ನ್ಯೂಸ್ ಅವರ್; ಡಿಕೆಶಿ ಆಪ್ತರಿಗೆ ಐಟಿ ಬಿಸಿ, ಜನರಿಗೆ ಎಲ್‌ಪಿಜಿ ಬಿಸಿ ಬಿಸಿ!

* ಮತ್ತೆ ಎಲ್‌ಪಿಜಿ ದರ ಏರಿಕೆ... ಸಾವಿರ ರೂ. ಫಿಕ್ಸ್!
* ಉಪ ಸಮರ ಎದುರಿನಲ್ಲೇ ಡಿಕೆಶಿ ಆಪ್ತರ ಮೇಲೆ ಐಟಿ ದಾಳಿ
* ಆರ್ಯನ್ ಖಾನ್ ಗೆ ಕೊನೆಗು ಜಾಮೀನು ಸಿಕ್ತು
* ಪ್ರಚಾರ ಮುಗಿದರೂ ಮುಗಿಯದ ವಾಕ್ ಸಮರ

Share this Video
  • FB
  • Linkdin
  • Whatsapp

ಬೆಂಗಳೂರು(ಅ. 28) ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ (Karnataka By Poll) ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಆದರೆ ನಾಯಕರ ಮಾತಿನ ಸಮರ ಇನ್ನೂ ನಿಂತಿಲ್ಲ. ಕಂಬಳಿ ಕದನ ಮತ್ತೆ ಹೊತ್ತಿಕೊಂಡಿದೆ. ಇದರ ನಡುವೆ ಸಿದ್ದರಾಮಯ್ಯ (Siddaramaiah) ಹೊಸ ಬಾಂಬ್ ಸಿಡಿಸಿದ್ದಾರೆ. ಗೋವಾ(Goa) ದಿಂದ ಬಂದ ಇಪ್ಪತ್ತಕ್ಕೂ ಅಧಿಕ ಐಟಿ ಅಧಿಕಾರಿಗಳ ತಂಡ ಧಾರವಾಡದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಆಪ್ತರ ಮನೆ ಮೇಲೆ ದಾಳಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಜೆಂಟರಾಗಿ ಕೆಲಸ ಮಾಡುವ ಸ್ಥಿತಿ ಬಂದಿಲ್ಲ; ಗುಡುಗಿದ ದೇವೇಗೌಡ

ಇಂಧನ ಮತ್ತು ಅಡುಗೆ ಅನಿಲ(LPG) ದರ ನಿರಂತರ ಏರಿಕೆಯಾಗುತ್ತಲೇ ಇದೆ. ನವೆಂಬರ್ ಆರಂಭದಿಂದ ಎಲ್‌ಪಿಜಿ ದರದಲ್ಲಿ ಮತ್ತೊಂದು ಸುತ್ತಿನ ಏರಿಕೆಯಾಗಲಿದೆ ಎನ್ನಲಾಗಿದೆ. ರಾಜ್ಯದಲ್ಲಿ ಈ ಬಾರಿ ಒಂದು ವಾರ ಕನ್ನಡ ರಾಜ್ಯೋತ್ಸವ (Karnataka Rajyotsava) ಆಚರಣೆ ಮಾಡಲಾಗುತ್ತಿದೆ. ಅದ್ಧೂರಿ ಆಚರಣೆಗೆ ಮಾತಾಡ್ ಮಾತಾಡ್ ಕನ್ನಡ ಅಭಿಯಾನದ ಮೂಲಕ ಚಾಲನೆ ನೀಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವ ವಿಶೇಷ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ. ಡ್ರಗ್ಸ್ ಪ್ರಕರಣದಲ್ಲಿ NCB ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಆರ್ಯನ್ ಖಾನ್, ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ 25 ದಿನ ಕಳೆದಿದ್ದಾರೆ. ನಾಳೆ ಆರ್ಯನ್ ಖಾನ್ (Aryan Khan) ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಇಡೀ ದಿನದ ಸುದ್ದಿ News Hour ನಲ್ಲಿ.. 

Related Video