ಜಾತಿ ಗಣತಿ ವರದಿ ಜಾರಿಯ ಗ್ಯಾರಂಟಿ ನೀಡಿದ ಸಿಎಂ..! ಭಾಷಣದುದ್ದಕ್ಕೂ RSS-BJP ವಿರುದ್ಧ ಗುಡುಗಿದ ಸಿದ್ದು

ಸ್ವಪಕ್ಷೀಯ ವಿರೋಧಿಗಳಿಗೂ ಸಿದ್ದರಾಮಯ್ಯ ಸಂದೇಶ
ಕಾಂತರಾಜ್ ವರದಿ ಜಾರಿಯ ಗ್ಯಾರಂಟಿ ನೀಡಿಸಿ ಸಿಎಂ ಸಿದ್ದು 
ಶೋಷಿತರನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆಯಂತೆ BJP 

First Published Jan 29, 2024, 2:54 PM IST | Last Updated Jan 29, 2024, 2:54 PM IST

ಚಿತ್ರದುರ್ಗದಲ್ಲಿ ಶೋಷಿತರ ಜಾಗೃತಿ ಸಮಾವೇಶ (Shoshitara Jagruthi Samavesha)ನಡೆಯಿತು. ಈ ಸಮಾವೇಶದ ಕೇಂದ್ರಬಿಂದುವಾಗಿದ್ದರು ಸಿಎಂ ಸಿದ್ದರಾಮಯ್ಯನವರು. ಈ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯವರು(Siddaramaiah) ಮಾಡಿದ ಭಾಷಣ ತುಂಬಾನೇ ಹೈಲೈಟ್ ಆಗಿದೆ. ಹಿಂದುಳಿದ ವರ್ಗಗಳ ಒಕ್ಕೂಟದಿಂದ ವತಿಯಿಂದ, ಚಿತ್ರದುರ್ಗದಲ್ಲಿ(Chitradurga) ಶೋಷಿತರ ಜಾಗೃತಿ ಸಮಾವೇಶ ನಡೆಯಿತು. ಈ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ಸಮುದಾಯದವರು ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಸಿಎಂ ಮತ್ತು ಡಿಸಿಎಂ ಸೇರಿದಂತೆ, ಕಾಂಗ್ರೆಸ್(Congress) ಪಕ್ಷದ ಇನ್ನು ಅನೇಕ ಹಿಂದುಳಿದ ಸಮುದಾಯಕ ನಾಯಕರು, ಸಚಿವ ಮತ್ತು ಶಾಸಕರುಗಳು ಭಾಗಿಯಾಗಿದ್ದರು. ಈ ಕಾರ್ಯಕ್ರಮದ ಪ್ರಮುಖ ಉದ್ದೇಶ, ಕಾಂತರಾಜ್ ವರದಿ ಕುರಿತಾಗಿತ್ತು. ಕೆಲ ದಿನಗಳಿಂದ ರಾಜ್ಯದಲ್ಲಿ ಕಾಂತರಾಜ್ ವರದಿ(Kanthraj report) ಕುರಿತು ಚರ್ಚೆ ನಡೆದಿತ್ತು. ಹಿಂದುಳಿದ ಸಮುದಾಯದ ಜಾತಿ ಗಣತಿ ಕುರಿತಾಗಿರುವ ಈ ವರದಿ, ಅವೈಜ್ಞಾನಿಕ ಎಂದು ಕೆಲವರು ಒತ್ತಿ ಹೇಳುತ್ತಿದ್ದರು. ಹೀಗೆ ಕೇಳಿದವರಲ್ಲಿ ಕಾಂಗ್ರೆಸ್ನವರೂ ಇದ್ದರು. ಹಾಗೆನೇ ಇನ್ನು ಕೆಲವರು ಕಡೆಗಳಲ್ಲಿ ಈ ವರದಿಯನ್ನು ಜಾರಿಗೊಳಿಸಬೇಕೆಂಬ ಕೂಗು ಕೇಳಿ ಬರುತ್ತಿತ್ತು. ಕಾಂತರಾಜ್ ವರದಿ ಜಾರಿಗೊಳಿಸುವಂತೆ, ಸರ್ಕಾರವನ್ನು ಒತ್ತಾಯಿಸಲೆಂದೇ ಇಂದು ಈ ಸಮಾವೇಶ ನಡೆದಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಕೆಎಂ ರಾಚಂದ್ರಪ್ಪವನವರು. ತಮ್ಮ ಭಾಷಣದಲ್ಲಿ ಇದನ್ನೇ ಹೇಳಿದರು.  

ಇದನ್ನೂ ವೀಕ್ಷಿಸಿ:  Siddaramaiah: ಚುನಾವಣೆ ಬರುತ್ತಿರುವ ಹಿನ್ನೆಲೆ ಬಿಜೆಪಿಯವರು ಹೀಗೆಲ್ಲಾ ಮಾಡುತ್ತಿದ್ದಾರೆ: ಸಿದ್ದರಾಮಯ್ಯ

Video Top Stories