Asianet Suvarna News Asianet Suvarna News

ಏಜೆಂಟ್‌ರಾಗಿ ಕೆಲಸ ಮಾಡುವ ದುಸ್ಥಿತಿ ಬಂದಿಲ್ಲ: ದೇವೇಗೌಡ

*  ಅಭ್ಯರ್ಥಿ ನಾಜಿಯಾ ಅಂಗಡಿ ಪರ ಭರ್ಜರಿ ಪ್ರಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡ
*  ಸಿಂದಗಿ ಉಪಚುನಾವಣೆಯಲ್ಲಿ ನಾವು ತೋರಿಕೆಗಾಗಿ ಚುನಾವಣೆ ಮಾಡುತ್ತಿಲ್ಲ
*  ನಾನು ನಿಮ್ಮ ಮನೆಯ ಮಗಳು ಜೆಡಿಎಸ್‌ಗೆ ಮತ ನೀಡುವ ಮೂಲಕ ನನ್ನನ್ನು ಚುನಾಯಿಸಿ: ನಾಜಿಯಾ 
 

Former PM HD Devegowda Talks Over Sindagi Byelection grg
Author
Bengaluru, First Published Oct 28, 2021, 2:27 PM IST

ಸಿಂದಗಿ(ಅ.28):  ಸಿಂದಗಿ ಉಪಚುನಾವಣೆಯ ಬಹಿರಂಗ ಪ್ರಚಾರ ಕೊನೆಯ ದಿನ ಬುಧವಾರ ಪಟ್ಟಣದ ಜೆಡಿಎಸ್‌ ಪಕ್ಷದ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಭರ್ಜರಿ ರೋಡ್‌ ಶೋ ನಡೆಯಿತು.

ಬೈಕ್‌ ರ‍್ಯಾಲಿಯು ಸಂಗಮೇಶ್ವರ ದೇವಸ್ಥಾನದಿಂದ ಪ್ರಾರಂಭವಾಯಿತು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು(HD Devegowda) ಸ್ಕೂಟಿ ಮೇಲೆ ಕುಳಿತು ಬೈಕ್‌ ರ‍್ಯಾಲಿಯಲ್ಲಿ(Bike Rally) ಭಾಗವಹಿಸುವ ಮೂಲಕ ಚಾಲನೆ ನೀಡಿದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡರು ಮಾತನಾಡಿ, ಸಿಂದಗಿ(Sindagi) ಉಪಚುನಾವಣೆಯಲ್ಲಿ(Byelection) ನಾವು ತೋರಿಕೆಗಾಗಿ ಚುನಾವಣೆ ಮಾಡುತ್ತಿಲ್ಲ. ಯಾವ ಪಕ್ಷದ ಏಜೆಂಟ್‌ರಾಗಿ ಕೆಲಸ ಮಾಡುವ ದುಸ್ಥಿತಿ ಬಂದಿಲ್ಲ. ನಾವು ಸಮರ್ಥರಿದ್ದೇವೆ. ನಾವು ನಮ್ಮ 40 ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಮತದಾರರ(Voters) ಮನೆಗೆ ಹೋಗಿ ಅವರ ಮುಂದಿಡುತ್ತೇವೆ. ಮತಯಾಚನೆ ಮಾಡುತ್ತೇವೆ. ಪಕ್ಷದ ಅಭ್ಯರ್ಥಿ ನಾಜಿಯಾ ಅಂಗಡಿ ಅವರನ್ನು ಗೆಲ್ಲಿಸುತ್ತೇವೆ. ಆದ್ದರಿಂದ ಜೆಡಿಎಸ್‌(JDS) ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.

ಬೈಎಲೆಕ್ಷನ್‌ ಅಖಾಡ: ಕೊನೆ ದಿನದ ಪ್ರಚಾರದಲ್ಲಿ ಹೇಗಿತ್ತು ರಣಕಲಿಗಳ ಮಾತಿನ ಯುದ್ಧ?

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಮಾತನಾಡಿ, ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ನಮ್ಮ ಪಕ್ಷದಿಂದ ಬೆಳೆದವರು ಈ ಪಕ್ಷ ಮುಗಿತು ಅಂತಾರೆ. ಆದರೆ ಜನರ ಪ್ರೀತಿ ವಿಶ್ವಾಸ ಇರುವವರೆಗೆ ಜೆಡಿಎಸ್‌ ಪಕ್ಷ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. 2023ರ ಚುನಾವಣೆಯಲ್ಲಿ(Election) ಸ್ವತಂತ್ರವಾಗಿ ಸರ್ಕಾರ ರಚಿಸಲು ಜೆಡಿಎಸ್‌ಗೆ ಒಂದು ಬಾರಿ ಅವಕಾಶ ನೀಡಿ ಎಂದು ಮನವಿ ಮಾಡಿದರು.

ಆರ್ಥಿಕ ಸಂಕಷ್ಟದ ಸಮಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ(Chief Ministerv) ಸಾಲಮನ್ನಾ(Loan Waiver) ಮಾಡಿದೆ. ಅದೇ ರೀತಿ ಈ ಬಾರಿಯ ಉಪ ಚುನಾವಣೆಯಲ್ಲಿ(Byelection) ಜೆಡಿಎಸ್‌ ಪಕ್ಷಕ್ಕೆ ಮತ ಹಾಕಿ ಶಕ್ತಿ ನೀಡಿ. ಮುಂಬರುವ 2023ರ ಸಾರ್ವತ್ರಿಕ ಚುನಾವಣೆಯಲ್ಲಿ(General Election) ಜೆಡಿಎಸ್‌ ಪಕ್ಷಕ್ಕೆ ಬಹುಮತ(Majority) ನೀಡಿ ಸ್ವತಂತ್ರ ಸರ್ಕಾರ(Government) ರಚಿಸಲು ಅವಕಾಶ ನೀಡಿದರೆ, ಪ್ರತಿ ಕುಟುಂಬಕ್ಕೆ ಒಂದು ಸೂರು, ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಉಚಿತ ಗುಣಮಟ್ಟದ ಶಿಕ್ಷಣ(Free Education), ರಾಜ್ಯದ ಎಲ್ಲಾ ಜನರಿಗೆ ವಿಶೇಷ ಆರೋಗ್ಯ ಕಾರ್ಯಕ್ರಮ, ರಾಜ್ಯದ(Karnataka) ರೈತರ(Farmers) ಅಭಿವೃದ್ಧಿಗೆ ವಿಶೇಷ ಯೋಜನೆ, ಪ್ರತಿ ಯುವಕರಿಗೂ ಉದ್ಯೋಗ(Job) ನೀಡುವ ಮಹತ್ವದ ಕಾರ್ಯಕ್ರಮಗಳನ್ನ ಅನುಷ್ಠಾನ ಮಾಡುತ್ತೇನೆ. ಇವೆಲ್ಲ ಯೋಜನೆಗಳನ್ನು ಸೇರಿದಂತೆ ಪಂಚರತ್ನ ಯೋಜನೆ ರೂಪಿಸಲಾಗುವುದು. ಒಂದು ವೇಳೆ ನನ್ನ ಅಧಿಕಾರದಲ್ಲಿ ಈ ಯೋಜನೆಗಳನ್ನು ಜಾರಿಗೆ ತರದೇ ಹೋದರೆ ನಾನು ಎಂದು ನಿಮ್ಮ ಹತ್ತಿರ ಮತಯಾಚನೆಗೆ ಬರುವುದಿಲ್ಲ ಎಂದು ವಾಗ್ದಾನ ಮಾಡಿದರು.

ಜೆಡಿಎಸ್‌ ಪಕ್ಷದ ಅಭ್ಯರ್ಥಿ ನಾಜಿಯಾ ಅಂಗಡಿ(Naziya Angadi) ಮಾತನಾಡಿ, ನಾನು ನಿಮ್ಮ ಮನೆಯ ಮಗಳು ಜೆಡಿಎಸ್‌ ಪಕ್ಷಕ್ಕೆ ಮತ ನೀಡುವ ಮೂಲಕ ನನ್ನನ್ನು ಚುನಾಯಿಸಿ. ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಮನವಿ ಮಾಡಿಕೊಂಡರು. ಶಾಸಕ ಬಂಡೆಪ್ಪ ಕಾಂಶಪೂರ, ಎಂ.ಎಸ್‌. ಪಾಟೀಲ ಹಲಸಂಗಿ, ಅರವಿಂದ ಹಂಗರಗಿ, ಗುರುರಾಜಗೌಡ ಪಾಟೀಲ ಚಾಂದಕವಠೆ, ಗೋಲ್ಲಾಳಪ್ಪಗೌಡ ಫಾಟೀಲ ಗೋಲಗೇರಿ, ಪ್ರಕಾಶ ಹಿರೇಕುರಬರ, ಸಿದ್ದನಗೌಡ ಪಾಟೀಲ ಸೇರಿದಂತೆ ಇತರರು ರೋಡಶೋದಲ್ಲಿ ಭಾಗವಹಿಸಿದ್ದರು.

ಬೈ ಎಲೆಕ್ಷನ್‌ನಲ್ಲಿ ಕಂಬಳಿ ಜಪಾಪಟಿ: ಸಿಟಿ ರವಿಗೆ ಸಿದ್ದು ಗುದ್ದು, ಬುಸ್‌ ಎಂದ ಎಂಟಿಬಿ

ಹಾನಗಲ್‌ ಕ್ಷೇತ್ರದಲ್ಲಿರುವ ಅಭ್ಯರ್ಥಿಗಳು: 

ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು: ನಿಯಾಜ್ ಶೇಖ್ (ಜೆಡಿಎಶ್), ಶಿವರಾಜ ಸಜ್ಜನರ (ಬಿಜೆಪಿ), ಶ್ರೀನಿವಾಸ ಮಾನೆ (ಕಾಂಗ್ರೆಸ್), ಉಡಚಪ್ಪ ಉದ್ದನಕಾಲ (ಕರ್ನಾಟಕ ರಾಷ್ಟ್ರ ಸಮಿತಿ), ಫಕ್ಕೀರಗೌಡ ಶಂಕರಗೌಡ ಗಾಜಿಗೌಡ್ರ (ರೈತ ಭಾರತ ಪಕ್ಷ), ತಳವಾರ ಶಿವಕುಮಾರ (ಲೋಕಶಕ್ತಿ ಪಕ್ಷ), ಉಮೇಶ ಕೃಷ್ಣಪ್ಪ ದೈವಜ್ಞ (ಪಕ್ಷೇತರ), ಸಿದ್ದಪ್ಪ ಕಲ್ಲಪ್ಪ ಪೂಜಾರ (ಪಕ್ಷೇತರ), ಎಸ್ಎಸ್.ದೊಡ್ಡ ಲಿಂಗಣ್ಣನವರ (ಪಕ್ಷೇತರ), ಸೋಮಶೇಖರ ಮಹದೇವಪ್ಪ ಕೋತಂಬರಿ (ಪಕ್ಷೇತರ), ಹೊನ್ನಪ್ಪ ಹನುಮಂತಪ್ಪ ಅಕ್ಕಿವಳ್ಳಿ (ಪಕ್ಷೇತರ) 

ಸಿಂದಗಿಯಲ್ಲಿ ಕ್ಷೇತ್ರದಲ್ಲಿರುವ ಅಭ್ಯರ್ಥಿಗಳು: 

ಇನ್ನು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಆರು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಅಶೋಕ ಮನಗೊಳಿ(ಕಾಂಗ್ರೆಸ್‌), ರಮೇಶ್ ಬೂಸನೂರ್(ಬಿಜೆಪಿ), ನಜಿಯಾ ಅಂಗಡಿ(ಜೆಡಿಎಸ್), ಡಾ. ಸುನಿಲ್‌ಕುಮಾರ್‌ ಹೆಬ್ಬಿ(ಕರ್ನಾಟಕ ರಾಷ್ಟ್ರ ಸಮಿತಿ) ಹಾಗೂ ಜಿಲಾನಿ ಗುಡುಸಾಬ್‌ಮುಲ್ಲಾ, ದೀಪಿಕಾ ಎಸ್‌. ಪಡಸಲಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. 

ಹಾನಗಲ್‌ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಅ. 30ರಂದು ಮತದಾನ ನಡೆಯಲಿದ್ದು ನ.2ರಂದು ಫಲಿತಾಂಶ ಹೊರಬೀಳಲಿದೆ. 
 

Follow Us:
Download App:
  • android
  • ios