Asianet Suvarna News Asianet Suvarna News

ತ್ರಿಶತ್ರು ಸಂಹಾರಕ್ಕೆ ಸಿದ್ಧವಾಗಿದೆ ಭಾರತದ ಅಸ್ತ್ರ! ಶತ್ರುವಿನ ಶತ್ರು ಜೊತೆ ಪಾಕ್ ಮಹಾಮೈತ್ರಿ!

ಕೆನಡಾ ಭಾರತ ವಿರೋಧಕ್ಕೆ ಸಾಥ್ ಕೊಟ್ಟ ಪಾಕ್!
ಖಲಿಸ್ತಾನಿ ಉಗ್ರರ ಜೊತೆ ಪಾತಕಿಗಳ ಮೆರದಾಟ!
ತ್ರಿಶತ್ರುಗಳ ವಿರುದ್ಧ ಹೋರಾಡಬೇಕಿದೆ ಭಾರತ!

ದಿನದಿಂದ ದಿನಕ್ಕೆ ಕೆನಡಾ ಪ್ರಧಾನಿಯ ಹುಚ್ಚು ಹೆಚ್ಚಾಗ್ತಾ ಇರೋದು, ಸ್ಪಷ್ಟವಾಗಿ ಕಾಣಿಸ್ತಾ ಇದೆ. ಆ ಹುಚ್ಚಿಗೆ ಚಿಕಿತ್ಸೆ ಕೊಡೋರು ಯಾರೂ ಕಾಣ್ತಾ ಇಲ್ಲ. ಆದ್ರೆ, ಮೊದಲೇ ಹುಚ್ಚು ಹಿಡಿದಿರೋ  ಟ್ರುಡೋಗೆ ಮತ್ತಷ್ಟು ಹುಚ್ಚು ಹೆಚ್ಚಾಗೋ ಹಾಗೆ, ಪಾಪಿ ದೇಶ ಪಾಕಿಸ್ತಾನ(Pakistan) ಮಾಡ್ತಾ ಇದೆ. ಅವನು ಸುಳ್ಳ. ಇವನು ಕಳ್ಳ. ಈ ಇಬ್ಬರೂ ಸೇರಿ ಈಗ ಭಾರತದ ವಿರುದ್ಧ ದೊಡ್ಡ ಮಟ್ಟದಲ್ಲೇ ಮಸಲತ್ತು ಮಾಡ್ತಾ ಇರೋದು, ಈಗ ಜಗಜ್ಜಾಹೀರಾಗಿದೆ. ಭಾರತ (India)ಈಗಿಂದ ಮತ್ತಷ್ಟು ದಿಟ್ಟವಾಗಿ, ಸೂಕ್ಷ್ಮವಾಗಿ ಹೆಜ್ಜೆ ಇಡ್ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆನಡಾದಲ್ಲಿ(Canada) ಭಾರತಕ್ಕೆ ಬೇಕಾಗಿದ್ದ ಉಗ್ರನೊಬ್ಬನ ಕಗ್ಗೊಲೆಯಾಗುತ್ತೆ. ಆ ಕೊಲೆಯ ಹಿಂದೆ ಭಾರತದ ಕೈವಾಡ ಇದೆ ಅಂತ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ(Justin Trudeau), ಅಲ್ಲಿನ ಸಂಸತ್ತಿನಲ್ಲಿ ಹೇಳ್ತಾನೆ. ಅಯ್ಯ, ನಿನ್ನ ಮಾತಿಗೆ ಏನು ಪುರಾವೆ ಅಂತ ಪ್ರಶ್ನೆ ಮಾಡಿದ್ರೆ, ಸಾಕ್ಷಿ ಗೀಕ್ಷಿ ಇಲ್ಲ, ನಾನ್ ಹೇಳ್ತೀನಿ, ನೀವ್ ಕೇಳ್ಕೊಳಿ ಅಂತ ಅಂತಾನೆ.. ಇಂಥಾ ಬುದ್ಧಿಹೀನ ಪ್ರಧಾನಿಯ ವಿರುದ್ಧ ಕೆನಡಾ ಜನಕ್ಕೂ ಆಕ್ರೋಶ ಹೆಚ್ಚಾಗಿದೆ.. ಅಷ್ಟೇ ಅಲ್ಲ, ಕೆನಡಾದಲ್ಲಿರೋ ಪ್ರತಿಪಕ್ಷಗಳು, ಸಾಕ್ಷಿ ಇಲ್ಲದೆ ಭಾರತದ ವಿರುದ್ಧ ಆರೋಪ ಮಾಡ್ತಿರೋದಕ್ಕೆ, ಬಾಯಿಗೆ ಬಂದ ಹಾಗೆ ಟೀಕೆ ಮಾಡ್ತಿದ್ದಾವೆ.. ಆದ್ರೆ ಟ್ರುಡೊ ಕಿವಿಗೆ ಕೇಳಿಸ್ತಾ ಇರೋದು, ಪಾಕಿಸ್ತಾನಿಗಳು, ಖಲಿಸ್ತಾನಿಗಳು ಹೇಳ್ತಾ ಇರೋ ಕಟ್ಟುಕತೆಗಳು ಮಾತ್ರ. ಟ್ರುಡೊ ಭಾರತದ ವಿರುದ್ಧ ಯಾಕಾಗಿ ವಿಷ ಕಾರ್ತಾ ಇದಾನೆ ಅನ್ನೋದಕ್ಕೆ ಅತಿಮುಖ್ಯವಾದ, ಪ್ರಬಲವಾದ ಕಾರಣ ಇದೆ. 

ಇದನ್ನೂ ವೀಕ್ಷಿಸಿ:  ಮಹಾಲಕ್ಷ್ಮಿ ಲೇಔಟ್ ಸಂಭ್ರಮ: ಘಮಘಮ ಖಾದ್ಯಗಳು..ಖಾದ್ಯಪ್ರಿಯರು ಫುಲ್‌ ಖುಷ್‌