Narendra Modi: ಮೋದಿ ಜನಪ್ರಿಯತೆ ಹಿಂದಿದೆಯಾ ರಾಮ ರಹಸ್ಯ..? ಉತ್ತರಪಥೇಶ್ವರನಿಗೆ ದಕ್ಷಿಣದಲ್ಲೂ ದಕ್ಕುತ್ತಾ ವಿಜಯಮಾಲೆ..?

ಮೂರು ಸಮೀಕ್ಷೆಗಳು ಹೇಳಿದ ಭವಿಷ್ಯವೇನು ಗೊತ್ತಾ..?
ಮೋದಿ ಪಾಲಿಗೆ ವರವಾದವರು ಆ ‘ಪಂಚ’ ಕಾರಣಗಳು!
ವಿಪಕ್ಷಗಳ ಟೆನ್ಷನ್ ಹೆಚ್ಚಿಸಿದ್ದೇಕೆ ಸಾಲು ಸಾಲು ಸಮೀಕ್ಷೆಗಳು?

Share this Video
  • FB
  • Linkdin
  • Whatsapp

ರಾಷ್ಟ್ರ ರಾಜಕಾರಣ ಈಗ ಮಿಂಚಿನ ವೇಗದಲ್ಲಿ ಬದಲಾಗ್ತಾ ಇದೆ. ಒಂದು ಕಡೆ ಮಹಾಚುನಾವಣೆಗೆ ಪಿಚ್ ರೆಡಿ ಆಗ್ತಾ ಇದ್ರೆ, ಇನ್ನೊಂದು ಕಡೆ ಸೆಂಚುರಿ ಸ್ಟಾರ್‌ಗಳೆಲ್ಲಾ ಶತಕ, ದ್ವಿಶತಕ, ತ್ರಿಶತಕ ಬಾರಿಸೋ ಕನಸು ಕಾಣ್ತಿದ್ದಾರೆ. ಆ ಪೈಕಿ ಪ್ರಧಾನಿ ಮೋದಿ(Narendra Modi), ಚತುರ್ ಶತಕ ಬಾರಿಸೋ ಅತಿ ದೊಡ್ಡ ಕನಸು ಕಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ನಾವೂ ನೀವೆಲ್ಲರೂ ಮತ್ತೊಂದು ಮಹಾ ಚುನಾವಣಾ(Loksabha) ಸಂಗ್ರಾಮಕ್ಕೆ ಸಾಕ್ಷಿಯಾಗಲಿದ್ದೇವೆ. ಆದ್ರೆ, ಈ ಸಂಗ್ರಾಮದಲ್ಲಿ ಗೆಲುವು ತನಗೇ ದಕ್ಕಲಿದೆ ಅನ್ನೋ ಗುಂಗಿನಲ್ಲಿ ಬಿಜೆಪಿ(BJP) ಇದೆ. 2014ರಲ್ಲಿ, 2019ರಲ್ಲಿ, ಎರಡು ಬಾರಿ ಗೆದ್ದಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಗಳ ಜೊತೆಗೆ, ಹೊಸ ದಾಖಲೆಯನ್ನೇ ಸೃಷ್ಟಿಸೋ ಮೂಲಕ, ಮೋದಿ ಪಟ್ಟವೇರಲಿದ್ದಾರೆ ಅನ್ನೋ ಮಾತು, ಮೋದಿ ಪಾಳಯದಿಂದ ಮಾರ್ದನಿಸ್ತಾ ಇದೆ. ಈ ಮಾತು ಸತ್ಯವಾಗೋ ಸಾಧ್ಯತೆ ದಟ್ಟವಾಗಿದೆ ಅಂತ ಸಮೀಕ್ಷೆಗಳು ಹೇಳ್ತಿದ್ದಾವೆ. ಮೋದಿ ಅವರಂತೂ ಈ ಬಾರಿ ಗೆದ್ದೇ ಗೆಲ್ಲುವ ಅಗಾಧ ವಿಶ್ವಾಸದಿಂದ್ದಾರೆ. ಕಳೆದ ಪಂಚರಾಜ್ಯ ಚುನಾವಣೆಗಳ ಫಲಿತಾಂಶದ ಬಳಿಕ, ಮೋದಿ ಪಡೆಗೆ ಇದ್ದ ಅಲ್ಪಸ್ವಲ್ಪ ಚಿಂತೆ ಕೂಡ ದೂರವಾಗಿತ್ತು.. ಕರ್ನಾಟಕ(Karnataka) ಕೈತಪ್ಪಿದಾಗಿನಿಂದಲೂ ಪರಿತಪಿಸುತ್ತಿದ್ದ ಕಮಲ ಪಡೆ, ಪಂಚರಾಜ್ಯಗಳನ್ನ ಗೆದ್ದ ಬಳಿಕ, ಮತ್ತಷ್ಟು ಪುಟಿದೆದ್ದಿತ್ತು.. ಅಲ್ಲಿಂದ ಮುಂದೆ ಮೋದಿ ಸೇನೆ ಹಿಂದಿರುಗಿ ನೋಡಿದ್ದೇ ಇಲ್ಲ.. ಅವರ ಕಣ್ಣಿದ್ದದ್ದು, ಮುಂದೆ ಇದ್ದ ಲೋಕಸಭೆಯ ಮೇಲೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಲವ್‌ನಲ್ಲಿ ಬಿದ್ದ ಫಸ್ಟ್ ರ‍್ಯಾಂಕ್ ಭೂಮಿಕಾ.. ಅವಳ ಕಥೆ ಮುಗಿಸಿ ರೈಲಿಗೆ ತಲೆ ಕೊಟ್ಟ ಪಾಗಲ್‌..!

Related Video