
‘ನೌಕಾಪಡೆ ಅಖಾಡಕ್ಕಿಳಿದರೆ ಪಾಕ್ 4 ಭಾಗ..' ನೆರೆಯ ದೇಶಕ್ಕೆ ರಾಜನಾಥ್ ಸಿಂಗ್ ಖಡಕ್ ವಾರ್ನಿಂಗ್!
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆಪರೇಷನ್ ಸಿಂದೂರ್ ವೇಳೆ ನೌಕಾಪಡೆ ಕಣಕ್ಕಿಳಿದಿದ್ದರೆ ಪಾಕಿಸ್ತಾನ ನಾಲ್ಕು ಭಾಗವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಬೆಂಗಳೂರು (ಮೇ.31): ಪಾಕಿಸ್ತಾನಕ್ಕೆ ಮತ್ತೊಂದು ಖಡಕ್ ಎಚ್ಚರಿಕೆ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಾಗೇನಾದರೂ ಆಪರೇಷನ್ ಸಿಂದೂರ್ ವೇಳೆ ನೌಕಾಪಡೆ ಕಣಕ್ಕೆ ಇಳಿದಿದ್ದಲ್ಲಿ, ಪಾಕಿಸ್ತಾನ ಖಂಡಿತವಾಗಿ ನಾಲ್ಕು ಭಾಗ ಆಗುತ್ತಿತ್ತು ಎಂದು ಹೇಳಿದ್ದಾರೆ.
ವಿಕ್ರಾಂತ್ ನೌಕೆಯಲ್ಲಿ ನಿಂತು ಪಾಕಿಸ್ತಾನ ವಿರುದ್ಧ ಅವರು ಗುಡುಗಿದ್ದಾರೆ. ‘ಇದು ತುಂಬಾ ಆಸಕ್ತಿದಾಯಕ ವಿಷಯ, ಪಾಕಿಸ್ತಾನಕ್ಕೆ ನಿಮ್ಮ ಧೈರ್ಯದ ಬಗ್ಗೆ ಚೆನ್ನಾಗಿ ತಿಳಿದಿದೆ. ಪಾಕಿಸ್ತಾನಕ್ಕೆ ತಿಳಿದಿದೆ, ಭಾರತೀಯ ನೌಕಾಪಡೆ , ಹುರುಪು, ಉತ್ಸಾಹದಿಂದ ಕೆಲಸ ಮಾಡುತ್ತದೆ. 1971ರಲ್ಲಿ ಭಾರತೀಯ ನೌಕಾಪಡೆಯು ಶಕ್ತಿ ಅದಕ್ಕೆ ಸಾಕ್ಷಿಯಾಗಿದೆ' ಎಂದು ಹೇಳಿದ್ದಾರೆ.
ಅಂದು ಒಂದು ಭಾಗವಾಗಿದ್ದ ಪಾಕಿಸ್ತಾನ, 2 ಭಾಗವಾಯಿತು. ಹಾಗೇನಾದರೂ ಆಪರೇಷನ್ ಸಿಂದೂರದಲ್ಲಿ ಭಾರತೀಯ ನೌಕಾಪಡೆ ಫಾರ್ಮ್‌ನಲ್ಲಿ ಬಂದಿದ್ದರೆ, ಪಾಕಿಸ್ತಾನ 4 ಭಾಗ ಆಗಿರುತ್ತಿತ್ತು ಎಂದಿದ್ದಾರೆ.