Bihar Politics: ನಿತೀಶ್ ನಡೆಯಿಂದ ಕಂಗಾಲಾಯ್ತು ಆರ್‌ಜೆಡಿ..! ಹೇಗಿತ್ತು ಜಂಪಿಂಗ್ ಸ್ಟಾರ್ ಪೊಲಿಟಿಕಲ್ ಗೇಮ್..?
ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳೂ ಸಿದ್ಧವಾಗ್ತಾ ಇರೋ ಸಮಯದಲ್ಲೇ ಬಿಹಾರ ರಾಜಕೀಯ ರಂಗೇರಿದೆ. ನಿತೀಶ್ ಕುಮಾರ್ ನಡೆ ಐ ಎನ್ ಡಿ ಐ ಎ ಒಕ್ಕೂಟಕ್ಕೆ ಬಿಗ್ ಶಾಕ್ ನೀಡಿದೆ. ಹಳೇ ದೋಸ್ತಿ ಜತೆ JDU ಸರ್ಕಾರ ರಚನೆ ಫಿಕ್ಸ್ ಆಗಿದೆ. ಬೆಳಗ್ಗೆ ರಾಜೀನಾಮೆ ಸಂಜೆ ಪ್ರಮಾಣವಚನ ಎಂಬ ಪೊಲಿಟಿಕಲ್ ಹೈಡ್ರಾಮಾಕ್ಕೆ ಬಿಹಾರ ಸಾಕ್ಷಿ ಆಗಿದೆ.
ಬಿಹಾರ ರಾಜಕೀಯದಲ್ಲಿ ಮಹತ್ವದ ಟ್ವಿಸ್ಟ್ ಪಡೆದಿದೆ. ಲೋಕಸಭೆ(Loksabha)ಹೊತ್ತಲ್ಲೇ RJD, ಕಾಂಗ್ರೆಸ್ಗೆ ನಿತೀಶ್(Nitish Kumar) ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ. ಮಹಾಘಟಬಂಧನ ಬಿಡಿಸಿಕೊಂಡು ಹಳೇ ದೋಸ್ತಿಗೆ ಜೈಕಾರ ಹಾಕಿದ್ದಾರೆ.. ಪಟ್ನಾದಲ್ಲಿ ನಡೆದಿದ್ದ ಮಹತ್ವದ ಸಭೆಯಲ್ಲಿ ಸರ್ಕಾರ ರಚನೆಗೆ ಬಿಜೆಪಿ(BJP) ಒಪ್ಪಿಗೆ ಸೂಚಿಸಿದೆ. ಬಿಹಾರ(Bihar) ಎನ್ಡಿಎ ಮಿತ್ರಪಕ್ಷಗಳ ಜೊತೆ ಅಮಿತ್ ಶಾ ನಡೆಸಿದ ಚರ್ಚೆಯೂ ಸಕ್ಸಸ್ ಆಗಿದೆ. ರಾಜಕೀಯದಲ್ಲಿ ಏನು ಬೇಕಾದ್ರೂ ಆಗಬಹುದು ಅನ್ನೋದಕ್ಕೆ ಬಿಹಾರದ ಹೈಡ್ರಾಮಾವಾ ಸಾಕ್ಷಿ. ನಿತೀಶ್ ಕುಮಾರ್ ಅವರು ರಾಜಕೀಯದಲ್ಲಿ ಹೊಸ ಬಟ್ಟೆ ಇದ್ದಂತೆ. ಬಣ್ಣ ಬಿಡುತ್ತಲೇ ಇರುತ್ತೆ. ಬಹುಷಃ ನಿತೀಶ್ ಕುಮಾರ್ ಅವರು ಮೈತ್ರಿ ಬದಲಿಸಿದಷ್ಟು ಇನ್ಯಾರೂ ಬದಲಿಸಿರೋಕೆ ಸಾಧ್ಯವೆ ಇಲ್ಲ. ಯಾವಾಗ ಯಾರ ಜೊತೆಗೆ ನಿಲ್ತಾರೆ ಅನ್ನೋದೇ ಊಹಿಸಲಾಗದ ನಡೆ. ರಾಜಕೀಯ ಕ್ಷಿಪ್ರಕ್ರಾಂತಿಯ ನೆಲ ಬಿಹಾರದ ರಾಜಕಾರಣದಲ್ಲಿ ಮತ್ತೆ ಬಿರುಗಾಳಿ ಬೀಸಿದೆ. ಇದು ಬಿರುಗಾಳಿಯಷ್ಟೇ ಅಲ್ಲ, ಸುನಾಮಿ.. I.N.D.I.A ಮೈತ್ರಿಕೂಟದ ಸೂತ್ರಧಾರ, ಪ್ರಧಾನಿ ಮೋದಿ ವಿರುದ್ಧ ದಂಡು ಕಟ್ಟಿ ಯುದ್ಧಕ್ಕೆ ನಿಂತಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇದ್ದಕ್ಕಿದ್ದಂತೆ ತಮ್ಮ ವರಸೆ ಬದಲಿಸಿದ್ದಾರೆ. ಬಿಹಾರಿ ಬಾಬುವಿನ ಹೊಸ ವರಸೆ ನೋಡಿ ಬಿಹಾರಕ್ಕೆ ಬಿಹಾರವೇ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. ಆರ್ ಜೆ ಡಿ ಸಖ್ಯದಿಂದ ದೂರವಾಗಿರೋ ನಿತೀಶ್ ಕುಮಾರ್ ಇಂಡಿಯಾ ಒಕ್ಕೂಟಕ್ಕೆ ಸಿಡಿಲು ಬಡಿವಂತೆ ಮಾಡಿ ಬಿಟ್ಟಿದ್ದಾರೆ.
ಇದನ್ನೂ ವೀಕ್ಷಿಸಿ: ಜಾತಿ ಗಣತಿ ವರದಿ ಜಾರಿಯ ಗ್ಯಾರಂಟಿ ನೀಡಿದ ಸಿಎಂ..! ಭಾಷಣದುದ್ದಕ್ಕೂ RSS-BJP ವಿರುದ್ಧ ಗುಡುಗಿದ ಸಿದ್ದು