸ್. ಆ ಸುದ್ದಿ ಈಗ ನಿಜವಾಗಿದೆ. ಮೈತ್ರಿ ಮಾತುಕತೆಯಾಗಿ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ದಳಪತಿ ಕುಮಾರಸ್ವಾಮಿ, ಶುಕ್ರವಾರ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಇನ್ನು ಬಿಜೆಪಿ-ಜೆಡಿಎಸ್ ಮಹಾಮೈತ್ರಿಯ(Alliance) ಬಗ್ಗೆ ಟ್ವೀಟ್ ಮಾಡಿರೋ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಜೆಡಿಎಸ್ಸನ್ನು ಎನ್.ಡಿ.ಎ ಮೈತ್ರಿಕೂಟಕ್ಕೆ ಸ್ವಾಗತಿಸಿದ್ದಾರೆ.
ಇದನ್ನೂ ವೀಕ್ಷಿಸಿ: ಉಂಡ ಮನೆಗೆ ಕನ್ನ ಬಗೆದ ಕಿರಾತಕರು..! 30 ಸಾವಿರ ಹಣಕ್ಕಾಗಿ ಧಣಿಯನ್ನೇ ಕೊಂದ ಪಾಪಿಗಳು !