ಮಹಾಯುದ್ಧಕ್ಕೆ ಮೆಗಾ ತಾಲೀಮು..ಮೋದಿ ಹ್ಯಾಟ್ರಿಕ್ ಪಕ್ಕನಾ..? ಲೋಕಯುದ್ಧದ ಮೇಲೆ ಪಂಚ ಕುರುಕ್ಷೇತ್ರದ ಎಫೆಕ್ಟ್ ಏನು..?
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಕೇಸರಿ ಸುನಾಮಿ..!
3 ರಾಜ್ಯ ಗೆದ್ದ ಮೋದಿಗೆ 3ನೇ ಬಾರಿ ದೆಹಲಿ ಪಟ್ಟ ಹತ್ತಿರವಾಯ್ತಾ..?
ಹಿಂದಿ ಹಾರ್ಟ್‌ಲ್ಯಾಂಡ್‌ನಿಂದ ಮೋದಿಗೆ ಸಿಕ್ಕಿದೆ ದೊಡ್ಡ ಸಿಗ್ನಲ್..!
ಪ್ರಧಾನಿ ನರೇಂದ್ರ ಮೋದಿಯವರ ಬಾಯಲ್ಲಿ ಹ್ಯಾಟ್ರಿಕ್ ಮಾತು. 2024ಕ್ಕೆ ಮತ್ತೆ ನಮ್ದೇ ಹವಾ ಅನ್ನೋ ಭವಿಷ್ಯವಾಣಿ. ಪಂಚರಾಜ್ಯ ಕುರುಕ್ಷೇತ್ರಗಳ ಪೈಕಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳು ಬಿಜೆಪಿ(BJP) ವಶವಾಗಿದ ಬೆನ್ನಲ್ಲೇ ಪ್ರಧಾನಿ ಮೋದಿ(Narendra modi), ಹ್ಯಾಟ್ರಿಕ್ ಮಂತ್ರ ಜಪಿಸ್ತಾ ಇದ್ದಾರೆ. ದೆಹಲಿಯ(Delhi) ಬಿಜೆಪಿ ಕೇಂದ್ರ ಕಚೇರಿಯಲ್ಲಿ ಭಾನುವಾರ ಸಂಜೆ ನಡೆದ ವಿಜಯೋತ್ಸವ ಭಾಷಣದಲ್ಲಿ 3 ಎಂದು ಕೈ ಸನ್ನೆ ತೋರಿಸಿ, ಸತತ 3ನೇ ಬಾರಿ ದೆಹಲಿ ಗದ್ದುಗೆ ಏರೋದು ನಾನೇ ಅನ್ನೋ ಸಂದೇಶ ರವಾನಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಪತರಗುಟ್ಟಿ ಹೋಗಿದ್ದ ಕೇಸರಿ ಪಕ್ಷ ಮತ್ತೆ ಮೈಕೊಡವಿ ಎದ್ದು ನಿಂತಿದೆ. ಇಡೀ ದೇಶದ ಗಮನ ಸೆಳೆದಿದ್ದ ಪಂಚರಾಜ್ಯ ಕುರುಕ್ಷೇತ್ರಗಲ್ಲಿ 3 ರಾಜ್ಯಗಳನ್ನು ಗೆದ್ದದ್ದೇ ತಡ, ಬಿಜೆಪಿಯನ್ನ ಹಿಡಿಯೋರೇ ಇಲ್ಲ. ರಾಜ್ಯದ ಬಿಜೆಪಿ ನಾಯಕರಂತೂ ಲೋಕಸಭಾ ಚುನಾವಣೆಯಲ್ಲೂ(Loksabha) ನಮ್ದೇ ಆಟ ಅಂತ ಅಬ್ಬರಿಸ್ತಾ ಇದ್ದಾರೆ. ಬಿಜೆಪಿ ನಾಯಕರಿಗೆ ಇಂಥದ್ದೊಂದು ವಿಶ್ವಾಸ, ಆತ್ಮವಿಶ್ವಾಸ, ಗೆದ್ದೇ ಗೆಲ್ತೇವೆ ಅನ್ನೋ ಭರವಸೆಯನ್ನು ತಂದು ಕೊಟ್ಟಿರೋದು ತ್ರಿವಳಿ ಪರಾಕ್ರಮ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳನ್ನು ವಶಪಡಿಸಿಕೊಂಡಿರೋ ಬಿಜೆಪಿ, ಮಹಾಭಾರತ ಮಹಾಯುದ್ಧಕ್ಕೆ ಇದೇ ದಿಕ್ಸೂಚಿ ಅಂತ ಹೇಳ್ತಾ ಇದೆ. ಮುಂದಿನ ವರ್ಷ ನಡೆಯೋ ಲೋಕಸಭಾ ಚುನಾವಣೆಯಲ್ಲಿ ಮೋದಿ ರಣಾರ್ಭಟದ ಮುಂದೆ ಎದುರಾಳಿಗಳು ಧೂಳೀಪಟವಾಗೋದು ಶತಸಿದ್ಧ ಅನ್ನೋ ಮಾತುಗಳು ಕೇಳಿ ಬರ್ತಿವೆ. ಮಧ್ಯಪ್ರದೇಶವೂ ನಮ್ಮದೇ, ರಾಜಸ್ಥಾನವೂ ನಮ್ಮದೇ, ಛತ್ತೀಸ್’ಗಢವೂ ನಮ್ಮದೇ.. 2024ರ ಮಹಾಭಾರತ ಯುದ್ಧದಲ್ಲೂ ಗೆಲುವು ನಮ್ಮದೇ ಅನ್ನೋ ರಣಘೋಷಣಗಳು ಕೇಸರಿ ಪಾಳೆಯದಿಂದ ಮಾರ್ಧನಿಸ್ತಾ ಇವೆ. ಕೇಸರಿ ಸೈನ್ಯಕ್ಕೆ ಇಂಥದ್ದೊಂದು ಉತ್ಸಾಹ, ರಣೋತ್ಸಾಹ ತಂದು ಕೊಟ್ಟಿರೋದು ಆ ಮೂರು ಗೆಲುವುಗಳು.
ಇದನ್ನೂ ವೀಕ್ಷಿಸಿ: ಸಿಪಿವೈ ಬಾವನನ್ನು ಕೊಂದು ರಾಮಾಪುರ ಕಾಡಿಗೆ ಎಸೆದಿದ್ಯಾರು..? ಕೊಲೆಗೆ ರಿಯಲ್ ಎಸ್ಟೇಟ್ ಕಾರಣವಾಯ್ತಾ..?